ಬೆಳಗೆದ್ದು ಪ್ರಾಣಾಯಾಮ ಮಾಡಿ ಕರೋನಾ ಬರಲ್ಲ : ಡಾ. ಸುಧಾಕರ್
ಕರೋನಾ ಚೈನ್ ಮುರಿಯಬೇಕಾದರೆ ಕನಿಷ್ಠ 14 ದಿನಗಳು ಬೇಕು. ಆ ದಿನಗಳಲ್ಲಿ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೆಲವರು ಸರ್ಕಾರವನ್ನು ಟೀಕಿಸುತ್ತಾರೆ. ಯಾರ ಟೀಕೆ, ಅಪಾದನೆಗಳಿಗೆ ನಾವು ಉತ್ತರ ಕೊಡುವುದಿಲ್ಲ ಎಂದು ಸುಧಾಕರ್ ಹೇಳಿದರು.
ಬೆಂಗಳೂರು: ಕರೋನಾ ಮಹಾಮಾರಿ (Coronavirus) ಹೆಮ್ಮಾರಿಯಾಗಿ ಕಾಡುತ್ತಿರುವಂತೆಯೇ, ದಿನ ಬೆಳಗೆದ್ದು ಪ್ರಾಣಾಯಾಮ ಮಾಡುವಂತೆ ರಾಜ್ಯ ಆರೋಗ್ಯ ಸಚಿವ ಸಚಿವ ಡಾ. ಸುಧಾಕರ್ (Dr K Sudhakar) ಜನರಿಗೆ ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಾ. ಸುಧಾಕರ್ ಪ್ರಾಣಾಯಾಮ (Pranayama) ಮಾಡಿದರೆ ಶ್ವಾಸಕೋಶ ಉತ್ತಮವಾಗಿ ಕೆಲಸ ಮಾಡುತ್ತದೆ. ಉತ್ತಮ ವಾತಾವರಣದಲ್ಲಿ ಸ್ವಲ್ಪ ಹೊತ್ತು ಲಘು ವ್ಯಾಯಾಮ ಮಾಡಿದರೆ, ದೇಹದ ರೋಗ ನಿರೋಧಕ ಶಕ್ತಿಯೂ (immunity) ಹೆಚ್ಚುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿದರೆ ಯಾವ ರೋಗಾಣು ಕೂಡಾ ದೇಹವನ್ನು ಸೋಂಕುವುದಿಲ್ಲ ಎಂದು ಹೇಳಿದ್ದಾರೆ. ಸಚಿವ ಸುಧಾಕರ್ ವೃತ್ತಿಯಲ್ಲಿ ವೈದ್ಯರೂ ಹೌದು ಎಂಬುದು ಗಮನಾರ್ಹ.
ಕರೋನಾ (corornavirus) ಚೈನ್ ಮುರಿಯಬೇಕಾದರೆ ಕನಿಷ್ಠ 14 ದಿನಗಳು ಬೇಕು. ಆ ದಿನಗಳಲ್ಲಿ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೆಲವರು ಸರ್ಕಾರವನ್ನು ಟೀಕಿಸುತ್ತಾರೆ. ಯಾರ ಟೀಕೆ, ಅಪಾದನೆಗಳಿಗೆ ನಾವು ಉತ್ತರ ಕೊಡುವುದಿಲ್ಲ. ಕೆಲವು ದೇಶಗಳಲ್ಲಿ 2,3 ಮತ್ತು ನಾಲ್ಕನೇ ಅಲೆಗಳೂ ಬಂದಿವೆ. ಕೆಲವೆಡೆ ಒಂದು – ಒಂದೂವರೆ ತಿಂಗಳು ಲಾಕ್ ಡೌನ್ (Lockdown)ಮಾಡುವಂತ ಸ್ಥಿತಿಗೆ ತಲುಪಿದ ನಿದರ್ಶನಗಳಿವೆ. ನಮ್ಮಲ್ಲಿ ಅಂತ ಸನ್ನಿವೇಶ ಎದುರಾಗಿಲ್ಲ ಎಂದು ಸುಧಾಕರ್ (Dr. K Sudhakar)ಹೇಳಿದರು.
ಇದನ್ನೂ ಓದಿ : Namma Metro: ರಾಜ್ಯದಲ್ಲಿ ವೀಕ್ ಎಂಡ್ ಕರ್ಫ್ಯೂ: ನಾಳೆ ನಾಡಿದ್ದು ಮೆಟ್ರೋ ರೈಲು ಸೇವೆ ಬಂದ್!
ಇದು ಪರಸ್ಪರ ರಾಜಕೀಯ,ಅಪಾದನೆ ಮಾಡುವ ಸಮಯ ಅಲ್ಲ. ಇವತ್ತು ಮಹಾಮಾರಿಯ ವಿರುದ್ಧ ಎಲ್ಲರೂ ಸಾಮೂಹಿಕವಾಗಿ ಹೋರಾಟ ಮಾಡಬೇಕಾದ ಸಮಯ. ಆರೋಗ್ಯ ತುರ್ತು ಪರಿಸ್ಥಿತಿ (health Emergency) ಘೋಷಿಸಬೇಕಾದ ಸಮಯ ಇದು. ವೈರಾಣು ಜಗತ್ತಿಗೆ ಸವಾಲೊಡ್ಡಿದೆ. ಜನರು ಭಯದಲ್ಲಿದ್ದಾರೆ, ಇಂಥಹ ಸಂದರ್ಭದಲ್ಲಿ ಎಲ್ಲರೂ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸುಧಾಕರ್ ವಿನಂತಿಸಿಕೊಂಡಿದ್ದಾರೆ.
ಇದನ್ನೂ ಓದಿ : "ಇದೇನು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ?"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.