ಬೆಂಗಳೂರು: ಕಳೆದೆರಡು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಧಾರಕಾರಾವಾಗಿ ಮಳೆ (Rain) ಸುರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.‌ ನಿನ್ನೆ ರಾತ್ರಿ ಸುರಿದ ಮಳೆಗೆ ನಗರದಾದ್ಯಂತ 20ಕ್ಕೂ ಹೆಚ್ಚು ಮರಗಳು ನೆಲಕ್ಕೆ ಉರುಳಿವೆ.


COMMERCIAL BREAK
SCROLL TO CONTINUE READING

ಕೆಲವು ಕಡೆ ರಾಜಕಾಲುವೆಯ ತಡೆಗೋಡೆ ಒಡೆದು ಮನೆಗಳಿಗೆ ಮೋರಿ‌ ನೀರು ನುಗ್ಗುತ್ತಿದೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಪ್ರಮೋದ್ ಲೇಔಟ್ ಬಳಿ ಇರೋ‌ ರಾಜಕಾಲುವೆಯ ತಡೆಗೋಡೆ ಕುಸಿತದಿಂದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ‌.


ಪ್ರಮೋದ್ ಲೇಔಟ್ 4, 5 ಹಾಗೂ 6ನೇ ಕ್ರಾಸ್ ನಲ್ಲಿರುವ ಸುಮಾರು 40ಕ್ಕೂ ಹೆಚ್ಚು ಮನೆಗಳು ಮೋರಿ ನೀರು ತುಂಬಿಕೊಂಡು ಜನ‌ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆಯೊಳಗೆ ಸುಮಾರು 5 ಅಡಿಯಷ್ಟು ನೀರು ತುಂಬಿಕೊಂಡಿದೆ. ಇದರ ಪರಿಣಾಮವಾಗಿ ಮನೆಯಲ್ಲಿದ್ದ ದಿನಸಿ ಸಾಮಾನು, ದಾಖಲೆ ಪತ್ರಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾನಿಯಾಗಿವೆ ಎಂದು ಹೇಳಲಾಗುತ್ತಿದೆ.


ರಾತ್ರಿ ಮಳೆ ಸುರಿದು ನಿಂತಿದ್ದರೂ‌ ರಾಜಕಾಲುವೆಯಿಂದ ನೀರು ಬರುತ್ತಿರುವುದು ನಿಂತಿಲ್ಲ. ಬೆಳಿಗ್ಗೆಯೂ ಇಲ್ಲಿನ‌ ಜನ ಮನೆಗೆ ತುಂಬಿಕೊಂಡಿದ್ದ ನೀರನ್ನು ‌ಹೊರಗೆ ಕಳಿಸುವ ಹರಸಾಹಸ ಮಾಡುತ್ತಿದ್ದಾರೆ.

ಇದಲ್ಲದೆ ಮೊನ್ನೆ ರಾತ್ರಿ ಸುರಿದ ಮಳೆಗೆ ಇನ್ನೂ ಸುಧಾರಿಸಿಕೊಳ್ಳದ ಹೊರಮಾವು ವಾರ್ಡ್ ಜನತೆ ಮನೆಯೊಳಗೆ ಅಪಾರ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ ಕಂಗಾಲಾಗಿದ್ದಾರೆ.‌ಪ್ರಮುಖ ರಸ್ತೆಗಳಲ್ಲಿದ್ದ ಮಳೆನೀರು ಕಡಿಮೆಯಾಗಿದೆ. ಆದರೆ ವಿವಿಧ ಲೇಔಟ್ ನಿವಾಸಿಗಳ ತೊಂದರೆ ಮಾತ್ರ‌ ಕಡಿಮೆ ಆಗಿಲ್ಲ.