K Sudhakar : `ಬ್ಲ್ಯಾಕ್ ಫಂಗಸ್` ಬಗ್ಗೆ ಆತಂಕಕಾರಿ ಹೇಳಿಕೆ ನೀಡಿದ ಸಚಿವ ಸುಧಾಕರ್..!
ಸದ್ಯಕ್ಕೆ ಲಭ್ಯ ಔಷಧವನ್ನು 6 ವಿಭಾಗಗಳಿಗೆ ಹಂಚಲಾಗಿದೆ. ತಕ್ಷಣಕ್ಕೆ 500 ವೈಯಲ್ಸ್ ಕಳುಹಿಸಬೇಕೆಂಬ ಕೋರಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಬೆಂಗಳೂರು : ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಸೋಂಕಿನ ಚಿಕಿತ್ಸೆಗೆ ಬೇಕಾದ ಔಷಧದ ಕೊರತೆಯಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುಧಾಕರ್(Dr K Sudhakar), ಸದ್ಯಕ್ಕೆ ಲಭ್ಯ ಔಷಧವನ್ನು 6 ವಿಭಾಗಗಳಿಗೆ ಹಂಚಲಾಗಿದೆ. ತಕ್ಷಣಕ್ಕೆ 500 ವೈಯಲ್ಸ್ ಕಳುಹಿಸಬೇಕೆಂಬ ಕೋರಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಒಟ್ಟು 20,000 ವೈಯಲ್ಸ್ಗೆ ಬೇಡಿಕೆ ಇಡಲಾಗಿದೆ ಎಂದರು.
ಇದನ್ನೂ ಓದಿ : "ಸಿಎಂ ಯಡಿಯೂರಪ್ಪ ಘೋಷಿಸಿರುವ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿದೆ"
ವಿಜಯಪುರ ಜಿಲ್ಲೆಯಲ್ಲಿ ಅತಿಹೆಚ್ಚು ಬ್ಲ್ಯಾಕ್ ಫಂಗಸ್(Black Fungus) ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು 30 ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ರಾಜ್ಯದಲ್ಲಿ ಅತೀ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಂಡು ಬಂದಿರುವ ಜೊಲ್ಲೆಯಾಗಿದೆ. ಮಧುಮೇಹ ಉಳ್ಳವರಿಗೆ ಪರೀಕ್ಷಿಸಿ ಈ ಔಷಧ ನೀಡಬೇಕೆಂದು ತಿಳಿಸಿದ್ದು, ತಜ್ಞರ ವರದಿ ಪ್ರಕಾರ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : MTB Nagaraj : ಕಬ್ಬು ಬೆಳೆಗಾರರ ಬೆನ್ನಿಗೆ ನಿಂತ ಸಚಿವ ಎಂಟಿಬಿ ನಾಗರಾಜ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.