ಹೊಳೆನರಸೀಪುರ : ಕರ್ನಾಟಕ ರಾಜ್ಯದಾದ್ಯಂತ ಹೆಚ್.ಡಿ.ಕುಮಾರಸ್ವಾಮಿ ನೇತ್ರತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕವಾಗಿದ್ದು 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಜನಪರ ಸರ್ಕಾರವನ್ನು ರಚಿಸಲಿದೆ ಎಂದು ಶಾಸಕ ಹೆಚ್.ಡಿ.ರೇವಣ್ಣನವರು ತಿಳಿಸಿದರು.


COMMERCIAL BREAK
SCROLL TO CONTINUE READING

ಅವರು ಇಂದು ಪಟ್ಟಣದ ಚೆನ್ನಾಂಬಿಕ ಕನ್ವೆನ್ಷನ್ ಹಾಲ್ ನಲ್ಲಿ ತಾಲೂಕು ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ತಮ್ಮ ಜೆ.ಡಿ.ಎಸ್. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ನೀಡಿರು ಸಾಕವನ್ನು ಮನ್ನಾ ಮಾಡುತ್ತೇವೆ, ಮತ್ತು ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಮತ್ತು ಇತರೆ ಭತ್ಯೆಗಳನ್ನು ಹೆಚ್ಚು ಮಾಡುತ್ತೇವೆ. ಸರ್ಕಾರಿ ನೌಕರರು ಹಳೆಯ ಪಿಂಚಣಿ ಪದ್ಧತಿಯನ್ನು ಜಾರಿ ಮಾಡಿ ಎಂದು ಪ್ರತಿಭಟನೆ ಮಾಡುತ್ತಿದ್ದು ನಾವು ಅಧಿಕಾರಕ್ಕೆ ಬಂದರೇ ಅದನ್ನು ಜಾರಿಗೊಳಿಸಲು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದರು. 


ನಂತರ ಮುಂದುವರೆದು ಮಾತನಾಡಿದ ಅವರು,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರಕ್ಕೆ ನೀಡಲು ಉದ್ದೇಶಿಸಿದ್ದ ಕನಸಿನ ಯೋಜನೆಗಳಾದ ಐ.ಐ.ಟಿ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ತೋಟಗಾರಿಕೆ ಮತ್ತು ಇನ್ನಿತರ ಯೋಜನೆಗಳನ್ನು ಹಾಲಿ ಬಿ.ಜೆ.ಪಿ.ಸರ್ಕಾರವು ಅನುಷ್ಠಾನಗೊಳಿಸುವಲ್ಲಿ ವಿಳಂಬ ಮಾಡುತ್ತಿದೆ, ನಮ್ಮ ಸರ್ಕಾರ ಬರಲಿ ಎಲ್ಲಾ ಕೆಲಸವನ್ನು ಪೂರ್ತಿ ಮಾಡ್ತೀವಿ ಎಂದರು.


ಇಂಧನ ಇಲಾಖೆಯು ಈಗಾಗಲೇ ನಷ್ಟದಲ್ಲಿದ್ದು, ಕಾಂಗ್ರೆಸ್ ಪ್ರತಿ ಮನನೆಗೂ 200 ಯೂನಿಟ್ ವಿದ್ಯುತ್ ನೀಡುವುದು ಮತ್ತು ಪ್ರತಿ ಬಿ.ಪಿ.ಎಲ್.ಕುಟುಂಬಕ್ಕೆ ಮಾಸಿಕ ರೂ 2000/- ನಿಡುವುದು ಕೇಲವ ಚುನಾವಣಾ ಗಿಮಿಕ್ ಆಗಿದೆ ಅಷ್ಟೇ, ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯಲ್ಲಿ ಯಾವುದೇ ಹರುಳಿಲ್ಲ. ಜನಪರ ಸಮಸ್ಯೆಗಳನ್ನು ಸರ್ಕಾರದ ಮುಂದೆ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡಬೇಕಾದ ಜವಾಬ್ದಾರಿ ವಿರೋಧ ಪಕ್ಷದ್ದು ಆ ಕೆಲಸವನ್ನು ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ನಮ್ಮ ರಾಜ್ಯಕ್ಕಾಗಲಿ ಜಿಲ್ಲೆಗಾಗಲಿ ಎರಡು ರಾಷ್ಟ್ರೀಯ ಪಕ್ಷದಗಳು ನೀಡಿರುವ ಕೊಡುಗೆಯಾದರೂ ಏನು.? ಎಂದು ಪ್ರಶ್ನೆ ಮಾಡಿದರು


ಅಲ್ಲದೆ, ಅವರು ಕೇವಲ ಸಾಲವನ್ನು ಮಾಡಿ ಬೊಕ್ಕಸವನ್ನು ಬರಿದು ಮಾಡಿದ್ದಷ್ಟೇ ಅವರ ಕೆಲಸ,  ಪಕ್ಷದವನನ್ನು ಬೇರು ಮಟ್ಟದಿಂದ ಬಲಪಡಿಸಲು ಮತ್ತು ಸಕ್ರಿಯ ಕಾರ್ಯಕರ್ತರಿಗೆ ಸೂಕ್ತವಾದ ಸ್ಥಾನಮಾನವನ್ನು ಮುಂದಿನ ದಿನಗಳಲ್ಲಿ ಪಕ್ಷವು ಅಧಿಕಾರಕ್ಕೆ ಬಂದ ನಂತರ ಮಾಡಲಾಗುತ್ತದೆ. ಪಕ್ಷದ ವಿಧಾನಸಭಾ ಅಭ್ಯರ್ಥಿಗಳ ಎರಡನೆಯ ಪಟ್ಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುತ್ತದೆ.  ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ಹಾಸನ ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಳು ಜಯಗಳಿಸುತ್ತಾರೆಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.