ಬೆಂಗಳೂರು: ರೈತರಿಗೆ ಬೆಳೆ ಸಾಲಮನ್ನಾ ಕುರಿತಂತೆ ಮಾಹಿತಿ ನೀಡಲು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 'ಬೆಳೆ ಸಾಲಮನ್ನಾ ಸಹಾಯವಾಣಿ' ಆರಂಭಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಾಮಾಜಿಕ ಜಾಲತಾಣದ ಮೂಅಕ ಈ ಬಗ್ಗೆ ಮಾಹಿತಿ ನೀಡಿರುವ ಹೆಚ್‌ಡಿಕೆ, 'ಪ್ರತಿ ದಿನ ನೂರಾರು ರೈತರು ತಮ್ಮ ಬೆಳೆಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬರುತ್ತಿದ್ದಾರೆ. ದೂರದೂರಿನಿಂದ ಬರುವ ರೈತರಿಗೆ ಕಷ್ಟವಾಗಬಾರದೆಂದು ನಾನು ರೈತರ 'ಬೆಳೆಸಾಲಮನ್ನಾ ಸಹಾಯವಾಣಿ' ಆರಂಭಿಸಿದ್ದೇನೆ. ರೈತರು ತಮ್ಮ ಮನೆಯಿಂದಲೇ 9164305868 ನಂಬರ್ ಗೆ ಬೆಳಗ್ಗೆ 10 ರಿಂದ 5 ರವರೆಗೆ ಕರೆ ಮಾಡಿ ಸಾಲಮನ್ನಾದ ವಿವರ ಪಡೆಯಬಹುದು' ಎಂದು ತಿಳಿಸಿದ್ದಾರೆ.