ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹಿಟ್ ಅಂಡ್ ರನ್ ಕೇಸ್ ಗಳು ಹೆಚ್ಚಾದಂತೆ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥ ಚಾಲಕರನ್ನು ಬಂಧಿಸುವ ಕೆಲಸವನ್ನ ಪೊಲೀಸರು ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಅಪಘಾತವಾಗುವ ನಾಲ್ಕು ಹಿಟ್ ಅಂಡ್ ರನ್ ಅಪಘಾತಗಳ ಪೈಕಿ ಒಂದು ಕೇಸ್ ನಲ್ಲಿ ಪೊಲೀಸರು ಇತ್ಯರ್ಥಗೊಳಿಸುವಲ್ಲಿ ವಿಫಲರಾಗುತ್ತಿದ್ದಾರೆ.


COMMERCIAL BREAK
SCROLL TO CONTINUE READING

2019ರಿಂದ  2023ರ ಜನವರಿ ಅಂತ್ಯದವರೆಗೆ ರಾಜ್ಯದಲ್ಲಿ 4549 ಹಿಟ್ ಅಂಡ್ ರನ್ ಅಪಘಾತ ಪ್ರಕರಣ ದಾಖಲಾಗಿದ್ದು 1187 ಕೇಸ್ ಗಳು ಪತ್ತೆಯಾಗಿಲ್ಲ. ಅಪಘಾತವೆಸಗಿದ ಚಾಲಕರನ್ನು ಪೊಲೀಸರು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ 952 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 3807 ಮಂದಿ ಗಾಯಗೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ನಡೆದಿರುವ ರಸ್ತೆ ಅಪಘಾತವನ್ನ ಸುಲಭವಾಗಿ ಪ್ರಕರಣಗಳನ್ನು ಪತ್ತೆಮಾಡಲು ಸಾಧ್ಯವಾಗುತ್ತದೆ. ಏಕೆಂದರೆ ಸಿಸಿಟಿವಿ ಅಪಘಾತ ದೃಶ್ಯಾವಳಿ, ವಾಹನ ನೋಂದಣಿ ಸಂಖ್ಯೆ ಆಧರಿಸಿ ಪ್ರಕರಣ ಭೇದಿಸಲಾಗುತ್ತದೆ. ಆದರೆ ಗ್ರಾಮೀಣ ಅಥವಾ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಹಿಟ್ ಅಂಡ್ ರನ್ ಕೇಸ್ ನಡೆದಾಗ ಆರೋಪಿಗಳನ್ನು ಪತ್ತೆಹಚ್ಚಲು ಕಷ್ಟಸಾಧ್ಯ. ಸಿಸಿಟಿವಿ ಇಲ್ಲದ‌ ಹಾಗೂ ರಾತ್ರಿ ವೇಳೆ ಸಂಭವಿಸುವ ಅಪಘಾತಗಳಲ್ಲಿ ತಪ್ಪಿತಸ್ಥರನ್ನು ಬಂಧಿಸಲು ಕಷ್ಟಕರವಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಅಭಿಪ್ರಾಯ.


ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಖಾಸಗಿ ಫೋಟೋ ವೈರಲ್‌..!


ಬೆಂಗಳೂರಿನಲ್ಲಿ ಹಿಟ್ ಅಂಡ್ ಘಟನೆಗಳು ಸರ್ವೇ ಸಾಮಾನ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿವೆ. ಅಜಾಗರೂಕತೆ, ವೇಗದ ಚಾಲನೆ ಹಾಗೂ ಮದ್ಯ ಸೇವಿಸಿ ವಾಹನ ಚಲಾಯಿಸಿ ಮುಂದೆ ಹೋಗುವ ವಾಹನ ಸವಾರರು ಹಾಗೂ ಪಾದಚಾರಿಗಳ ಸಾವಿಗೆ ಕಾರಣರಾಗುತ್ತಿದ್ದಾರೆ.  ಕಳೆದ ಫೆಬ್ರವರಿ 6ರಂದು ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಸಾಗರ ಕ್ಚೇತ್ರದ ಶಾಸಕ ಹಾಲಪ್ಪ ಹೆಸರಿರುವ  ಕಾರು ಬೈಕ್ ಸವಾರನ ತಲೆ ಮೇಲೆ ಹರಿದು ಬೈಕ್ ಸವಾರ ಮಜಿದ್ಖಾನ್ ಮೃತಪಟ್ಟು ಮತ್ತೊಬ್ಬ ಗಂಭೀರ ಗಾಯಗೊಂಡಿದ್ದ. 


ಅದೇ ರೀತಿ ಜನವರಿ 17 ರಂದು ಚಲಿಸುವ ಸ್ಕೂಟರ್ ನಲ್ಲೇ 71 ವರ್ಷದ ವೃದ್ದನನ್ನ ನಡುರಸ್ತೆಯಲ್ಲೇ ಐದಾರು ಕಿಲೋಮಿಟರ್ ವರೆಗೂ ಎಳೆದೊಯ್ದಿದ್ದ. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಕಳೆದ ಜನವರಿವೊಂದರಲ್ಲಿ  ಮಾರಣಾಂತಿಕ ಅಪಘಾತ 26 ಹಾಗೂ ಮಾರಣಾಂತಿಕವಲ್ಲದ 99 ಅಪಘಾತ ಸೇರಿ‌ ಒಟ್ಟು 125  ಹಿಟ್ ಅಂಡ್ ರನ್ ಕೇಸ್ ಗಳು ದಾಖಲಾಗಿವೆ. ಈ‌ ಪೈಕಿ 109 ಕೇಸ್ ಗಳು ರಾಜಧಾನಿಯಲ್ಲಿ ಸಂಭವಿಸಿರುವುದು ಗಮನಿಸಬೇಕಾದ ಅಂಶ.


ಇದನ್ನೂ ಓದಿ: Yadgiri Crime News: ವಿಷ ಸೇವಿಸಿ ಪ್ರೇಮಿಗಳಿಬ್ಬರ ಆತ್ಮಹತ್ಯೆ..!


ಬೆಂಗಳೂರು ಸೇರಿ ಬೆರಳೆಣಿಕೆ ಜಿಲ್ಲೆಗಳಲ್ಲಿ ದಾಖಲಾಗುವ ಅಪಘಾತವೆಸಗಿ ಪರಾರಿಯಾಗುವ ಪ್ರಕರಣಗಳನ್ನು ಸಿಸಿಟಿವಿ ಸೇರಿ ತಾಂತ್ರಿಕ ಅಂಶಗಳ ಆಧಾರದ ಮೇಲೆ ಪ್ರಕರಣ ಪತ್ತೆ ಹಚ್ಚಬಹುದಾಗಿದೆ.ಆದರೆ ಗ್ರಾಮೀಣ ಭಾಗದಲ್ಲಿ ಸುಲಭವಾಗಿ ಹಿಟ್ ಅಂಡ್ ರನ್ ಕೇಸ್ ಗಳನ್ನ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. 1187 ಕೇಸ್ ಗಳೇ ಆರೋಪಿಗಳು ಪತ್ತೆಯಾಗದಿರುವುದೇ ಸಾಕ್ಷಿಯಾಗಿದೆ ಎಂದು ಪೊಲೀಸ್ ಇಲಾಖೆಯ ಅಂಕಿ ಅಂಶಗಳೇ ಹೇಳುತ್ತವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.