ಮಂಡ್ಯ: ನೆನ್ನೆ ರಾತ್ರಿ ಸಕ್ಕರೆನಾಡು ಮಂಡ್ಯ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು ಕೆರೆ, ಕಟ್ಟೆ, ನದಿಗಳು ಉಕ್ಕಿ ಹರಿಯುತ್ತಿವೆ. ಇನ್ನು ನಿನ್ನೆಯಿಂದ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ.


COMMERCIAL BREAK
SCROLL TO CONTINUE READING

ಹೌದು! ನೆನ್ನೆರಾತ್ರಿ ಮಂಡ್ಯ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು ಜಣ ನ ಜೀವನ ಅಸ್ತವ್ಯಸ್ಥಗೊಂಡು ಜನರ ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯ ನಗರದಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ನಗರದ ರಸ್ತೆಗಳು ಕಾಲುವೆಯಂತಾಗಿ ಜನರು ಮತ್ತು ವಾಹನ ಸವಾರರು ಪರದಾಡುವಂತಾಗಿತ್ತು. 


ಮಂಡ್ಯ ತಾಲೂಕಿನ ಬೂದನೂರು ಬಳಿ ಕೆರೆ ತುಂಬಿ ಹರಿದ ಪರಿಣಾಮ ಮೈಸೂರು-ಬೆಂಗಳೂರು ಹೆದ್ದಾರಿ ಮುಳುಗಡೆಯಾಗಿ ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರ ಬಂದ್ ಆಗಿದೆ. ಇದಲ್ಲದೆ, ಮಂಡ್ಯ ತಾಲೂಕಿನ ಹೊಳಲು ಗ್ರಾಮಕ್ಕೆ ಮಳೆ‌ ನೀರು ನುಗ್ಗಿದ್ದು ಜನರು ಪರದಾಡಯವಂತಾಗಿದೆ. ಬಹುತೇಕ ಕೆರೆಗಳು ತುಂಬಿ ಹರಿಯುತ್ತಿರುವ ಕಾರಣ ಮಂಡ್ಯ-ನಾಗಮಂಗಲ, ಮಂಡ್ಯ- ಮೇಲು ಕೋಟೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.


ಇದನ್ನೂ ಓದಿ- ಮುಂದಿನ ನಾಲ್ಕೈದು ದಿನ ದೇಶದ ಈ ಭಾಗಗಳಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಐಎಂಡಿ


ಮದ್ದೂರು ಬಳಿ ಬಿದರಕೋಟೆ ಸಮೀಪ ಶಿಂಷಾ ಕಾಲುವೆ ಒಡೆದಿದ್ದು ರಸ್ತೆ ಮತ್ತು ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ಮದ್ದೂರು ಬಿದರಕೋಟೆ ಸಂಪರ್ಕ ಕಡಿತಗೊಂಡಿದೆ. ಮದ್ದೂರಿನಲ್ಲಿ ಮಳೆ ನೀರಿನಿಂದ ಶಿಂಷಾ ನದಿ ಉಕ್ಕಿ ಹರಿದು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಮತ್ತೊಂದೆಡೆ ಶ್ರೀರಂಗಪಟ್ಟಣದಲ್ಲಿ ಕೂಡ ಧಾರಾಕಾರ ಮಳೆಗೆ ಕಾವೇರಿ ಮತ್ತು ಲೋಕಪಾವನಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.


ಶ್ರೀರಂಗಪಟ್ಟಣದಲ್ಲಿ ಕೂಡ ಧಾರಾಕಾರ ಮಳೆಗೆ ತಗ್ಗು ಪ್ರದೇಶದಲ್ಲಿನ ಜನ ವಸತಿ ಪ್ರದೇಶಗಳು ಜಲಾವೃತವಾಗಿ ಜನರು ಪರದಾಡುವಂತಾಗಿತ್ತು. ಇನ್ನು ನಾಗಮಂಗಲದಲ್ಲಿ ಕೂಡ ಬಹುತೇಕ ಕೆರೆಗಳು ಕೂಡ ಧಾರಾಕಾರ ಮಳೆಯಿಂದಾಗಿ ಭರ್ತಿಯಾಗಿ ಕೋಡಿ ಬಿದ್ದು ಉಕ್ಕಿ ಹರಿಯುತ್ತಿದ್ದು, ನಾಗಮಂಗಲ ಪಟ್ಟಣದ ಸಮೀಪ ಇರುವ ಕೆರೆಯ ನೀರು ನಾಗಮಂಗಲ ಮಂಡ್ಯ ರಸ್ತೆಯ ಮೇಲೆ ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ.


ಇನ್ನು ಕೆ.ಆರ್.ಪೇಟೆ ತಾಲೂಕಿನಲ್ಲೂ‌ ಕೂಡ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆರೆಯೊಂದು ಒಡೆದು ನೂರಾರು ಎಕರೆ ರೈತರ ಜಮೀನು ಜಲಾವೃತವಾಗಿ ರೈತರ ಬೆಳೆ ನಾಶವಾಗಿದೆ. ಇದಲ್ಲದೆ, ಮಂಡ್ಯದ  ಉಮ್ಮಡಹಳ್ಳಿ ಗ್ರಾಮದಲ್ಲಿ ರೈತರ‌ ಮನೆ ಗೋಡೆ ಕುಸಿದು ಕೊಟ್ಟಿಗೆಯಲ್ಲಿದ್ದ 45 ಕ್ಕೂ‌ ಹೆಚ್ಚು ಕುರಿಗಳು ಮೃತಪಟ್ಟಿವೆ. ಇದಲ್ಲದೆ ಜಿಲ್ಲೆಯ ಹಲವು ಕಡೆ ಧಾರಾಕಾರ ಮಳೆಗೆ ಹಲವು ಮನೆಗಳು ಕುಸಿದಿರುವ ಪ್ರಕರಣ ಕೂಡ ವರದಿಯಾಗಿದೆ.


ಇದನ್ನೂ ಓದಿ- ರಾಜ್ಯದಲ್ಲಿ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ


ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಜನ ಜೀವನ  ಅಸ್ತವ್ಯಸ್ಥಗೊಂಡಿದ್ದು,ಜನರು ಪರದಾಡುವಂತಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.