ಬೆಂಗಳೂರು: ಬಜೆಟ್ ಮಂಡನೆ ಕಾರ್ಯಕಲಾಪದ ವೇಳೆ ಲೋಕಸಭೆಯ ಮಾದರಿಯನ್ನೇ ಅನುಸರಿಸಲು ಮುಂದಾಗಿರುವ ವಿಧಾನಸಭೆಯ ಅಧ್ಯಕ್ಷರು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಜೆಟ್ ಭಾಷಣದ ಪೂರ್ತಿ ಪ್ರತಿ ಓದಿ ಮುಗಿಸುವವರೆಗೂ ಬಜೆಟ್ ಪುಸ್ತಕಗಳನ್ನು ಶಾಸಕರಿಗೆ ನೀಡದಿರಲು ನಿರ್ಧರಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಜೆಟ್ ಮಂಡನೆ ವೇಳೆ ವಿಪಕ್ಷದವರು ಬಜೆಟ್ ಪ್ರತಿಗಳನ್ನು ಹರಿದುಹಾಕಿ ಪ್ರತಿಭಟಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ಮುಕ್ತಾಯವಾಗುವವರೆಗೂ ವಿಪಕ್ಷಗಳಿಗೆ ಬಜೆಟ್ ಪ್ರತಿ ಕೊಡದಿರಲು ಕುಮಾರಸ್ವಾಮಿ ನಿಶ್ಚಿಯಿಸಿದ್ದು, ಬಜೆಟ್ ಮಂಡನೆ ಮುಗಿದ ಬಳಿಕವಷ್ಟೇ ಪ್ರತಿಗಳನ್ನು ಹಂಚಲು ನಿರ್ಧಾರ ಮಾಡಲಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರೂ ಕೂಡ ಇಂತಹ ಕ್ರಮವನ್ನು ಖಚಿತಪಡಿಸಿದ್ದಾರೆ.