BBMP ಚುನಾವಣೆಗೆ ಭಾರೀ ಸಿದ್ಧತೆ; ರಾಜಧಾನಿ ಟ್ರಾಫಿಕ್ ಸಮಸ್ಯೆಗೆ `ಮಾಸ್ಟರ್ ಪ್ಲಾನ್`ಗೆ ಸಂಪುಟ ಒಪ್ಪಿಗೆ
ಒಂದು ರೂಪಾಯಿ ಅನುದಾನ ನೀಡದೆ ಸಮಗ್ರ ಯೋಜನಾ ವರದಿ ತಯಾರಿಸಿ ಕೊಡಲು ಸರ್ಕಾರ BMRCL ಗೆ ಸೂಚನೆ ನೀಡಿದೆ.
ಬೆಂಗಳೂರು : ಹೆಬ್ಬಾಳ, ತುಮಕೂರು ರಸ್ತೆ ಹಾಗೂ ಕೆ ಆರ್ ಪುರಂ ರಸ್ತೆ ಟ್ರಾಫಿಕ್ ಸಮಸ್ಯೆಗೆ ಮಾಸ್ಟರ್ ಪ್ಲಾನ್ ಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಒಂದು ರೂಪಾಯಿ ಅನುದಾನ ನೀಡದೆ ಸಮಗ್ರ ಯೋಜನಾ ವರದಿ ತಯಾರಿಸಿ ಕೊಡಲು ಸರ್ಕಾರ BMRCL ಗೆ ಸೂಚನೆ ನೀಡಿದೆ.
ಬಿಬಿಎಂಪಿ ಚುನಾವಣೆ(BBMP Election) ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಬೆಂಗಳೂರು ಕೇಂದ್ರೀಕೃತ ಹೊಸ ಯೋಜನೆಗಳನ್ನ ಘೋಷಣೆ ಮಾಡುತ್ತಿದೆ. ಇಂದು ಅಮೃತ ಯೋಜನೆ ಅಡಿ 6000 ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಅಸ್ತು ಎಂದಿದೆ. ಇದರ ಜೊತೆಗೆ ಒಂದು ರೂಪಾಯಿ ವೆಚ್ಚ ತೋರಿಸದೆ ಟ್ರಾಫಿಕ್ ಸಮಸ್ಯೆ ನಿವಾರಿಸಲು ಮಾಸ್ಟರ್ ಪ್ಲಾನ್'ಗೆ ಗ್ರೀನ್ ಸಿಗ್ನಲ್ ನೀಡಿದೆ. ಡಿಪಿಆರ್ ತಯಾರಿಗೆ ಬೇಕಾಗಿರುವ ವೆಚ್ಚವನ್ನೂ ತೋರಿಸದೆ ಕೇವಲ ಘೋಷಣೆಗೆ ಸೀಮಿತ ಎನ್ನುವಂತೆ ಮಾಸ್ಟರ್ ಪ್ಲಾನ್ ಗೆ ಸಂಪುಟ ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ : ಜಾಗ ಬಿಡುವ ವಿಚಾರಕ್ಕೆ ಕಿರಿಕ್.. ಕುಡಿದ ಮತ್ತಿನಲ್ಲಿ ವ್ಯಕ್ತಿಯ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ
2051ರಲ್ಲಿನ ಸಂಚಾರ ಅಗತ್ಯವನ್ನು ಪೂರೈಸಲು ಸಾಮರ್ಥ್ಯ ವರ್ಧನೆಗಾಗಿ ಮತ್ತು ಈ ಪ್ರಮುಖ ಜಂಕ್ಷನ್‌ನಲ್ಲಿ ನಗರದ ಹೆಬ್ಬಾಳ, ತುಮಕೂರು ರಸ್ತೆ ಹಾಗೂ ಕೆಆರ್ ಪುರಂ ರಸ್ತೆಯ (Traffic Jam) ಸಂಚಾರವನ್ನು ಸರಾಗಗೊಳಿಸುವ ಮಹಾಯೋಜನೆ (Master plan) ತಯಾರಿಸಲು ಒಂದು ಸಮಗ್ರ ಅಧ್ಯಯನವನ್ನು BMRCL ಕೈಗೊಂಡಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಇವರು, ಹೆಬ್ಬಾಳವು ಬೆಂಗಳೂರು ನಗರ(Bangalore City)ದಲ್ಲಿ ಅತ್ಯಂತ ಜನನಿಬಿಡ ಜಂಕ್ಷನ್ ಆಗಿದೆ ಮತ್ತು ಇದರಿಂದಾಗಿ ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಮತ್ತು ಹಿಂತಿರುಗಲು ಸಂಚಾರ ಬಹಳ ವಿಳಂಬವಾಗುತ್ತಿದೆ. ಅದೇ ರೀತಿ ತುಮಕೂರು ರಸ್ತೆ- ಆರ್ ಪುರಂ ರಸ್ತೆ ಇಲ್ಲಿಯೂ ರಸ್ತೆ ಮಟ್ಟದಲ್ಲಿ ಟ್ರಾಫಿಕ್ ಸಿಗ್ನಲ್ ಇರುವುದರಿಂದ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ ಈ ಕಾರಣಕ್ಕೆ ಹೆಬ್ಬಾಳ ಜಂಕ್ಷನ್‌ನಲ್ಲಿ ರಸ್ತೆ ಮತ್ತು ರೈಲು ಮೂಲಸೌಕರ್ಯಗಳ ಸಾಮರ್ಥ್ಯ ವರ್ಧನೆ ಮಾಡಲು ಸಂಪುಟ ನಿರ್ಧರಿಸಿದೆ ಎಂದರು.
ಇದನ್ನೂ ಓದಿ : ವೀಕೆಂಡ್ ಕರ್ಫ್ಯೂ ವೇಳೆ 'ಮದ್ಯ ಮಾರಾಟ' : ರಾಜ್ಯ ಸರ್ಕಾರ ಹೇಳಿದ್ದೇನು?
ಸಂಪುಟ ತಿಳಿಸಿರುವ ಪ್ರಸ್ತಾವಣೆಯಲ್ಲಿ ಏನಿದೆ?
ನಗರದಿಂದ ವಿಮಾನ ನಿಲ್ದಾಣಕ್ಕೆ ಅಸ್ತಿತ್ಯದಲ್ಲಿರುವ ಮೇಲೆ ತುವೆಯ ಪಶ್ಚಿಮಕ್ಕೆ ಹೊಸ 4 ಪಥದ ಮೇಲ್ಸೇತುವೆ ಹಾಗು ಈ ಮೇಲ್ಸೇತುವೆ 3 ಪಥಗಳು ವಿಮಾನ ನಿಲ್ದಾಣ(Airport)ದ ಕಡೆಗೆ ಮುಂದುವರಿಯುತ್ತವೆ ಮತ್ತು 2 ವಥಗಳು ತುಮಕೂರು ಕಡೆಗೆ ಇಳಿಯಲಿವೆ.
ತುಮಕೂರಿನಿಂದ ಕೆ.ಆರ್.ಪುರದ ಕಡೆಗೆ ಹೊಸ 3 ಪಥದ ಕೆಳಸೇತುವೆ.
ಕೆಆರ್ ಪುರದಿಂದ ನಗರಕ್ಕೆ ಹೊಸ 2-ವಥದ ಮೇಲ್ಸೇತುವೆ.
ಕೆಆರ್ ಪುರಂ ನಿಂದ ವಿಮಾನ ನಿಲ್ದಾಣಕ್ಕೆ ಹೊಸ 2 ಪಥದ ಮೇಲ್ಸೇತುವೆ.
ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲ್ಸೇತುವೆ ಪೂರ್ವಕ್ಕೆ ಹೊಸ 3 ಪಥದ ಮೇಲ್ಸೇತುವೆಯನ್ನು ವಿಮಾನ ನಿಲ್ದಾಣದಿಂದ ನಗರಕ್ಕೆ ಪ್ರಸ್ತಾಪಿಸಲಾಗಿದೆ. ಕೆಆರ್ ಪುರಂನಿಂದ ನಗರಕ್ಕೆ 2 ಪಥದ ಮೇಲ್ಸೇತುವೆಯ ಹೊಸ ಮೇಲ್ಸೇತುವೆಯಲ್ಲಿ ವಿಲೀನಗೊಳ್ಳಲಿದೆ ಮತ್ತು 4 ಪಥ ಆಗಿ ಇಳಿಯಲಿವೆ.
ಇದನ್ನೂ ಓದಿ : Bangalore:1200 ರೂ. ಗಾಗಿ ಬಿತ್ತು ಹೆಣ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನನ್ನು ಕೊಂದೇ ಬಿಟ್ಟರು..
ವಿಮಾನ ನಿಲ್ದಾಣದಿಂದ ಕೆಆರ್ ಪುರಂ: ಅಸ್ತಿತ್ವದಲ್ಲಿರುವ ಸರ್ವೀಸ್ ರಸ್ತೆಯನ್ನು 2 ಪಥದಿಂದ 3-ಪಥ ವಾಗಿ ಅಗಲೀಕರಣಗೊಳಿಸುವುದು.
ವಿಮಾನ ನಿಲ್ದಾಣದಿಂದ ತುಮಕೂರಿಗೆ: ಅಸ್ತಿತ್ವದಲ್ಲಿರುವ 2 ಪಥದ ರಸ್ತೆಗೆ ಸಮಾನಾಂತರವಾಗಿ ಹೊಸ 4- ಪಥದ ನೆಲಮಟ್ಟದ (at grade) ರಸ್ತೆ.
ಕೆ.ಆರ್: ಪುರದಿಂದ ತುಮಕೂರಿಗೆ ಈಗಿರುವ ನೇರ ರಸ್ತೆಯನ್ನು 4 ಪಥದ ರಸ್ತೆಯಾಗಿ ಅಗಲೀಕರಣಗೊಳಿಸುವುದು,
ತುಮಕೂರಿನಿಂದ ನಗರಕ್ಕೆ ಕೆ ಆರ್ ಪುರಂ ಕಡೆಗೆ ಹೊಸ 2- ಪಥದ ಯು-ಟರ್ನ್ ಅಂಡರ್‌ಪಾಸ್
ಇದಲ್ಲದೆ ಬನಶಂಕರಿ ಮೆಟ್ರೋ ನಿಲ್ದಾಣದಿಂದ ಟಿಟಿಎಂಸಿ ಕಟ್ಟಡಕ್ಕೆ ಮತ್ತು ರಸ್ತೆದಾಟಲು ಸ್ಕೈವಾಕ್ ನಿರ್ಮಾಣದ ಬಗ್ಗೆಯೂ ವರದಿ ಕೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.