ಬೆಂಗಳೂರು: ನಿನ್ನೆಯಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅನುಮತಿ ಪಡೆದೇ ಅನಿತಾ ಕುಮಾರಸ್ವಾಮಿಯವರನ್ನು ಚನ್ನಪಟ್ಟಣದ ಅಭ್ಯರ್ಥಿಯಾಗಿ ಜೆಡಿಎಸ್ ಮುಖಂಡರು ಘೋಷಣೆ ಮಾಡಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಲು ಮಾತ್ರ ಹೆಚ್ಡಿಕೆ ನಿರಾಸಕ್ತಿ ತೋರಿದ್ದಾರೆ. ಈ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಎಚ್.ಡಿ.ಕುಮಾರಸ್ವಾಮಿ ಅನುಸರಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಜ್ವಲ್ ರೇವಣ್ಣಗೆ ಟಿಕೇಟ್ ನೀಡಲು ನಿರಾಸಕ್ತಿ ತೋರಿರುವ ಹೆಚ್ಡಿಕೆ ಅವರ ನಡೆ ಕುಟುಂಬದಲ್ಲಿ ಅಸಮಧಾನದ ಮೂಡುವಂತೆ ಮಾಡಿದೆ. ಕಳೆದ ನಾಲ್ಕೈದು ವರ್ಷದಿಂದ ಸಕ್ರಿಯರಾಗಿದ್ದ ಪ್ರಜ್ವಲ್ ರೇವಣ್ಣ ಪಕ್ಷ ಸಂಘಟನೆ ಜತೆಗೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಬಲಪಡಿಸುವಲ್ಲಿ ಸಕ್ರಿಯರಾಗಿರುವ ಪ್ರಜ್ವಲ್ ರೇವಣ್ಣ ತಮಗೆ ಟಿಕೆಟ್ ಕೊಡುವುದು ಪಕ್ಷದ ಹೈಕಮಾಂಡ್'ಗೆ ಬಿಟ್ಟ ವಿಷಯ ಎಂದು ತಟಸ್ಥ ನಿಲುವು ತಾಳಿದ್ದಾರೆ.


ಇದನ್ನು ಓದಿ: ನನಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯಿಲ್ಲ: ಪ್ರಜ್ವಲ್ ರೇವಣ್ಣ


ಹೆಚ್ಡಿಕೆ ಈಗ ಅನಿತಾ ಕುಮಾರಸ್ವಾಮಿಗೆ ಟಿಕೆಟ್ ನೀಡಿ ಪ್ರಜ್ವಲ್'ಗೆ ಟಿಕೆಟ್ ನೀಡಿಕೆಗೆ ನಿರಾಸಕ್ತಿ ತೋರುತ್ತಿರುವುದು ದೊಡ್ಡಗೌಡರ ಕುಟುಂಬದಲ್ಲಿ ಪ್ರಜ್ವಲ್ ಅಥವಾ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವ ವಿಷಯದಲ್ಲಿ ಕಲಹ ಮೂಡುವ ಸಾಧ್ಯತೆಯನ್ನು ಹೆಚ್ಚಿಸಿದೆ.