`ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ` ಸುಪ್ರೀಂ ಜಡ್ಜ್ ನಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ
ನವದೆಹಲಿ: ಖಾಲಿ ಉಳಿದಿರುವ ಎರಡು ನ್ಯಾಯಮೂರ್ತಿಗಳ ಹುದ್ದೆಯನ್ನು ನೇಮಕ ಮಾಡುವಲ್ಲಿ ಸುಪ್ರಿಂಕೋರ್ಟ್ ನ ವಿಳಂಬ ನೀತಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಕುರಿಯನ್ ಜೋಷೆಪ್ ಈ ವಿಷಯದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾಗೆ ಪತ್ರವನ್ನು ಬರೆದಿದ್ದಾರೆ.
ಜನವರಿ 10 ರಂದು ಉನ್ನತ ನ್ಯಾಯಮೂರ್ತಿಗಳನ್ನು ಹೊಂದಿರುವ ಸುಪ್ರಿಂ ಕೋರ್ಟ್ ಕೊಲಿಜಿಯಂ ವ್ಯವಸ್ಥೆಯು ಹಿರಿಯ ವಕೀಲೆ ಇಂದು ಮಲ್ಹೊತ್ರಾ ಮತ್ತು ಉತ್ತರಖಂಡ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಕೆ ಎಂ ಜೋಸೆಪ್ ಹೆಸರನ್ನು ಸುಪ್ರಿಂ ಕೋರ್ಟ್ ಗೆ ಶಿಪಾರಸ್ಸು ಮಾಡಿತ್ತು, ಆದರೆ ಮೂರು ತಿಂಗಳು ಕಳೆದರು ಕೂಡ ಈ ಕುರಿತಾಗಿ ಸರ್ಕಾರವು ಯಾವುದೇ ನಿಲುವನ್ನು ತೆಗೆದುಕೊಳ್ಳದೆ ಇರುವುದಕ್ಕೆ ಜೋಷೆಪ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವನ್ನು ಶಿಪಾರಸ್ಸು ಮಾಡಿರುವ ಹೆಸರುಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.ಅಲ್ಲದೆ ಇದು ಕೋರ್ಟ್ ನ ಇತಿಹಾಸದಲ್ಲಿ ಮೊದಲ ಬಾರಿಗೆ ಶಿಪಾರಸ್ಸು ಆದ ಮೂರು ತಿಂಗಳ ನಂತರವೂ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಇರುವುದು ಎಂದು ತಿಳಿಸಿದ್ದಾರೆ.