ಉಡುಪಿ: ನಗರದ ಒಂದು ಸರ್ಕಾರಿ ಕಾಲೇಜಿನಲ್ಲಿ ಹೊತ್ತಿದೆ ಒಂದೇ ಒಂದು ಸಣ್ಣ ಹಿಜಾಬ್‌ ಕಿಡಿ ಇಡೀ ದೇಶವನ್ನೆ ವ್ಯಾಪಿಸಿ ಧರ್ಮ ದೇಗುಲಗಳಲ್ಲಿ ಧಗ ಧಗನೇ ಹೊತ್ತಿ ಉರಿದಿತ್ತು.. ಬಳಿಕ ನ್ಯಾಯಾಲಯ ತೀರ್ಪಿನಿಂದ ತಣ್ಣಗಾಗಿತ್ತು..  ರಾಜ್ಯದಲ್ಲಿ ಇನ್ನೇನು ಹಿಜಾಬ್‌ ವಿವಾದ ಸದ್ಯಕ್ಕೆ ಸೈಲೆಂಟ್‌ ಆಯ್ತು ಎನ್ನುವಷ್ಠರಲ್ಲೆ ಮತ್ತೆ ಕರಾವಳಿಯಲ್ಲಿ ಹಿಜಾಬ್‌ ಕಿಚ್ಚು ಉರಿಯುತ್ತಿದೆ.. ಮಂಗಳೂರಿನ ವಿವಿ ಕಾಲೇಜಿನಲ್ಲಿ ಹಿಜಾಬ್‌ ವಾರ್‌ ಮತ್ತೆ ಆರಂಭವಾಗಿದೆ. ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನ ವಿವಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಕೋರ್ಟ್‌ ತೀರ್ಪು ಉಲ್ಲಂಘಿಸಿ ಹಿಜಾಬ್‌ ಧರಿಸಲು ಅವಕಾಶ ನೀಡಿದ್ದಾರೆ ಎಂದು ಹಿಂದೂ ವಿದ್ಯಾರ್ಥಿಗಳು ಪ್ರೊಟೆಸ್ಟ್‌ ಮಾಡಿದ್ರು. ಅಲ್ಲದೇ ನಮಗೆ ವಿವಿ ಅವರಣದಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ನೀಡಿ ಎಂದು ಪ್ರತಿಭಟನೆ ಮಾಡಿದ್ರು.


COMMERCIAL BREAK
SCROLL TO CONTINUE READING

ಮಂಗಳೂರು ವಿವಿ ಕಾಲೇಜಿನಲ್ಲಿ ಇಂದೂ ಸಹ ಮುಸ್ಲಿಂ ಸಮುದಾಯದ 12 ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಆಗಮಿಸಿದ್ರು.. ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಭಾರ ಪ್ರಾಂಶುಪಾಲೆ ಡಾ.ಅನುಸೂಯ ರೈ ತರಗತಿಗೆ ಬಾರದಂತೆ ಪ್ರವೇಶ ನಿರಾಕರಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯರು ಕಾಲೇಜು ಗ್ರಂಥಾಲಯದತ್ತ ತೆರಳಿದರು. ಅಲ್ಲೂ ವಿದ್ಯಾರ್ಥಿನಿಯರನ್ನು ತಡೆದು ಪ್ರಾಂಶುಪಾಲೆ ಬುದ್ಧಿ ಹೇಳಿ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದ್ದಾರೆ. ನಿನ್ನೆ ಶಾಸಕ ವೇದವ್ಯಾಸ್‌ ಕಾಮತ್‌, ಮಂಗಳೂರು ವಿವಿ ಕುಲಪತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಲೇಜು ತರಗತಿ ಮತ್ತು ಆವರಣದಲ್ಲಿ ಹಿಜಾಬ್‌ ಧರಿಸುವಂತಿಲ್ಲ ಎಂದು ನಿರ್ಧಾರ ತೆಗೆದುಕೊಳ್ಳಲಾಗಿತ್ತು.


ʻವಿದ್ಯಾರ್ಥಿಗಳು ಹಿಜಾಬ್ ಬಿಟ್ಟು ವಿದ್ಯಾರ್ಜನೆ ಕಡೆ ಗಮನ ಕೊಡಲಿʼ


ಇನ್ನು ಈ ಸಂಬಂಧ ಸಿಎಂ ಬೊಮ್ಮಾಯಿ ಅವ್ರು ಹಿಜಾಬ್ ವಿವಾದ ಮಾಡುವ ಅಗತ್ಯ ಇಲ್ಲ. ಈಗಾಗಲೇ ಕೋರ್ಟ್ ತನ್ನ ಆದೇಶ ಕೊಟ್ಟಿದೆ ಅದನ್ನ ಪಾಲಿಸಬೇಕು ಎಂದು ಬೆಂಗಳೂರು ಆರ್.ಟಿ.ನಗರ ನಿವಾಸದಲ್ಲಿ ಹೇಳಿದ್ದಾರೆ. ಸಿಂಡಿಕೇಟ್ ನಿರ್ಣಯ ಮ್ಯಾನೇಜ್ಮೆಂಟ್‌ನವ್ರು ಏನ್ ನಿರ್ಧಾರ ಮಾಡ್ತಾರೋ ಅದನ್ನ ಪಾಲಿಸಬೇಕು.. ವಿದ್ಯಾರ್ಥಿಗಳು ಹಿಜಾಬ್ ಬಿಟ್ಟು ವಿದ್ಯಾರ್ಜನೆ ಕಡೆ ಗಮನ ಕೊಡಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. 


ಇದನ್ನೂ ಓದಿ: NRIಗಳೇ ಗಮನಿಸಿ: ಎಕ್ಸ್‌ಪ್ರೆಸ್ ಎಂಟ್ರಿ ಸಿಸ್ಟಮ್‌ನಲ್ಲಿ ಬದಲಾವಣೆ ತರಲು ಕೆನಡಾ ಚಿಂತನೆ


ʻಕರಾವಳಿಯ ಹಿಜಾಬ್‌ ಕಿಚ್ಚಿನ ಹಿಂದ ಕಾಂಗ್ರೆಸ್‌ ಕೈವಾಡ ಇದೆʼ


ಇದೇ ವಿಚಾರವಾಗಿ ಕೊಪ್ಪಳದಲ್ಲಿ ಶಿಕ್ಷಣ ಸಚಿವ ಬಿ,ಸಿ, ನಾಗೇಶ್‌ ಮಾತನಾಡಿ, ಕರಾವಳಿಯಲ್ಲಿನ ಹಿಜಾಬ್ ವಿವಾದ ಹಿಂದೆ ಕಾಂಗ್ರೆಸ್‌ ಕೈವಾಡ ಇದೆ.. ಇದರ ಹಿಂದೆ ಕಾಂಗ್ರೆಸ್ ಪಿತೂರಿ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ರು.. ನಾವು ಹಿಜಾಬ್ ನೋಡಿತ್ತಿಲ್ಲ‌. ಅದರ ಹಿಂದಿನ ಪಿತೂರಿ ನೋಡ್ತೀದಿವಿ‌ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ರು.. ಇದೇ ವೇಳೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಹಿಜಬ್ ಧರಿಸಿ ಶಾಲೆಗೆ ಬರುವಂತಿಲ್ಲ.. ಆದೇಶ ಪಾಲನೆ ಮಾಡದಿದ್ದರೆ ಅಂಥವರಿಗೆ ಶಾಲೆಗೆ ಪ್ರವೇಶ ಇಲ್ಲ ಎಂದು ಖಡಕ್‌ ಆಗಿಯೇ ಹೇಳಿದರು.. ರಾಜ್ಯದಲ್ಲಿ ವಿರೋಧ ಪಕ್ಷಗಳು ಶಿಕ್ಷಣ ಕ್ಷೇತ್ರದಲ್ಲಿ ‌ಶಾಂತಿ ಕದಡುತ್ತಿವೆ ಎಂದು ಗುಡುಗಿದ್ರು. ಒಟ್ಟಾರೆ ರಾಜ್ಯದಲ್ಲಿ ತಣ್ಣಾಗಾಗಿತ್ತು ಎಂಬ ಹಿಜಬ್‌ ಜ್ವಾಲೆ ಮತ್ತೆ ಸದ್ದು ಮಾಡುತ್ತಿದೆ. ವಿದ್ಯಾರ್ಥಿಗಳು ಹಿಜಬ್‌ ಹೋರಾಟ ಬಿಟ್ಟು ಭವಿಷ್ಯದ ಬಗ್ಗೆ ಚಿಂತಿಸಬೇಕು.. ನ್ಯಾಯಲಯದ ತೀರ್ಪನ್ನು ಪಾಲಿಸುವುದು ದೇಶದ ಪ್ರತಿಯೊಬ್ಬರ ನಾಗರೀಕರ ಕರ್ತವ್ಯವಾಗಿದೆ. ಮಂಗಳೂರಿನಲ್ಲಿ ಹೊತ್ತಿರುವ ಹಿಜಾಬ್‌ ಜ್ವಾಲೆ ಮುಂದೆ ಯಾವ ರೂಪ ಪಡೆಯಲಿದೆ ಎಂಬುವುದನ್ನ ಕಾದು ನೋಡಬೇಕಿದೆ.


ಇದನ್ನೂ ಓದಿ: ಅಚ್ಚರಿಯಾದರೂ ಸತ್ಯ! ಡಿವೋರ್ಸ್‌ಗೆ ಕಾರಣವಾಯ್ತು ನೂಡಲ್ಸ್!!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.