Karnataka truck drivers strike: ಹಿಟ್ ಅಂಡ್ ರನ್ ಪ್ರಕರಣಗಳಿಗೆ ಹೊಸದಾಗಿ ಜಾರಿಗೆ ತಂದಿರುವ ಕಾನೂನನ್ನು ವಿರೋಧಿಸಿ ಕರ್ನಾಟಕದಲ್ಲಿ ಟ್ರಕ್ ಚಾಲಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.  ದಕ್ಷಿಣ ಭಾರತದ ಲಾರಿ ಅಸೋಸಿಯೇಷನ್‌ನಿಂದ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಫೆಡರೇಶನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಈ ಮುಷ್ಕರಕ್ಕೆ ಸಹಕಾರ ನೀಡಿದೆ. 


COMMERCIAL BREAK
SCROLL TO CONTINUE READING

ಹಿಟ್ ಅಂಡ್ ರನ್ ಗೆ ಹತ್ತು ವರ್ಷ ಜೈಲು ಶಿಕ್ಷೆ, 7 ಲಕ್ಷ ರೂಪಾಯಿ ದಂಡ ವಿಧಿಸುವ ಶಾಸನ, ಇ-ಚಲನ್ ಕಾಯ್ದೆ ಲಾರಿ ಮಾಲೀಕರಿಗೆ ಮಾರಕವಾಗಿದೆ. ಹೈಟ್ ಮತ್ತು ಡೋರ್ ಓಪನ್ ಗೆ ಇದ್ದ 500 ರೂಪಾಯಿ ದಂಡ 20 ಸಾವಿರಕ್ಕೆ ಏರಿಕೆಯಾಗಿದೆ.  ಜಿಎಸ್‌ಟಿ ಬಿಲ್ ನಲ್ಲಿ ವ್ಯಾಪಾರಸ್ಥರು ತಪ್ಪು ಮಾಡಿದರೂ ದಂಡ ವಿಧಿಸಲಾಗುತ್ತಿದೆ. ಈ ಹೊಸ ಕಾನೂನಿನಿಂದಾಗಿ  ಲಾರಿ ಚಾಲಕ ಮತ್ತು ಮಾಲಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಈ ಕೂಡಲೇ ಕರಾಳ ಶಾಸನವನ್ನು ವಾಪಸ್ ಪಡೆಯುವಂತೆ ಲಾರಿ ಮಾಲೀಕರು ಆಗ್ರಹಿಸಿದ್ದಾರೆ. 


ಇದನ್ನೂ ಓದಿ- ಸರ್ಕಾರಕ್ಕೆ ತಲೆನೋವಾದ ಹಾನಗಲ್‌ ಗ್ಯಾಂಗ್‌ರೇಪ್‌ ಕೇಸ್‌..! ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?


ರಾಜ್ಯಾದ್ಯಂತ ಎಲ್ಲಾ ಟ್ರಕ್ ಚಾಲಕರು ಮುಷ್ಕರವನ್ನು ಬೆಂಬಲಿಸಲು ಮತ್ತು ತಮ್ಮ ವಾಹನಗಳನ್ನು ರಸ್ತೆಗಿಳಿಸುವಂತೆ ಕರ್ನಾಟಕ ಲಾರಿ ಮಾಲೀಕರ ಒಕ್ಕೂಟವು ಎಲ್ಲಾ ಲಾರಿ ಮಾಲೀಕರಿಗೆ ಮನವಿ ಮಾಡಿದೆ. 


ಇದನ್ನೂ ಓದಿ- ಅಂಬಿಗ ಸಮುದಾಯವನ್ನು ಪ.ಪಂಗಡಕ್ಕೆ ಸೇರಿಸಲು ಕೂಡಲೇ ಕೇಂದ್ರಕ್ಕೆ ಸ್ಪಷ್ಟೀಕರಣ ನೀಡಲಾಗುವುದು: ಮುಖ್ಯಮಂತ್ರಿ ಸಿದ್ದರಾಮಯ್ಯ


ಈ ಕುರಿತಂತೆ ಮಾತನಾಡಿರುವ ಸಂಘದ ಅಧ್ಯಕ್ಷ ಸಿ ನವೀನ್ ರೆಡ್ಡಿ, ಕೇಂದ್ರ ಸರ್ಕಾರವು "ಏಕಪಕ್ಷೀಯ ನಿರ್ಧಾರ"ಕ್ಕೆ ಬಂದಿದ್ದು ಅದು "ತರಾತುರಿ"ಯಾಗಿ ಕೈಗೊಂಡಿರುವ ನಿರ್ಧಾರ ಎಂದಿದ್ದಾರೆ. 


ಜನವರಿ 17ರಿಂದ ಮಧ್ಯರಾತ್ರಿಯಿಂದಲೇ ಲಾರಿ ಮಾಲೀಕರ ಮುಷ್ಕರ ಆರಂಭವಾಗಿದ್ದು  ಲಾರಿ ಸಂಚಾರ ಬಂದ್‌ಗೆ ಅಸೋಸಿಯೇಶನ್‌ ತೀರ್ಮಾನಿಸಿರುವುದರಿಂದ ರಾಜ್ಯವ್ಯಾಪಿ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ವಾಹನಗಳ ಸಂಚಾರ ಬಂದ್ ಆಗಲಿದೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.