ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದ ಹೈಕೋರ್ಟ್
ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಕಾಲಕ್ರಮೇಣ ಇಬ್ಬರ ನಡುವಿನ ಪ್ರೀತಿ ಕ್ಷೀಣಿಸಿದೆ ಎಂದ ಮಾತ್ರಕ್ಕೆ ಅವರ ನಡುವಿನ ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಪುನರುಚ್ಚರಿಸಿದೆ.
ಬೆಂಗಳೂರು: ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಕಾಲಕ್ರಮೇಣ ಇಬ್ಬರ ನಡುವಿನ ಪ್ರೀತಿ ಕ್ಷೀಣಿಸಿದೆ ಎಂದ ಮಾತ್ರಕ್ಕೆ ಅವರ ನಡುವಿನ ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಪುನರುಚ್ಚರಿಸಿದೆ.
ಜತೆಗೆ ಪ್ರೀತಿಸಿ ದೈಹಿಕ ಸಂಬಂಧ ಬೆಳೆಸಿದ ನಂತರ ಮದುವೆಯಾಗದ ಹಿನ್ನೆಲೆಯಲ್ಲಿಯುವತಿಯೊಬ್ಬಳು ಯುವಕನ ಮೇಲೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿದೆ.
ಈ ವಿಚಾರವಾಗಿ ತಮ್ಮ ವಿರುದ್ಧ ಬೆಂಗಳೂರಿನ ಜಗಜೀವನ್ ರಾಮ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೋರ್ವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಯುವಕ- ಯುವತಿ ನಡುವೆ ಪರಸ್ಪರ ಪ್ರೀತಿ ಇದ್ದು, ಆರು ವರ್ಷಗಳ ಕಾಲ ಜತೆ ಇದ್ದರು. ಈ ನಡುವೆ ಒಮ್ಮತದ ದೈಹಿಕ ಸಂಪರ್ಕ ಹೊಂದಿದ್ದಾರೆ. ಈ ಪೂರ್ಣ ಪ್ರಕ್ರಿಯೆಯಲ್ಲಿ ಅರ್ಜಿದಾರರೂ ಎಲ್ಲಿಯೂ ದೂರುದಾರೆಗೆ ಮದುವೆಯಾಗುವುದಾಗಿ ಭರವಸೆ ನೀಡಿಲ್ಲ ಎನ್ನುವುದನ್ನು ಪೀಠದ ಗಮನಕ್ಕೆ ತಂದರು.ಅಲ್ಲದೆ, ಅರ್ಜಿದಾರರು ದೂರುದಾರೆಯನ್ನು ನಿರ್ಲಕ್ಷಿಸಿದ ಹಿನ್ನೆಲೆ ಹಾಗೂ ಬೇರೊಂದು ಹುಡುಗಿಯ ಜತೆಗೆ ಮದುವೆ ನಿಶ್ಚಯವಾಗಿರುವುದನ್ನು ಆಕೆಯ ಬಳಿ ಹೇಳಿಕೊಂಡಾಗ ಆಕೆ 10 ಲಕ್ಷ ರೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ನಂತರ ಅರ್ಜಿದಾರರು ಆಕೆಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಈಗಾಗಲೇ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ ಹಾಗಾಗಿ ಅರ್ಜಿಯನ್ನು ಮಾನ್ಯ ಮಾಡಬೇಕು ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ವಿಪಕ್ಷಗಳ ಟೀಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಈ ವೇಳೆ ದೂರುದಾರೆ ಪರ ವಾದ ಮಂಡಿಸಿದ ವಕೀಲರು, ಪ್ರಕರಣದಲ್ಲಿ ದೂರುದಾರೆಗೆ ಬೆದರಿಕೆಯೊಡ್ಡಿ ದೂರುದಾರೆಯ ಜತೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಬಂಧ ಹೊಂದಿದ್ದರು.ಇದು ಒಮ್ಮತದಿಂದ ನಡೆಯದೇ ಒತ್ತಾಯ ಪೂರ್ವಕವಾಗಿ ನಡೆದಿದೆ ಎಂದರು.ಜತೆಗೆ ಈ ರೀತಿ ವಿವಾಹ ಪೂರ್ವಕವಾಗಿ ಸಂಬಂಧ ಹೊಂದಿ ಮದುವೆಯಾಗುವುದಾಗಿ ಭರವಸೆ ನೀಡಿ ಈಗ ಒಲ್ಲೆ ಎನ್ನುತ್ತಿದ್ದು ಹಾಗಾಗಿ ಪ್ರಕರಣ ರದ್ದುಗೊಳಿಸದಂತೆ ಮನವಿ ಮಾಡಿದರು.
ಇದನ್ನೂ ಓದಿ: ಅಧಿಕಾರಿಗಳ ತಪ್ಪಿಗೆ ಸಿದ್ದರಾಮಯ್ಯ ಏಕೆ ರಾಜೀನಾಮೆ ನೀಡಬೇಕು? ಡಿಸಿಎಂ ಡಿಕೆ ಶಿವಕುಮಾರ್
ವಾದ- ಪ್ರತಿವಾದ ಆಲಿಸಿದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ ಅರ್ಜಿದಾರರ ಹಾಗೂ ದೂರುದಾರೆ ಆರು ವರ್ಷಗಳ ಕಾಲ ಪರಸ್ಪರ -ಪ್ರೀತಿಯಲ್ಲಿದ್ದರು ಈ ನಡುವೆ ಇಬ್ಬರು ಒಪ್ಪಿಗೆಯಿಂದ ದೈಹಿಕ ಸಂಬಂಧ ಹೊಂದಿದ್ದಾರೆ. ಕಾಲಕ್ರಮೇಣ ಇಬ್ಬರ ನಡುವಿನ ಪ್ರೀತಿ ಕ್ಷೀಣಿಸಿದೆ ಎಂದ ಮಾತ್ರಕ್ಕೆ ,ಅವರ ಒಪ್ಪಿತ ದೈಹಿಕ ಸಂಬಂಧವನ್ನು ಅತ್ಯಾಚಾರವಾಗಿ ಪರಿಗಣಿಸಲಾಗದು ಎಂದಿದೆ. ಜತೆಗೆ ಪ್ರೀತಿಸಿ ದೈಹಿಕ ಸಂಬಂಧ ಬೆಳೆಸಿದ ನಂತರ ಮದುವೆಯಾಗದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಅರ್ಜಿದಾರರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಮತ್ತು 417 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಿದೆ.
ಏನಿದು ಪ್ರಕರಣ ?
ಅರ್ಜಿದಾರರು ಮೊಬೈಲ್ ಶಾಪ್ ಹೊಂದಿದ್ದರು. ದೂರುದಾರೆ ರಿಚಾರ್ಚ್ ಮಾಡಿಸುವ ನೆಪದಲ್ಲಿ ಆಗಾಗ್ಗೆ ಮೊಬೈಲ್ ಶಾಪ್ ಭೇಟಿ ನೀಡುತ್ತಿದ್ದು ಇಬ್ಬರ ನಡುವೆ ಆತ್ಮೀಯತೆ ಮೂಡಿತ್ತು ಬಳಿಕ ಇಬ್ಬರೂ ಆರು ವರ್ಷಗಳ ಕಾಲ ಪ್ರೀತಿಯಲಿದ್ದು ಆ ವೇಳೆ ದೈಹಿಕ ಸಂಬಂಧ ಹೊಂದಿದ್ದರು. ಕೆಲವು ದಿನಗಳ ಬಳಿಕ ಅರ್ಜಿದಾರರು ದೂರುದಾರೆಯನ್ನು ನಿರ್ಲಕ್ಷಿಸಿದ ವೇಳೆ ಆಕೆ ಮೊಬೈಲ್ ಶಾಪ್ ಗೆ ಭೇಟಿ ನೀಡಿ ಪ್ರಶ್ನಿಸಿದ್ದಾಳೆ. ಆಗ ಅರ್ಜಿದಾರರು ತಮಗೆ ಬೇರೊಂದು ಹುಡುಗಿಯ ಜತೆಗೆ ವಿವಾಹ ನಿಶ್ಚಯ ವಾಗಿದ್ದು ತೊಂದರೆ ನೀಡದಂತೆ ಮನವಿ ಮಾಡಿದ್ದಾರೆ. ಬಳಿಕ ಆಕೆ 2018 ರ ಜು. 3 ರಂದು ಅರ್ಜಿದಾರರ ವಿರುದ್ದ ಬೆಂಗಳೂರಿನ ಜಗಜೀವನ್ ರಾಮ್ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಇದನ್ನು ರದ್ದುಕೋರಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.