ಬೀದರ್: ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಇಂದು ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಕಬ್ಬು ಬೆಳೆಗಾರರ ಜೊತೆ ಸಂವಾದ ನಡೆಸಿದರು.


COMMERCIAL BREAK
SCROLL TO CONTINUE READING

ಬೀದರ್ ಕಬ್ಬು ಬೆಳೆಗಾರರ ಜೊತೆ ಅಮಿತ್ ಶಾ ಸಭೆಯ ಹೈಲೈಟ್ಸ್ ಇಂತಿದೆ.


* ಮೋದಿ ಸರ್ಕಾರ ಕಬ್ಬು ಬೆಳೆಗಾರ ಅಭ್ಯುದಯಕ್ಕಾಗಿ ಪೆಟ್ರೋಲಿಗೆ ಎಥನಾಲ್ ಬಳಕೆ ಹೆಚ್ಚಿಸಿದೆ. ಎಥನಾಲಿನ ಬೆಲೆಯನ್ನು ಹನ್ನೊಂದು ರೂಪಾಯಿಯಿಂದ ನಲವತ್ತೆಂಟು ರುಪಾಯಿಗೆ ಹೆಚ್ಚಿಸಿದ್ದು ಕಬ್ಬು ಬೆಳೆಗಾರರ ಒಳಿತಿಗಾಗಿ.
* ಕರ್ನಾಟಕದಲ್ಲೂ ಉತ್ತರ ಪ್ರದೇಶದ ಮಾದರಿಯಲ್ಲಿ ಸಕ್ಕರೆ ಕಾರ್ಖಾನೆಗಳ ಕಾಯ್ದೆ ತರುತ್ತೇವೆ. ಇದನ್ನು ನಾವು ಪ್ರಣಾಳಿಕೆಯಲ್ಲಿ ಕೂಡ ಪ್ರಕಟಿಸುತ್ತೇವೆ.
* ಉತ್ತರ ಪ್ರದೇಶದಲ್ಲಿ ಕಬ್ಬು ಬೆಳೆಗಾರರ ದುಡ್ಡನ್ನು ಕೇವಲ 90 ದಿನಗಳಲ್ಲಿ ಒದಗಿಸುವ ಕಾನೂನನ್ನು ಭಾರತೀಯ ಜನತಾ ಪಕ್ಷ ಜಾರಿಗೆ ತಂದಿದೆ.
* ಕ್ಷೇತ್ರದ ಸಕ್ಕರೆ ಕಾರ್ಖಾನೆಗಳನ್ನು  ಯಾವುದೇ ತಡವಿಲ್ಲದೆ ಶುರು ಮಾಡಿಸುತ್ತೇವೆ.