ಬೆಂಗಳೂರು: ನಗರದ ಚಾಮರಾಜಪೇಟೆ ಈದ್ಗಾ ಮೈದಾನದ ಬಳಿ ಗಣೇಶ ಪ್ರತಿಷ್ಠಾಪನೆ ವಿಚಾರ ಮುಗಿಯುವಂತೆ ಕಾಣುತ್ತಿಲ್ಲ. ಇವತ್ತೂ ಕೂಡಾ ಹಿಂದೂ ಕಾರ್ಯಕರ್ತರು ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.


COMMERCIAL BREAK
SCROLL TO CONTINUE READING

ಕಳೆದ ಮೂರು ವರ್ಷಗಳಿಂದ ಈದ್ಗಾ ಮೈದಾನ ಸಮೀಪದಲ್ಲಿರುವ ಅಯ್ಯಪ್ಪ ದೇವಾಲಯದ ಬಳಿ ಗಣೇಶನ ಪ್ರತಿಷ್ಟಾಪನೆ ಮಾಡಲಾಗುತ್ತಿತ್ತು. ಈ ಬಾರಿ ಮಲೆ ಮಹದೇಶ್ವರ ದೇವಾಲಯದ ಮುಂಭಾಗದಲ್ಲಿ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಪೊಲೀಸರಿಗೆ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದರು.


ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ವಾರವೂ ಮಳೆ ಆರ್ಭಟ : ಹವಾಮಾನ ಇಲಾಖೆ ಮಾಹಿತಿ


ಅಲ್ಲದೆ, ಪಾದರಾಯನಪುರ, ಜೆಜೆಆರ್ ನಗರ, ಸಿರ್ಸಿ ಸರ್ಕಲ್, ಗೋರಿಪಾಳ್ಯದ ಒಳಗೆ ಗಣೇಶ ಮೂರ್ತಿ ಮೆರವಣಿಗೆಗೆ ಅವಕಾಶ ಕಲ್ಪಿಸುವಂತೆ ಮನವಿ ಬೇಡಿಕೆ ಇಟ್ಟಿದ್ದರು. ಆದರೆ, ‌ಈದ್ಗಾ ಐಡಲ್ ಹತ್ತಿರದಲ್ಲೇ ಇರುವ ಕಾರಣ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ದಾರೆ. ಇದರಿಂದಾಗಿ ಪೊಲೀಸ್‌ ಠಾಣೆ ಮುಂದೆ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.


ಪೊಲೀಸರು ಹೇಳೋದೇನು..? 


ಮಲೆ ಮಹದೇಶ್ವರ ದೇವಸ್ಥಾನ ಬಳಿ ಗಣೇಶನನ್ನ ಕೂರಿಸ್ತೀವಿ ಅಂತಾ ಅನುಮತಿ ಕೇಳ್ತಿದ್ದಾರೆ. ನಾವು ಈ ಹಿಂದಿನಂತೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯೇ ಗಣೇಶ ಪ್ರತಿಷ್ಠಾಪನೆ ಮಾಡಲು ಹೇಳ್ತಿದ್ದೀವಿ. ಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಈ ರೀತಿ ತಿಳಿಸಲಾಗಿದೆ. ಅಲ್ಲದೇ ಮೆರವಣಿಗೆ ವಿಚಾರದಲ್ಲೂ ಕೂಡ ಗೊಂದಲ ಇದೆ. ಈ ಹಿಂದೆ ಅಯ್ಯಪ್ಪಸ್ವಾಮಿ ದೇವಾಲಯದಿಂದ ಯಡಿಯೂರು ಕೆರೆಗೆ ತೆಗೆದುಕೊಂಡು ಮೂರ್ತಿ ವಿಸರ್ಜನೆ ಮಾಡ್ತಿದ್ರು. ಆದ್ರೆ ಈ ಬಾರಿ ಜೆಜೆ ನಗರ, ಪಾದರಾಯನ ಪುರ, ಟೌನ್ ಹಾಲ್, ಚಾಮರಾಜಪೇಟೆ, ಸಿರ್ಸಿ ಸರ್ಕಲ್ ಏರಿಯಾದಲ್ಲಿ ಮೆರವಣಿಗೆ ಮಾಡಲು ಅನುಮತಿ ಕೇಳ್ತಿದ್ದಾರೆ. ನಾವು ಅನುಮತಿ ನೀಡದಿದ್ದಕ್ಕೆ ಠಾಣೆಗೆ ಬಂದು ಪ್ರತಿಭಟನೆ ಮಾಡ್ತಿದ್ರು. ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.