ಹಿಂದುತ್ವ ಮತ್ತು ಆರ್ಎಸ್ಎಸ್ ʼPFIʼ ಮೇನ್ ಟಾರ್ಗೆಟ್..!
ಪಿಎಫ್‌ಐ ಬಂಧಿತ ಆರೋಪಿಗಳ ಮೊಬೈಲ್ ರಿಟ್ರೀವ್ ಡೇಟಾದಲ್ಲಿ ಸ್ಪೋಟಕ ಮಾಹಿತಿಗಳು ಲಭ್ಯವಾಗಿವೆ. ಕೆಜಿ ಹಳ್ಳಿ ಪೊಲೀಸರಿಗೆ ದೊರೆತಿರುವ ರಿಪೋರ್ಟ್‌ನಲ್ಲಿ 55 ಮೊಬೈಲ್‌ಗಳಲ್ಲಿ ಅಡಗಿದ್ದ ಸಂಚಿನ ರಹಸ್ಯ ಬಯಲಾಗಿದೆ. ರಿಟ್ರೀವ್ ರಿಪೋರ್ಟ್‌ನಲ್ಲಿ ಹಿಂದುತ್ವ ಹಾಗೂ ಆರ್‌ಎಸ್ಎಸ್ ಸಿದ್ದಾಂತದ ಬಗ್ಗೆ ಚರ್ಚೆಯಾಗಿದ್ದು, ಕೆಲವು ಆರ್‌ಎಸ್‌ಎಸ್ ಕಚೇರಿಗಳ ಫೋಟೋಗಳು ಲಭಿಸಿವೆ.
ಬೆಂಗಳೂರು : ಪಿಎಫ್‌ಐ ಬಂಧಿತ ಆರೋಪಿಗಳ ಮೊಬೈಲ್ ರಿಟ್ರೀವ್ ಡೇಟಾದಲ್ಲಿ ಸ್ಪೋಟಕ ಮಾಹಿತಿಗಳು ಲಭ್ಯವಾಗಿವೆ. ಕೆಜಿ ಹಳ್ಳಿ ಪೊಲೀಸರಿಗೆ ದೊರೆತಿರುವ ರಿಪೋರ್ಟ್‌ನಲ್ಲಿ 55 ಮೊಬೈಲ್‌ಗಳಲ್ಲಿ ಅಡಗಿದ್ದ ಸಂಚಿನ ರಹಸ್ಯ ಬಯಲಾಗಿದೆ. ರಿಟ್ರೀವ್ ರಿಪೋರ್ಟ್‌ನಲ್ಲಿ ಹಿಂದುತ್ವ ಹಾಗೂ ಆರ್‌ಎಸ್ಎಸ್ ಸಿದ್ದಾಂತದ ಬಗ್ಗೆ ಚರ್ಚೆಯಾಗಿದ್ದು, ಕೆಲವು ಆರ್‌ಎಸ್‌ಎಸ್ ಕಚೇರಿಗಳ ಫೋಟೋಗಳು ಲಭಿಸಿವೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಮೊಬೈಲ್‌ಗಳಲ್ಲಿ ಹಿಂದೂ ಮುಖಂಡರ ಪೋಟೋಗಳು ಪತ್ತೆ ಕೂಡ ಪತ್ತೆಯಾಗಿದೆ.
ರಾಜಕೀಯವಾಗಿ ಪಿಎಫ್‌ಐ ಸಂಘಟನೆ ಬಲಪಡಿಸಲು ಟೆಕ್ನಿಕಲ್ ಆಗಿ ಪ್ಲಾನ್ ಮಾಡಲಾಗಿತ್ತು. ದೇಶ ಹಾಗೂ ರಾಜ್ಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದ ಹಿಜಾಬ್, ಹಲಾಲ್ ಕಟ್, ಆಜಾನ್ ವಿವಾದದ ಬಳಿಕ ಪಿಎಫ್‌ಐ ಸಂಘಟನೆ ಮತ್ತಷ್ಟು ಚುರುಕುಗೊಂಡಿತ್ತು. ಇನ್ನೂ ಮಸಲ್ಮಾನರು ಮುಸಲ್ಮಾನರ ಬಳಿಯೇ ವ್ಯವಹಾರ ನಡೆಸುವಂತೆ ಚರ್ಚೆ ಹಾಗೂ ಪ್ರೇರೇಪಣೆ ನೀಡಲಾಗುತ್ತಿತ್ತು. ವಾರಕ್ಕೊಮ್ಮೆ ಸಭೆ ನಡೆಸಿ ಮುಸ್ಲಿಂಮರು ಯಾವ ರೀತಿ ಒಗ್ಗಟ್ಟಾಗಿರಬೇಕು. ತಮ್ಮ ವಿರುದ್ಧ ಇರುವವರನ್ನು ಯಾವ ರೀತಿ ಸದೆಬಡಿಯಬೇಕು ಎಂದು ಹೇಳಿಕೊಡಲಾಗುತ್ತಿತ್ತು.
ಇದನ್ನೂ ಓದಿ: Congress President Election: ಖರ್ಗೆ-ತರೂರ್ ಮಧ್ಯೆ ನೇರ ಹಣಾಹಣಿ, ತ್ರಿಪಾಠಿ ನಾಮಪತ್ರ ರದ್ದು
ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರ್ಗಿ, ದಾವಣಗೆರೆ, ಉಡುಪಿ ಹಾಗೂ ಕೇರಳದಲ್ಲಿ ಸರಣಿ ಸಭೆಗಳ ಬಗ್ಗೆ ಆರೋಪಿಗಳು ಚರ್ಚೆ ಮಾಡಿರೋದು ಮೊಬೈಲ್ ಡೇಟಾದಲ್ಲಿ ಪತ್ತೆಯಾಗಿದೆ. ಇನ್ನೂ ಸಭೆ ಸೇರುವ ಹಿಂದಿನ ದಿನ ಆಯೋಜಕರಿಂದ ವಿಶೇಷ ಸೂಚನೆ ರವಾನೆಯಾಗುತ್ತಿತ್ತು. ಸಭೆಗೆ ಬರುವವರು ಬಸ್ಸಿನಲ್ಲೇ ಬರಬೇಕು. ಯಾರು ಸಹ ಸಭೆಗೆ ಮೊಬೈಲ್ ತರಬೇಡಿ ಎಂದು ಸೂಚನೆ ನೀಡಲಾಗುತ್ತಿತ್ತು.
ಸಭೆಯ ಸ್ಥಳ ಪಕ್ಕ ಆದ್ಮೇಲೆ ಎಲ್ಲಿರಿಗೂ ಲೊಕೇಷನ್ ಪಾಸ್ ಮಾಡಿ ಬಳಿಕ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸಿ ಹಾಕುತ್ತಿದ್ದರು. ಪ್ರಮುಖವಾಗಿ ಸಭೆಯಲ್ಲಿ ಇಸ್ಲಾಮಿಕ್ ಪಾಠ ಭೋಧಿಸಲಾಗುತ್ತಿತ್ತು. ಇಸ್ಲಾಂ ಧರ್ಮವನ್ನು ಹೇಗೆ ಬೆಳೆಸಬೇಕು, ಧರ್ಮ ಪ್ರಚಾರ ಹೇಗೆ ಮಾಡಬೇಕು ಎಂಬ ಬಗ್ಗೆ ಸಹ ತರಬೇತಿ ನೀಡಲಾಗುತ್ತಿತ್ತು. ಈ
ಅಂಶಗಳು ಐ ಶ್ರೇಡರ್ ಆಪ್ ರಿಟ್ರೀವ್ ವರದಿಯಲ್ಲಿ ಬೆಳಕಿಗೆ ಬಂದಿವೆ. ಇನ್ನೂ ಯಾರ ಕಣ್ಣಿಗೂ ಬೀಳದಂತೆ ಆರೋಪಿಗಳು ಹಣಕಾಸು ನೋಡಿಕೊಳ್ಳುತ್ತಿದ್ದರು. ಗ್ರಾಮ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಸಂಘಟನೆ ಮಾಡಿ ಸ್ಥಳೀಯ ಮಟ್ಟದಲ್ಲೇ ಹಣ ಸಂಗ್ರಹ ಹಾಗೂ ವೆಚ್ಚ ಮಾಡುತ್ತಿದ್ದರು. ಹೀಗಾಗಿಯೇ ದಾಳಿ ವೇಳೆ ಕೇವಲ 33 ಲಕ್ಷ ಪತ್ತೆಯಾಗಿತ್ತು.
ಇದನ್ನೂ ಓದಿ: ಕಿಚ್ಚ ಸುದೀಪ್ ಮಗಳ ಧ್ವನಿಗೆ ಮರುಳಾದ ಫ್ಯಾನ್ಸ್ : ʼಸೋ ಕ್ಯೂಟ್ ವಾಯ್ಸ್ ಸಾನ್ವಿʼ..!
ಸದ್ಯ ಆರೋಪಿಗಳ ವಿದ್ಯಾಭ್ಯಾಸ ಹಾಗೂ ಕೆಲಸಗಳ ಬಗ್ಗೆ ತನಿಖೆ ಮುಂದುವರೆದಿದ್ದು, ಕಳೆದ ನಾಲ್ಕೈದು ತಿಂಗಳ ಟ್ರಾವೆಲ್ ಹಿಸ್ಟರಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಶಿವಮೊಗ್ಗದ ಹಿಂದು ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿ ಬೇಲ್ ಕೊಡಿಸಿರುವ ಬಗ್ಗೆಯೂ ಮಾತುಕತೆ ನಡೆಸಿರುವ ಬಗ್ಗೆ ಮಾಹಿತಿ ದೊರೆತಿದೆ. ಇನ್ನೂ ಬಂಧಿತರು ಆರ್‌ಆರ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳು ಸಂಪರ್ಕದಲ್ಲಿರುವ ಸಾಧ್ಯತೆ ಇರುವ ಕಾರಣ ಕೆಜಿ ಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.