ಬೆಂಗಳೂರು: ನಾನೇನು ಬಿಜೆಪಿ ಅಡಿಯಾಳ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಹಾಗೂ ಗುತ್ತಿಗೆದಾರರ ಕಾಮಗಾರಿ ಬಿಲ್ ವಿಳಂಬದ ಕುರಿತು ಪ್ರತಿಕ್ರಿಯಿಸಿರುವ ಎಚ್‍ಡಿಕೆ, ‘ನಾನು ಎಲ್ಲವನ್ನು ಸೂಕ್ಷ್ಮದಿಂದ ನೋಡುತ್ತಿದ್ದೇನೆ. ಎಲ್ಲಿಯೂ ಕದ್ದು ಓಡಿ ಹೋಗಲ್ಲ. ದೇಶ ಸುತ್ತು ಕೋಶ ಓದು ಗಾದೆ ಮಾತಿನಂತೆ ವಿದೇಶಕ್ಕೆ ಹೋಗಿದ್ದೆ’ ಅಂತಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಗುತ್ತಿಗೆದಾರರು ಮಾಡಿರುವ ಕಾಮಗಾರಿಗಳಿಗೆ ಮೊದಲು ಹಣ ನೀಡಿ. 1947ರಿಂದ 72ರ ತುರ್ತು ಪರಿಸ್ಥಿತಿವರೆಗಿನ ಆರ್ಥಿಕತೆ ಬಗ್ಗೆ ಚರ್ಚಿಸಿದ್ದೆನೆ. ಈಗ ದುಡ್ಡಿಗೆ ಬರ ಇಲ್ಲ. ಹಾಗಂತ ಅದನ್ನು ಹಂಚಿಕೆ ಮಾಡೋದಲ್ಲ. ಸ್ವಾಭಿಮಾನದಿಂದ ಜನರು ಬದುಕುವುದಕ್ಕೆ ಅವಕಾಶ ಕಲ್ಪಿಸಬೇಕು. ಮಾತು ಎತ್ತಿದ್ರೆ ಬರೀ 5 ಗ್ಯಾರಂಟಿ ಅಂತಾ ಹೇಳುತ್ತಾರೆ. ಕಾಂಗ್ರೆಸ್ ಕಚೇರಿಯಿಂದ ರಾಜ್ಯದ ಜನರಿಗೆ 5 ಗ್ಯಾರಂಟಿ ಕೊಟ್ಟಿದ್ದೀರಾ?’ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.


ಇದನ್ನೂ ಓದಿ: Gruha Lakshmi: ರಾಜ್ಯದ ಗೃಹಿಣಿಯರಿಗೆ ಗುಡ್‌ ನ್ಯೂಸ್..ಈ ದಿನದಂದು ನಿಮ್ಮ ಖಾತೆಗೆ ಜಮಾ ಆಗಲಿದೆ 2000!


‘ಡಿಕೆ ಶಿವಕುಮಾರ್‍ಗೆ ಅಜ್ಜಯ್ಯನ ರಕ್ಷಣೆ ಇದೆ, ಆದರೆ ನಮಗಿಲ್ಲ. ಡಿಕೆಶಿ ಮಾತು ಎತ್ತಿದ್ರೆ ನಮ್ಮ ಅಜ್ಜಯ್ಯನ ಸುದ್ದಿಗೆ ಬರಬೇಡಿ ಅಂತಾ ಹೇಳ್ತಾರೆ. ಎಲ್ಲದಕ್ಕೂ ಅಂತ್ಯ ಇದೆ ಎಂದು ಕಾಂಗ್ರೆಸ್ ಸಭೆಯಲ್ಲಿ ಹೇಳಿದ್ದಾರೆ. ಮುಂದಿನ 15-20 ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತೆ ಎಂದು ಹೇಳಿದ್ದಾರೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಂದಿನ 10 ವರ್ಷ ನಾನೇ ಸಿಎಂ ಅಂತಾ ಹೇಳಿದ್ದರು. ಅದು ಸದನದಲ್ಲಿ ರೆಕಾರ್ಡ್ ಆಗಿದೆ. ಆನಂತರ ಏನಾಗಿದೆ ಅಂತಾ ಎಲ್ಲರಿಗೂ ಗೊತ್ತಿದೆ ಅಲ್ವಾ? ಎಂದು ಬಿಜೆಪಿ ವಿರುದ್ಧವೂ ಎಚ್‍ಡಿಕೆ ಕುಟುಕಿದರು.


‘ಕಾಂಗ್ರೆಸ್‍ನವರನ್ನು ಸದ್ಯ ಜನ ಅಧಿಕಾರದಲ್ಲಿ ಕೂರಿಸಿದ್ದಾರೆ. ಈ ಹಿಂದೆ ‘ಗರಿಬಿ ಹಠಾವೋ’ ಎಂದು ಅಧಿಕಾರಕ್ಕೆ ಬಂದಿದ್ದರು. ಇದೀಗ ಉಚಿತ ಕೊಡುಗೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದೀರಿ. 10 ವರ್ಷದ ಬಳಿಕ ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಒಳ್ಳೆಯ ಕೆಲಸ ಮಾಡಿ, ಅದು ಬಿಟ್ಟು ಬಿಜೆಪಿ ಪರ ಅಂತೀರಾ. ನಾನು ಬಿಜೆಪಿ ಅಡಿಯಾಳ?’ ಎಂದು ಇದೇ ವೇಳೆ ಅವರು ಪ್ರಶ್ನಿಸಿದರು.


ಇದನ್ನೂ ಓದಿ: Indira Canteen: ಗೃಹ ಸಚಿವರ ಕ್ಷೇತ್ರದಲ್ಲೇ ಕಾಂಗ್ರೆಸ್ ಕನಸಿನ ಯೋಜನೆಗೆ ಬೀಗ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.