ಬೆಂಗಳೂರು: ಕೆ.ಸಿ ಜನರಲ್ ಆಸ್ಪತ್ರೆಗೆ ಇಂದು ಭೇಟಿ ನೀಡಿದ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಟ್ರಾಮಾ ಕೇರ್ ಸೆಂಟರ್ ನ ಕಾಮಗಾರಿ ಪರಿಶೀಲಿಸಿದರು. 35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 50 ಬೆಡ್ ಸಾಮರ್ಥ್ಯದ ಟ್ರಾಮಾ ಸೆಂಟರ್ ಕಾಮಗಾರಿಯನ್ನ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಚಿವರು ಸೂಚನೆ ನೀಡಿದರು. ಅಲ್ಲದೇ ಆಸ್ಪತ್ರೆಗೆ ತುರ್ತು ಚಿಕಿತ್ಸಾ ಘಟಕವನ್ನ ನೂತನವಾಗಿ ಟ್ರಾಮಾ ಸೆಂಟರ್ ಗೆ ಶಿಫ್ಟ್ ಮಾಡುವ ಬಗ್ಗೆ ಚರ್ಚೆ ನಡೆಸಿದರು. 


COMMERCIAL BREAK
SCROLL TO CONTINUE READING

ಕೆ.ಸಿ ಜನರಲ್ ಆಸ್ಪತ್ರೆಗೆ ಕಾಯಕಲ್ಪ ಒದಗಿಸುವ 150 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕೆ.ಸಿ ಜನರಲ್ ಜನಪ್ರೀಯ ಆಸ್ಪತ್ರೆಯನ್ನಾಗಿ ರೂಪಿಸಲು ಎಲ್ಲರು ಶ್ರಮ ವಹಿಸಬೇಕು ಎಂದರು. ಕೆ.ಸಿಜನರಲ್ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ 66.78 ಕೋಟಿ ವೆಚ್ಚದಲ್ಲಿ 200 ಬೆಡ್ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ಪ್ರಾರಂಭಿಸುವ ನಿಟ್ಟಿನಲ್ಲಿ ಗುದ್ದಲಿ ಪೂಜೆಗೆ ಅಣಿ ಮಾಡಿಕೊಳ್ಳಲು ಸಚಿವರು ಸೂಚನೆ ನೀಡಿದರು. 


ಇದನ್ನೂ ಓದಿ: ಸಿದ್ದರಾಮಯ್ಯ ನೇತೃತ್ವದ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ


ಆಸ್ಪತ್ರೆಗೆ ಬರುವ ರೋಗಿಗಳು ಔಷಧಿಗಾಗಿ ಬೇರೆಕಡೆ ಹೋಗುವ ಸ್ಥಿತಿ ಬರಬಾರದು ಎಂದು ಖಡಕ್ ವಾರ್ನಿಂಗ್ ನೀಡಿದ ಸಚಿವರು, ಆಸ್ಪತ್ರೆಯ ಮಳಿಗೆಗಳಲ್ಲಿ ಇರುವ ಔಷಧಿ ಕೇಂದ್ರಗಳಿಗೆ ಗೇಟ್ ಪಾಸ್ ನೀಡಿ. ಸರ್ಕಾರಿ ಔಷಧಿಯ ಅಂಗಡಿಯನ್ನೇ ಮಧ್ಯರಾತ್ರಿಯ ವರೆಗೂ ತೆರೆಯಲು ಅಗತ್ಯ ಸಿಬ್ಬಂದಿಗಳನ್ನ ನೇಮಿಸಿಕೊಳ್ಳಲು ಸೂಚನೆ ನೀಡಿದರು. ಅಲ್ಲದೇ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಘಟಕ ಕೂಡ ರಾತ್ರಿ 10 ಗಂಟೆಯ ವರೆಗೆ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.


ಆಸ್ಪತ್ರೆಯ ಆವರಣದಲ್ಲಿ ಕೈಗೊಳ್ಳುವ ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಹೈಲೆಟ್ಸ್ ಹೀಗಿದೆ.. 


66.78 ಕೋಟಿ ವೆಚ್ಚದಲ್ಲಿ 200 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ 


35 ಕೋಟಿ ವೆಚ್ಚದಲ್ಲಿ ಟ್ರಾಮಾಕೇರ್ ಸೆಂಟರ್ ಕಾಮಗಾರಿ ಮಾರ್ಚ್ ಒಳಗೆ ಪೂರ್ಣ 


38.28 ಕೋಟಿ ವೆಚ್ಚದಲ್ಲಿ ಭೋದಕ ವಿಭಾಗ ಕಟ್ಟಡ ನಿರ್ಮಾಣ 


4.28 ಕೋಟಿ ವೆಚ್ಚದಲ್ಲಿ ಶವಾಗಾರ ಕೊಠಡಿ


4.80 ಕೋಟಿ ವೆಚ್ಚದ ಅಗ್ನಿ ಶಾಮಕ ವ್ಯವಸ್ಥೆ


2 ಕೋಟಿ ವೆಚ್ಚದಲ್ಲಿ ಲ್ಯಾಂಡ್ರಿ, 38 ಲಕ್ಷದಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ಘಟಕ


9.98 ಕೋಟಿ ವೆಚ್ಚದಲ್ಲಿ ಕೆ.ಸಿ ಜನರಲ್ ಆಸ್ಪತ್ರೆಯ ಹಳೆ ಕಟ್ಟಡಗಳ ದುರಸ್ಥಿ ಕಾಮಗಾರಿ ಅನುಮೋದನೆಗೆ ಪ್ರಸ್ರಾವನೆ ಮುರಿದು ಬಿದ್ದಿರುವ ಆರ್‌ಸಿಸಿ ಚಜ್ಜಾಗಳನ್ನು ಮರು ನಿರ್ಮಾಣ, ಶೌಚಾಲಯಗಳಲ್ಲಿನ ನೀರು ಸರಬರಾಜು ಮತ್ತು ನೈರ್ಮಲೀಕರಣ ವ್ಯವಸ್ಥೆಯನ್ನು ದುರಸ್ಥಿ ಪಡಿಸುವುದು ಸೇರಿದಂತೆ ವಿವಿಧ ದುರಸ್ಥಿ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ.


ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ನಟನೆಯ ʼಅಜಾಗ್ರತʼ ಸಿನಿಮಾ ಡೈರೆಕ್ಟರ್‌ಗೆ ದುಬಾರಿ ಕಾರ್‌ ಗಿಫ್ಟ್‌..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.