ಬೆಂಗಳೂರು: ಇಲ್ಲಿನ ಕರ್ನಾಟಕ ಉಚ್ಛ ನ್ಯಾಯಾಲಯ ಪೀಠದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 221 ಪ್ರಕರಣಗಳಲ್ಲಿ ಸುಮಾರು 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಪರಿಹಾರಕ್ಕೆ ಇತ್ಯರ್ಥಪಡಿಸಲಾಯಿತು.


COMMERCIAL BREAK
SCROLL TO CONTINUE READING

ಹಿರಿಯ ನ್ಯಾಯಮೂರ್ತಿ ಕೆ.ಎಸ್.ಮುದಗಲ್, ನ್ಯಾಯಮೂರ್ತಿಗಳಾದ ಪ್ರದೀಪ ಸಿಂಗ ಯೆರೂರ್,ಎಂ.ಜಿ.ಎಸ್.ಕಮಲ್,ಅದಾಲತ್‌ನ ಸದಸ್ಯರುಗಳಾದ ಎಮ್.ಟಿ.ಬಂಗಿ, ಡಿ.ಎಲ್.ಲಾಡಖಾನ ಮತ್ತು ಎಮ್.ಸಿ.ಹುಕ್ಕೇರಿ ಅವರನ್ನೊಳಗೊಂಡ 3 ಪೀಠಗಳಲ್ಲಿ ಒಟ್ಟು 1227 ಪ್ರಕರಣಗಳನ್ನು ವಿಚಾರಣೆಗೆ ಗುರುತಿಸಿಕೊಂಡು,ಅವುಗಳಲ್ಲಿ ಒಟ್ಟು 221 ಪ್ರಕರಣಗಳನ್ನು ರೂ .4,46,53,063 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.


ನ್ಯಾಯಮೂರ್ತಿಗಳಾದ ಎಂ.ಜಿ.ಎಸ್.ಕಮಾಲ್ ಹಾಗೂ ಎಮ್.ಸಿ.ಹುಕ್ಕೇರಿ ವಕೀಲರವರ ಲೋಕ ಅದಲಾತ್ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 30 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ರಾಜಿ-ಸಂಧಾನದ ಮೂಲಕ ಉಭಯ ಪಕ್ಷಗಾರರ ಸಮಕ್ಷಮ ಇತ್ಯರ್ಥಪಡಿಸಿರುವುದು ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ನ ಹೆಗ್ಗಳಿಕೆಯಾಗಿದೆ.ಇದರಿಂದ ಉಭಯ ಪಕ್ಷಗಾರರಿಗೆ ತುಂಬಾ ಅನುಕೂಲವಾಗಿದ್ದು ವ್ಯಾಜ್ಯ ಮುಕ್ತರಾಗಿರುತ್ತಾರೆ ಎಂದು ಹೈಕೋರ್ಟಿನ ನ್ಯಾಯಾಂಗದ ಅಧಿಕ ವಿಲೇಖನಾಧಿಕಾರಿ ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ವೆಂಕಟೇಶ ಆರ್.ಹುಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.