ಅದು ದೋಸ್ತಿ ಸರ್ಕಾರ ಅಲ್ಲ, ದುಶ್ಮನ್ ಸರ್ಕಾರ: ಕೆ.ಎಸ್.ಈಶ್ವರಪ್ಪ
ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ದೋಸ್ತಿ ಸರ್ಕಾರ ಆಗಿರಲಿಲ್ಲ. ಅದೊಂದು ದುಶ್ಮನ್ ಸರ್ಕಾರ ಆಗಿತ್ತು ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ಮೈಸೂರು: ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ದೋಸ್ತಿ ಸರ್ಕಾರ ಆಗಿರಲಿಲ್ಲ. ಅದೊಂದು ದುಶ್ಮನ್ ಸರ್ಕಾರ ಆಗಿತ್ತು ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ದೋಸ್ತಿ ಸರ್ಕಾರದಲ್ಲಿ ಎಲ್ಲರೂ ಸ್ವಯಂ ಘೋಷಿತ ಲೀಡರ್ ಗಳು. ಡಿಕೆಶಿ ಮಾಧ್ಯಮ ಹಾಗೂ ಪ್ರತಿಕೆಗಳ ಮುಂದೆ ಟ್ರಬಲ್ ಶೂಟರ್ ರೀತಿ ವರ್ತನೆ ಮಾಡಿದ್ದಾರೆ. ರಾಜ್ಯದ ಜನರು ಅವರನ್ನು ಟ್ರಬಲ್ ಶೂಟರ್ ಅಂತ ಕರೆಯಬೇಕು. ಆಗ ಮಾತ್ರ ಅವರು ನಾಯಕರಾಗುತ್ತಾರೆ ಎಂದು ಈಶ್ವರಪ್ಪ ಹೇಳಿದರು.
ಅತೃಪ್ತರು ಪಕ್ಷಕ್ಕೆ ಬಂದರೆ ಸ್ವಾಗತ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಆದರೆ ನಾವು ಯಾರನ್ನೂ ಬಲವಂತ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು ರಾಜ್ಯ ಅಭಿವೃದ್ಧಿ ಕಾಣಲಿದೆ. ರಾಜ್ಯದ ಜನತೆಗೆ ಒಳ್ಳೆಯ ದಿನಗಳು ಬರಲಿವೆ ಎಂದು ಈಶ್ವರಪ್ಪ ಹೇಳಿದರು.