Heartfullness: ಡಿ. 21ಅನ್ನು ವಿಶ್ವ ಧ್ಯಾನ ದಿವಸವಾಗಿ ಆಚರಿಸಲಾಗುವುದು. ಈ ನಿರ್ಧಾರವನ್ನು ಸಂಯುಕ್ತರಾಷ್ಟ್ರಗಳ ವತಿಯಿಂದ ಕೈಗೊಳ್ಳಲಾಗಿದೆ. ಈ ಮಹತ್ವವಾದ ಕಾರ್ಯ ನಮ್ಮ ಯೋಗಕ್ಷೇಮ ಹಾಗೂ ಆಂತರಿಕ ಪರಿವರ್ತನೆಗಾಗಿ ಅವಲೋಕಿಸುವ ದಿನವಾಗಲಿದೆ. 


COMMERCIAL BREAK
SCROLL TO CONTINUE READING

ಈ ದಿನದಲ್ಲಿ ಧ್ಯಾನದ ಬಗ್ಗೆ ಅರಿವು ಹಾಗೂ ಧ್ಯಾನದ ವಿವಿಧ ವಿಧಾನಗಳು ನಮ್ಮ ದೈಹಿಕ ಹಾಗೂ ಆಧ್ಯಾತ್ಮಿಕ ಯೋಗಕ್ಷೇಮವನ್ನು ಉತ್ತಮ ಹಂತಕ್ಕೆ ಕೊಂಡುಹೋಗಲು ನರವಾಗಲಿದೆ. ಈ ಹಾರ್ಟ್‌ಫುಲ್‌ನೆಸ್‌ ಎಂಬ ಸಂಸ್ಥೆ ಸುಮಾರ 100 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಹೃದಯದ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಇದರ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. 


ಕಾಲಕ್ಕೆ ತಕ್ಕಂತೆ ವೈಜ್ಞಾನಿಕ ಆಚರಣೆಗಳು ಬದಲಾಗುತ್ತಿವೆ ಆದರೂ, ಈ ಸಂಸ್ಥೆಯು  ʼಧ್ಯಾನʼದ ವಿಧಾನಗಳಿಂದ ನಿಮ್ಮ ಆಧುಬಿಕಥೆಯನ್ನು ವೃದ್ದಿಗೊಳಿಸುತ್ತದೆ. 


ಹಾರ್ಟ್‌ಫುಲ್‌ನೆಸ್‌ ಬೆಂಗಳೂರು, ವಿಶ್ವ ಧ್ಯಾನ ದಿನದಂದು,  ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಧ್ಯಾನಾವಧಿಗಳನ್ನು ಆಯೋಜಿಸಲಿದೆ. ಅತಿ ಪುರಾತನ ಸಂಪ್ರದಾಯವಾದ ಧ್ಯಾನವನ್ನು ಆಚರಿಸಿ,  ಅದರಲ್ಲಿ ತಲ್ಲೀನರಾಗಲು ಭಯಸುವ  ಹೃದಯಗಳಿಗೂ ದ್ವಾರ ತೆರೆದಿದೆ. 


ಹಾರ್ಟ್‌ಫುಲ್‌ನೆಸ್‌ ಧ್ಯಾನಕೇಂದ್ರ, ಬೆಂಗಳೂರಿನ ಹಲವು ಜಾಗಗಳು ಎಂದರೆ ಕಬ್ಬನ್‌ ಪಾರ್ಕ್‌, ಸ್ಯಾಂಕಿ ಕೆರೆ, ಲಾಲ್‌ಬಾಗ್‌, ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲದೆ,  ಬೃಹತ್‌ ವಸತಿ ಸಮುಚ್ಚಯಗಳು ಹಾಗೂ ಇದರೊಂದಿಗೆ,  ಸುಮಾರು 25ಕ್ಕೂ ಅಧಿಕ ಸ್ಥಳಗಳಲ್ಲಿ ಧ್ಯಾನೋತ್ಸವವನ್ನು ನಡೆಸಲಿದೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಕೋರಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.