ಬೆಂಗಳೂರು : ದುಬಾರಿ ದುನಿಯಾದಲ್ಲಿ ಮತ್ತೆ ಜನ ಸಾಮಾನ್ಯನ ಮೇಲೆ ಬೆಲೆ ಏರಿಕೆ ಬರೆ ಬಿದ್ದಿದೆ. ನಂದಿನಿ ಹಾಲಿನ ದರವನ್ನು ಏರಿಕೆ ಮಾಡಲು ಕೆಎಂ ಎಫ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರತಿ ಲೀಟರ್ ಹಾಲಿನ ದರದ ಮೇಲೆ  3 ರೂಪಾಯಿಯನ್ನು ಹೆಚ್ಚಿಸಲಾಗುವುದು. ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬರಲಿದೆ.


COMMERCIAL BREAK
SCROLL TO CONTINUE READING

ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಳ ಮಾಡಲಾಗಿದೆ.  ಕೆಎಂ ಎಫ್ ಆಡಳಿತ ಮಂಡಳಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ನೂತನ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಹೆಚ್ಚಳವಾದ ಸಂಪೂರ್ಣ ದರವನ್ನು ರೈತರಿಗೆ ನೀಡಲಾಗುವುದು. ಈ ಮೂಲಕ ಹೈನುಗಾರಿಕೆ ಮಾಡುವ ರೈತರಿಗೆ ಬಂಪರ್ ಕೊಡುಗೆ ನೀಡಿದಂತಾಗಿದೆ. 


ಇದನ್ನೂ ಓದಿ :  DK Shivakumar : ರಾಜ್ಯದ ಶಾಲೆಗಳ ಅವ್ಯವಸ್ಥೆ ಕುರಿತ ವಿಡಿಯೋ ಬಿಡುಗಡೆ ಮಾಡಿದ ಡಿಕೆ ಶಿವಕುಮಾರ್‌


2020ರ ಫೆಬ್ರವರಿಯಂದು ಕೊನೆಯ ಬಾರಿ ನಂದಿನಿ ಹಾಲಿನ ದರವನ್ನು  ಏರಿಸಲಾಗಿತ್ತು. 2020ರಲ್ಲಿ ಪ್ರತಿ ಲೀಟರ್ ಗೆ 2ರೂ ಹೆಚ್ಚಳ  ಮಾಡಿ ಆದೇಶ  ಹೊರಡಿಸಲಾಗಿತ್ತು. 


ಹಾಲು ಮೊಸರು ದರದಲ್ಲಿ ಬದಲಾವಣೆ  :
ಟೋನ್ಡ್ ಹಾಲು - 37 ರಿಂದ 40
ಹೊಮೋಜಿನೈಸ್ಡ್ ಹಾಲು - 38 ರಿಂದ 41
ಹೊಮೊಜಿನೈಸ್ಡ್ ಹಸುವಿನ ಹಾಲು - 42 ರಿಂದ 45
ಸ್ಪೆಷಲ್ ಹಾಲು - 43 ರಿಂದ 46
ಶುಭಂ ಹಾಲು - 43 ರಿಂದ 46
ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು - 44 ರಿಂದ 47
ಸಮೃದ್ಧಿ ಹಾಲು - 48 ರಿಂದ 51
ಸಂತೃಪ್ತಿ ಹಾಲು- 51 ರಿಂದ 53
ಡಬಲ್ ಟೋನ್ಡ್ ಹಾಲು - 36ರಿಂದ 39
ಮೊಸರು ಪ್ರತಿ ಕೆಜಿ - 45 ರಿಂದ 48


ಇದನ್ನೂ ಓದಿ :  Bangalore : ನೋಟ್ ಎಕ್ಸ್ ಚೆಂಜ್ ನೆಪದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಹಣ ಕದ್ದು ಪರಾರಿ


ನಂದಿನಿ ಸೇರಿದಂತೆ ಬೇರೆ ಬೇರೆ ಹಾಲುಗಳ ದರ ಹೀಗಿದೆ :
ನಂದಿನಿ - 37
ದೊಡ್ಲ-  44
ಜೆರ್ಸಿ - 44
ಹೆರಿಟೇಜ್ - 48
ತಿರುಮಲ - 48
ಗೋವರ್ಧನ್ - 49
ಆರೋಗ್ಯ - 50


ಬೇರೆ ಬೇರೆ ರಾಜ್ಯಗಳಲ್ಲಿ ಹಾಲಿ ದರ ಹೀಗಿದೆ :
ಕರ್ನಾಟಕ - 37
ಆಂಧ್ರಪ್ರದೇಶ - 55
ತಮಿಳುನಾಡು-  40
ಕೇರಳ - 46
ಮಹಾರಾಷ್ಟ್ರ - 51
ದೆಹಲಿ - 51
ಗುಜರಾತ್- 50

 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.