ನವದೆಹಲಿ: ಬೆಂಗಳೂರು ದಕ್ಷಿಣ ಹೆಸರನ್ನು ಬದಲಿಸುವುದು ಎಚ್.ಡಿ.ಕುಮಾರಸ್ವಾಮಿ ಅವರ ಹಣೆಯಲ್ಲಿ ಬರೆದಿಲ್ಲವೆಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗೆ ಎಚ್‌ಡಿಕೆ ತಿರುಗೇಟು ನೀಡಿದ್ದು, ಇಂತಹ ಹೇಳಿಕೆಗಳನ್ನು ಕೊಟ್ಟವರು ಏನೇನಾಗಿದ್ದಾರೆ ಎನ್ನುವುದು ಗೊತ್ತಿದೆ ಎಂದು ಕುಟುಕಿದ್ದಾರೆ.


COMMERCIAL BREAK
SCROLL TO CONTINUE READING

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದ ಹೆಸರು ಮರುಸ್ಥಾಪನೆ ಸಾಧ್ಯವಿಲ್ಲ. ಹಾಗಂತ ಡಿಸಿಎಂ ಹೇಳಿಕೆ ನೀಡಿದ್ದಾರೆ. ಹಿಂದೆ ಈ ರೀತಿಯ ಹೇಳಿಕೆಯನ್ನು ಬಹಳ ಜನರು ಹೇಳಿದ್ದಾರೆ. ಆಮೇಲೆ ಅವರು ಏನೇನಾಗಿದ್ದಾರೆ ಎನ್ನುವುದನ್ನೂ ನೋಡಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು.


ಇದನ್ನೂ ಓದಿ: ನಟ ದರ್ಶನ್‌ ಜೊತೆ ರಾಜಿ ಆಗುತ್ತಾ ಚಿತ್ರದುರ್ಗದ ರೇಣುಕಾಸ್ವಾಮಿ ಫ್ಯಾಮಿಲಿ?


ಮುಂದಿನ ಹತ್ತು, ಇಪ್ಪತ್ತು ವರ್ಷ ಕರ್ನಾಟಕದಲ್ಲಿ ನಮ್ಮದೇ ಸರ್ಕಾರವೆಂದು ಶಿವಕುಮಾರ್ ಹೇಳಿದ್ದಾರೆ. ಇಂತಹ ಹೇಳಿಕೆ ನೀಡಿ ಒಂದೇ ವರ್ಷದಲ್ಲಿ ಹೋದವರು ಬಹಳ‌ ಜನರು ಇದ್ದಾರೆ. ಈ ಸರ್ಕಾರ ಮಾಡಿರುವ ಅಕ್ರಮಗಳು, ಜನವಿರೋಧಿ ಚಟುವಟಿಕೆಗಳು ಎಷ್ಟಿವೆ ಎಂದರೆ ನಾಳೆ ಬೆಳಗ್ಗೆ ಚುನಾವಣೆ ನಡೆದರೆ ಜನರೇ ಇವರನ್ನು ಮನೆಗೆ ಕಳಿಸುತ್ತಾರೆ. ಮುಂದಿನ ಹತ್ತು ವರ್ಷದ ಆಮೇಲೆ ಇರಲಿ ಎಂದು ಕುಮಾರಸ್ವಾಮಿ ಟಾಂಗ್‌ ಕೊಟ್ಟರು.


ನಾನು ಈ ಹೇಳಿಕೆಯನ್ನು ಕಾಟಾಚಾರಕ್ಕೆ ಹೇಳಿಲ್ಲ, ಇದು ನನ್ನ ಜೀವನದ ಗುರಿ. ಯಾವ ಘನಂಧಾರಿ ಕೆಲಸ ಮಾಡಿದ್ದಾರೆ ಎಂದು ರಾಜ್ಯದ ಜನರು ಇವರಿಗೆ ಮತ ಕೊಡುತ್ತಾರೆ? ಶಾಶ್ವತವಾಗಿ ಕೂರಲು ಗೂಟ ಹೊಡೆದುಕೊಂಡು ಇರಲಿ, ಅಲ್ಲಿರುತ್ತಾರೋ, ಇನ್ನೆಲ್ಲಿ ಇರುತ್ತಾರೋ ನೊಡೊಣ.. ರಾಮನಗರದ ವಿಚಾರದಲ್ಲಿ ಅವರ ನಿರ್ಧಾರಕ್ಕೆ ಅವರೇ ಪ್ರಾಯಶ್ಚಿತ ಪಡಬೇಕಾಗುತ್ತದೆ. ದೊಡ್ಡಮಟ್ಟದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.


ಇದನ್ನೂ ಓದಿ: Karnataka Rains: ಕರ್ನಾಟಕಕ್ಕೆ ಜಲ ಕಂಟಕ.. ಈ ಜಿಲ್ಲೆಗಳಲ್ಲಿ ರಣಭೀಕರ ಮಳೆ, ಬಿರುಗಾಳಿ ಗುಡುಗು ಮಿಂಚು ಸಹಿತ ವರುಣಾರ್ಭಟದ ಎಚ್ಚರಿಕೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.