ಹುಬ್ಬಳ್ಳಿ: ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಹುಬ್ಬಳ್ಳಿಯಲ್ಲಿ ಮಂಗಳವಾರ (ಮೇ 14) ಸಂಜೆ ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಸಿಡಿಲು, ಭಾರೀ ಗಾಳಿ, ಮಳೆ ಜನಜೀವನ ಸಂರ್ಪೂಣ ಅಸ್ತವ್ಯಸ್ತಗೊಳಿಸಿತು.


COMMERCIAL BREAK
SCROLL TO CONTINUE READING

ಸಂಜೆ 4:30ರಿಂದ ಆರಂಭವಾದ ಭಾರೀ ಮಳೆಯಿಂದ (Heavy Rain) ಒಂದೆಡೆ ವಾತಾವರಣ ತಂಪಾದರೆ, ಇನ್ನೊಂದೆಡೆ ತಗ್ಗು ಪ್ರದೇಶದ ಮನೆ, ಅಪಾರ್ಟಮೆಂಟ್, ವಸತಿ ಬಡಾವಣೆಗಳಿಗೆ ನೀರು ನುಗ್ಗಿ ಜನರ ನೆಮ್ಮದಿ ಕದಡಿತು. ರಾತ್ರಿಯೂ ಮಳೆ ಸುರಿದದ್ದರಿಂದ ಜನರು ತಲ್ಲಣಗೊಂಡರು.


ಮೊನ್ನೆ ಮೊನ್ನೆಯಷ್ಟೇ (ಮೇ 11) ಸುರಿದ ಮಳೆಯಿಂದ ಸಾಕಷ್ಟು ಹಾನಿಯಾಗಿತ್ತು ಇನ್ನು ಆ ತೊಂದರೆಯಿಂದ ಹೊರ ಭಾರದ ಜನರು ಮತ್ತೇ ಇಂದು ವರುಣನ ರುದ್ರನರ್ತನೆಗೆ ಕಂಗಾಲಾದರು.


ಇದನ್ನೂ ಓದಿ- ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಐದು ದಿನ ಬಿರುಗಾಳಿ ಸಹಿತ ಮಳೆ:ಈ ಜಿಲ್ಲೆಗಳಲ್ಲಿಯೂ ಅಬ್ಬರಿಸಲಿದ್ದಾನೆ ವರುಣ


ವಾಣಿಜ್ಯ ಮಳಿಗಳಿಗೆ ನೀರು!
ಹುಬ್ಬಳ್ಳಿಯ (Hubli) ದಾಜಿಬಾನಪೇಟ, ಕಮರಿಪೇಟ, ದುರ್ಗದಬೈಲ್, ಕೋಯಿನ್ ರಸ್ತೆ, ವಿದ್ಯಾನಗರ, ಮೇದಾರ ಓಣಿ, ಹಳೇಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಮಳೆ ನೀರು (Rain Water) ಮನೆಗಳಿಗೆ ನುಗ್ಗಿತ್ತು. ಅಲ್ಲದೇ ಬೀದಿಬದಿ ವ್ಯಾಪಾರ, ವಾಣಿಜ್ಯ ಮಳಿಗೆಗಳಿಗೂ ಹಾನಿ ಮಾಡಿದೆ. ರಸ್ತೆಗಳೆಲ್ಲ ತುಂಬಿ ಹರಿದವು. ಇದರಿಂದ ಸಂಚಾರ ಕೆಲಹೊತ್ತು ಸ್ಥಗಿತಗೊಂಡಿತ್ತು.


ಸ್ಮಾರ್ಟ್ ಸಿಟಿ ಯೋಜನೆಯಡಿ (Smart City Project) ಅಭಿವೃದ್ಧಿ ಪಡಿಸಲಾಗಿರುವ ಹುಬ್ಬಳ್ಳಿ ಧಾರವಾಡದಲ್ಲಿ ಒಂದೇ ಮಳೆಗೆ ಎಲ್ಲೆಂದರಲ್ಲಿ ನೀರು ನಿಂತು ಜನರು ತೊಂದರೆ ಪಡುವಂತಾಗಿದೆ. ಸ್ಮಾರ್ಟ ಸಿಟಿ ಅಭಿವೃದ್ಧಿ ಎಂದರೆ ಇದೇನಾ? ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿತ್ತು. 


ಇದನ್ನೂ ಓದಿ- ಬಿಜೆಪಿ ನಾಯಕರೇ, ನಮ್ಮ ಸರ್ಕಾರದ ಚಿಂತೆ ಬಿಡಿ ಅದು ಐದು ವರ್ಷ ಸುಭದ್ರವಾಗಿದೆ: ಸಿಎಂ ಸಿದ್ದರಾಮಯ್ಯ


ಇಲ್ಲಿಯ ವಿದ್ಯಾನಗರ , ಕೊಪ್ಪೀಕರ್ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಮಳೆ ನೀರು ನುಗ್ಗಿದೆ. ಗುಡುಗು, ಸಿಡಿಲು ಹಾಗೂ ಭಾರಿ ಗಾಳಿಯಿಂದಾಗಿ ಅನೇಕ ಕಡೆಗಳಲ್ಲಿ ಇಂದು ಕೂಡಾ ಮರಗಳು ಧರೆಗುರುಳಿವೆ. ರಸ್ತೆ ಪಕ್ಕದ ಅನೇಕ ಗಿಡಗಳ ಟೊಂಗೆಗಳು ಮುರಿದು ಬಿದ್ದಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.