ಬೆಂಗಳೂರು: ಒಂದು ಕಡೆ ಕಾಂಗ್ರೆಸ್ ಪಕ್ಷ ತನ್ನ ಪಟ್ಟಿ ಬಿಡುಗಡೆಗೆ ದೆಹಲಿಯಲ್ಲಿ ಸಭೆ ನಡೆಸಿದರೆ,ಇತ್ತ ಕಡೆ ಜೆಡಿಎಸ್ ಬೆಂಗಳೂರಿನಲ್ಲಿ ಸಚಿವರ ಪಟ್ಟಿಯ ಬಿಡುಗಡೆಗೊಳಿಸಲು ಬ್ಯುಸಿಯಾಗಿದೆ.ಒಟ್ಟು 12 ಸ್ಥಾನಗಳಲ್ಲಿ ಜೆಡಿಎಸ್ ಈಗಾಗಲೇ  ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಒಳಗೊಂಡಂತೆ 10 ಸಚಿವರ ಪಟ್ಟಿಯನ್ನು  ಸಿದ್ದಪಡಿಸಿದೆ ಎನ್ನಲಾಗಿದೆ. ಇನ್ನೆರಡು ಸಚಿವ ಸ್ಥಾನಗಳನ್ನು ಸದ್ಯ ಖಾಲಿ ಬಿಡಲಾಗುತ್ತದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಈಗ ಮಾಧ್ಯಮಗಳಿಗೆ ಸಿಕ್ಕ ಮಾಹಿತಿ ಪ್ರಕಾರ ಈ ಬಾರಿ ಜೆಡಿಎಸ್ ಎಂಎಲ್ಸಿ ಗಳಿಗೆ ಸಚಿವ ಸ್ಥಾನ ನೀಡದಿರಲು ತೀರ್ಮಾನಿಸಿದೆ ಎನ್ನಲಾಗಿದೆ.ಬಿಎಸ್ಪಿಯೊಂದಿಗೆ ಜೆಡಿಎಸ್  ಚುನಾವಣಾ ಪೂರ್ವ ಮೈತ್ರಿಯ ಕಾರಣದಿಂದಾಗಿ ಕೊಳ್ಳೆಗಾಲದ ಬಿಎಸ್ಪಿ ಶಾಸಕ ಎನ್ ಮಹೇಶ್ ಅವರಿಗೆ ಸಚಿವ ಸ್ಥಾನ ಲಭಿಸಲಿದೆ ಎನ್ನಲಾಗಿದೆ.


 ಜೆಡಿಎಸ್ ಸಚಿವರ ಪಟ್ಟಿ


ಎಚ್ ಡಿ ಕುಮಾರಸ್ವಾಮಿ( ಮುಖ್ಯಮಂತ್ರಿ)
ಎನ್ ಮಹೇಶ್
ಎಚ್ ಡಿ ರೇವಣ್ಣ
ಸಾ ರಾ ಮಹೇಶ್
ಸತ್ಯನಾರಾಯಣ 
ಜಿ ಟಿ ದೇವೇಗೌಡ
ಎಚ್ ಕೆ ಕುಮಾರ ಸ್ವಾಮಿ
ಸಿ ಎಸ್ ಪುಟ್ಟರಾಜು
ಬಂಡೆಪ್ಪ ಕಾಶೆಂಪುರ
ವೆಂಕಟರಾವ್ ನಾಡ ಗೌಡ