ಟಿಪ್ಪು ಜಯಂತಿ ತಡೆಗೆ ಹೈಕೋರ್ಟ್ ನಕಾರ
ಟಿಪ್ಪು ಜಯಂತಿ ಆಚರಣೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ಕೈಗೆತ್ತಿಕೊಂಡ ರಾಜ್ಯ ವಿಭಾಗೀಯ ಹೈಕೋರ್ಟ್ ಅರ್ಜಿಯನ್ನು ವಜಾಗೊಲಿಸಿದೆ. ಈ ಹಂತದಲ್ಲಿ ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ನಮ್ಮ ಪೂರ್ವಜರನ್ನು ಕೊಂದವರ ಆಚರಣೆ ಸರಿಯೇ? ನಮ್ಮ ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಅವಕಾಶ ನೀಡಬಾರದು ಎಂದು ಕೊಡಗಿನ ಮಂಜುನಾಥ್ ಚಿನ್ನಪ್ಪ ಪರ ವಕೀಲರು ವಾದಿಸಿದರು. ಇದನ್ನು ಆಲಿಸಿದ ವಿಭಾಗೀಯ ಪೀಠವು ಆಚರಣೆಗೆ ಮೂರು ದಿನ ಇರುವಾಗ ಈ ಬಗ್ಗೆ ತೀರ್ಪು ನೀಡಲು ಸಾಧ್ಯವಿಲ್ಲ. ಇದಕ್ಕೆ ಏನಾದರೂ ಕಾನೂನು ತೊಡಕುಗಳಿದ್ದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡಬಹುದು. ಇಲ್ಲವಾದರೆ ಈ ವಿಚಾರದಲ್ಲಿ ಕೋರ್ಟ್ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.
ಹೈಕೋರ್ಟ್ ನ ಈ ನಿರ್ಧಾರದಿಂದಾಗಿ 'ಟಿಪ್ಪು ಜಯಂತಿ' ಆಚರಣೆಗೆ ಇದ್ದ ತೊಂದರೆ ನಿವಾರಣೆಯಾದಂತಾಗಿದೆ.