Heavy Rainfall : ಮಳೆಯ ಆರ್ಭಟಕ್ಕೆ ತತ್ತರಿಸಿದ ರಾಜ್ಯ : ಮನೆಗಳಿಗೆ ನುಗ್ಗಿದ ನೀರು, ರೈತನ ಬೆಳೆ ಹಾನಿ!
ಮಳೆಯ ಹೊಡೆತಕ್ಕೆ ಸಿಲುಕಿದ ಕರುನಾಡಿನ ಸೇತುವೆಗಳು ಜಲಾವೃತವಾಗಿದೆ.. ಸಂಚಾರ ಅಸ್ತವ್ಯಸ್ತವಾಗಿದೆ.. ನಿರಂತರ ಮಳೆಯಿಂದ ಜನರು ಹೈರಾಣರಾಗಿದ್ದಾರೆ.. ಈ ಕುರಿತದ ಒಂದು ಸಂಪೂರ್ಣ ವರದಿ ಇಲ್ಲಿದೆ ನೋಡಿ..
ಬೆಂಗಳೂರು : ರಾಜ್ಯದಲ್ಲಿ ಕಳೆದೊಂದು ವಾರದಿಂದ ವರುಣ ಅಬ್ಬರಿಸಿ ಬೊಬ್ಬರಿಯುತ್ತಿದ್ದಾನೆ. ಮಳೆಯ ಹೊಡೆತಕ್ಕೆ ಸಿಲುಕಿದ ಕರುನಾಡಿನ ಸೇತುವೆಗಳು ಜಲಾವೃತವಾಗಿದೆ.. ಸಂಚಾರ ಅಸ್ತವ್ಯಸ್ತವಾಗಿದೆ.. ನಿರಂತರ ಮಳೆಯಿಂದ ಜನರು ಹೈರಾಣರಾಗಿದ್ದಾರೆ.. ಈ ಕುರಿತದ ಒಂದು ಸಂಪೂರ್ಣ ವರದಿ ಇಲ್ಲಿದೆ ನೋಡಿ..
ಮಳೆಯಿಂದ ತುಂಬಿ ಹರಿಯುತ್ತಿರೋ ಹಳ್ಳ ಕೊಳ್ಳಗಳು.. ಭೋರ್ಗರೆದು ಧುಮ್ಮಕುತ್ತಿರೊ ಜಲಪಾತಗಳು.. ಮಳೆ ನೀರಲ್ಲಿ ಕೊಚ್ಚಿಹೋದ ಬೆಳೆಗಳು.. ಮನೆಯೊಳಗೆ ನುಗ್ಗುತ್ತಿರೋ ನೀರು.. ಧರಗುರುಳುತ್ತಿರೋ ಮನೆಗಳು.. ಮಳೆಯಿಂದ ಜನಜೀವನ ಬೀದಿ ಪಾಲಾಗಿದೆ. ವಾಸಕ್ಕೆ ಸೂರೇ ಇಲ್ಲ. ನೆಮ್ಮದಿಯಾಗಿ ಬದಕುವಂತಿಲ್ಲ, ಮಳೆಯ ಎಫೆಕ್ಟ್‌ನಿಂದಾಗಿ ಜನರು ಬದುಕು ವಿಲವಿಲ ಅಂತಿದೆ. ವರುಣನ ಆರ್ಭಟಕ್ಕೆ ಕರುನಾಡು ತತ್ತರಿಸಿ ಹೋಗಿದೆ. ಕರಾವಳಿ ಸ್ಥಿತಿಯಂತು ಕೇಳತೀರದಾಗಿದೆ. ದೋ ಅಂತ ಸುರಿಯುತ್ತಿರೋ ಮಳೆಯಿಂದಾಗಿ ಒಂದರ ಮೇಲೊಂದು ಸಮಸ್ಯೆಗಳ ಪ್ರಹಾರ. ಜನ ಸಾಮಾನ್ಯರನ್ನ ಹಿಂಡಿ ಇಪ್ಪೆ ಮಾಡಿದೆ. ಹೌದು ಕಳೆದೊಂದು ವಾರದಿಂದ ಬಿಟ್ಟು ಬಿಡದೇ ಬರ್ತಾ ಇರೋ ಮಳೆಯಿಂದಾಗಿ ಜನರ ಬದುಕು ಅಕ್ಷರಶ: ಬೀದಿಗೆ ಬಂದಿದೆ. ಮಳೆಯ ಹೊಡೆತದಿಂದ ರಾಜ್ಯದ ಜನ ನಿತ್ಯ ನಿದ್ರೆ ಇಲ್ಲದೇ, ಆಹಾರವಿಲ್ಲದೇ ಪರದಾಡುತ್ತಿದ್ದಾರೆ.
[[{"fid":"248348","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಇದನ್ನೂ ಓದಿ : ವ್ಯಾಪಾರಿ ಮನೋಭಾವದ ಶಿಕ್ಷಣ ಸಚಿವರನ್ನು ವಜಾಗೊಳಿಸಿ: ಮೋದಿಗೆ ಪತ್ರ ಬರೆದ ರುಪ್ಸಾ
ಹೌದು, ಕಳೆದೊಂದು ವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ಮಂಗಳೂರಿನ ಕಂದಾವರ ಗ್ರಾಮದ ಮುಗೇರು ಪ್ರದೇಶ ಜಲಾವೃತಗೊಂಡಿದೆ. ಮಳೆ ನೀರಿನಿಂದ ಹತ್ತಾರು ಮನೆಗಳು ಜಲಾವೃತಗೊಂಡಿವೆ. ಇನ್ನು ಮಳೆ ನೀರು ಹರಿದು ಹೋಗಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನಿರ್ಮಾಣವಾದ ಡ್ಯಾಂ ಹಿನ್ನೀರಿನಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ. ಹೀಗಾಗಿ ಹೊರಗಿನ ಸಂಪರ್ಕ ಕಡಿತಗೊಂಡು ಮನೆಗಳು ದ್ವೀಪದಂತಾಗಿದೆ. ದೋಣಿಯ ಮೂಲಕ ತಮ್ಮ ದೈನಿಂದಿನ ಕೆಲಸ ನಿರ್ವಹಣೆ, ಜಾನುವಾರುಗಳಿಗೂ ಮೇವಿಲ್ಲದೆ ಸಂಕಷ್ಟದ ಪರಿಸ್ಥಿತಿ ಇದೆ. ಇನ್ನು ಜಿಲ್ಲೆಯ ಸೂರಿಕುಮೇರು ಎಂಬಲ್ಲಿನ್ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಬದಿ ಅಗೆದಿದ್ದ ಗುಡ್ಡ ಕುಸಿತಗೊಂಡು ಮಣ್ಣು ರಾಷ್ಟ್ರೀಯ ಹೆದ್ದಾರಿಗೆ ಬಿದ್ದಿದೆ. ಇದರಿಂದ ವಾಹನಗಳ ಸಂಚಾರ ಕೆಲವು ಹೊತ್ತು ಸ್ಥಗಿತಗೊಳಿಸಲಾಗಿತ್ತು.
ಇತ್ತ ಬೆಳಗಾವಿ ಜಿಲ್ಲೆಯಲ್ಲೂ ರಣ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ನಿರಂತರ ಮಳೆಗೆ 20ಕ್ಕೂ ಅಧಿಕ ಮನೆಗಳು ಧರೆಗುರುಳಿದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕತ್ರಿದಡ್ಡಿ, ದಿಂಡಲಕೊಪ್ಪ, ಗಲಗಿನಮಡಾ, ನಿಚ್ಚಣಕಿ, ದೇಗಾಂವ ಗ್ರಾಮಗಳಲ್ಲಿ ಧಾರಾಕಾರ ಮಳೆಗೆ 20ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಪಶ್ಚಿಮ ಘಟ್ಟದಲ್ಲಿರುವ ಖಾನಾಪುರ ತಾಲೂಕಿನ ಗುರ್ಲಗುಂಜಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಕಟ್ಟಡ ಕುಸಿದಿದೆ. ಅದೃಷ್ಟವಶಾತ್ ಶಾಲೆಗೆ ರಜೆಯಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಇತ್ತ ಮುಡೇವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲೂ ಗೋಡೆ ಕುಸಿದಿದೆ. ಖಾನಾಪೂರ ತಾಲೂಕಿನಲ್ಲಿ 2 ದಿನಗಳ ಅಂತರದಲ್ಲಿ 2 ಶಾಲಾ ಗೋಡೆಗಳು ಕುಸಿದು ಹಾನಿಯಾಗಿದೆ.
[[{"fid":"248349","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]
ಕಾವೇರಿ ನದಿಯಲ್ಲಿ ಭಾರೀ ಪ್ರವಾಹ ಹಿನ್ನೆಲೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್‌ನಲ್ಲಿರುವ ನಿಮಿಷಾಂಭ ದೇಗುಲದ ಬಳಿ ಸ್ನಾನಘಟ್ಟ ಸಂಪೂರ್ಣ ಜಲಾವೃತವಾಗಿದೆ. ನಿಮಿಷಾಂಭ ದೇಗುಲದ ಬಳಿ ನದಿಗೆ ಬ್ಯಾರಿಕೇಡ್ ಹಾಕಿ ಭಕ್ತರಿಗೆ ನಿರ್ಬಂಧ ಹೇರಿದ್ದಾರೆ. ಅಲ್ಲದೇ ಕಾವೇರಿ ನದಿ ಪ್ರವಾಹದಿಂದ ನದಿ ಪಾತ್ರರ ರೈತರ ಜಮೀನು ಜಲಾವೃತವಾಗಿ ನೀರಿನ ರಭಸಕ್ಕೆ ರೈತರ ಬೆಳೆಗಳು ಕೊಚ್ಚಿ ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನು ಟಿಪ್ಪು ಕಾಲದಲ್ಲಿ ನಿರ್ಮಾಣವಾಗಿದ್ದ ಇತಿಹಾಸ ಪ್ರಸಿದ್ಧವಾಗಿರೋ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇದನ್ನೂ ಓದಿ : ಹಾಸಿಗೆ ದಿಂಬಿನಲ್ಲಿ ಲಂಚ, ಬಚ್ಚಲಮನೆಯ ಚೊಂಬಿನಲ್ಲೂ ಲಂಚ: ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ
ಕಾವೇರಿಯ ಹೊರಹರಿವು ಹೆಚ್ಚುತ್ತಿದ್ದಂತೆ ರಾಜ್ಯದ ಗಡಿಯಲ್ಲಿರುವ ಪ್ರಸಿದ್ಧ ಹೊಗೆನಕಲ್ ಜಲಪಾತ ಮತ್ತು ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಫಾಲ್ಸ್ ಭೋರ್ಗರೆದು ಧುಮ್ಮಿಕುತ್ತಿದೆ. ಹಾಲಿನ ನೊರೆಯಂತೆ ದುಮ್ಮಿಕ್ಕುತ್ತಿರುವ ಭರಚುಕ್ಕಿ ವೈಭವ ರುದ್ರ ರಮಣೀಯವಾಗಿದ್ದು ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮಳೆಯ ನಡುವೆಯೂ ಬರುತ್ತಿದ್ದಾರೆ. ಇನ್ನು, ಕರ್ನಾಟಕದ ಗಡಿಯಲ್ಲಿರುವ ಭಾರತದ ನಯಾಗತ ಎಂದೇ ಕರೆಯುವ ಹೊಗೆನಕಲ್ ಜಲಪಾತ ಭೋರ್ಗರೆದು ಧುಮ್ಮಿಕುತ್ತಿದ್ದು ಅಪರೂಪದ ದೃಶ್ಯ ಕಾವ್ಯವೇ ರೂಪುಗೊಂಡಿದೆ.
[[{"fid":"248352","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"4":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"4"}}]]
ನಾಳೆಯಿಂದ ಎರಡು ದಿನಗಳ ಕಾಲ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕಾರವಾರ ಜಿಲ್ಲೆಗಳಿಗೆ ಭೇಟಿ ನೀಡಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ನಾಳೆ ಕೊಡಗು, ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಉಡುಪಿಯಲ್ಲಿ ವಾಸ್ತವ್ಯ ಮಾಡಿ ನಾಡಿದ್ದು ಉಡುಪಿ ಮತ್ತು ಕಾರವಾರ ಜಿಲ್ಲೆಯಲ್ಲಿ ಪರಿಶೀಲನೆ ಮಾಡ್ತೀನಿ ಅಂತ ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ