ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೃಹ ಸಚಿವರು ಇಂದು ರಿವ್ಯೂ ಮೀಟಿಂಗ್ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಕುಕ್ಕರ್ ಬಾಂಬ್ ಸ್ಫೋಟದ ಅನುಮಾನ,‌ ಅಲ್ಪಸಂಖ್ಯಾತರ ಓಟಿಗಾಗಿ ಡಿಕೆಶಿಯಿಂದ ಓಲೈಕೆ ರಾಜಕಾರಣ'


ಸಭೆಯಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂ ಆಗಿರುವ ಸಚಿವರು ಫುಲ್ ಕ್ಲಾಸ್ ತೆಗದುಕೊಂಡಿದ್ದಾರೆ. ನಗರದಲ್ಲಿ ಪಬ್, ಕ್ಯಾಸಿನೋ, ಲೇಡಿಸ್ ಬಾರ್, ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಎಂದು ಗರಂ ಆಗಿದ್ದಾರೆ. ಪಬ್, ಕ್ಯಾಸಿನೋ ಮತ್ತು ಲೇಡಿಸ್ ಬಾರ್ ಗಳ ಬಗ್ಗೆ ಮಾಹಿತಿ ಮತ್ತು ದಾಖಲೆ ಸಮೇತ ಸಭೆಗೆ ಬಂದಿದ್ದ ಗೃಹ ಸಚಿವರು, ಕೆಲ ರೌಡಿಶೀಟರ್ ಗಳ ಚಟುವಟಿಕೆ ಕೂಡ ಹೆಚ್ಚಾಗಿದೆ. ಸ್ಪಾಗಳ ಹಾವಳಿ ಕೂಡ ಹೆಚ್ಚಾಗಿದೆ ಅದನ್ನ ಮಟ್ಟ ಹಾಕುವ ಕೆಲಸವಾಗುತ್ತಿಲ್ಲ. ಯಾರು ಕೂಡ ಸರಿಯಾಗಿ ದೂರುಗಳನ್ನ ತೆಗದುಕೊಳ್ಳುತ್ತಿಲ್ಲ. ಡಿಸಿಪಿಗಳು ಠಾಣಾ ಮಟ್ಟಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿಲ್ಲ.


ಇದನ್ನೂ ಓದಿ : R Ashok : 'ಡಿಕೆ ಶಿವಕುಮಾರ್ ಮೊದಲು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು'


ಎಸಿಪಿಗಳು ಪೊಲೀಸ್‌ ಕಾನ್ಸ್ಟೇಬಲ್ ಗಳ ಮಾದರಿಯಲ್ಲಿ ನೀವು ಕೆಲಸ ಮಾಡುತ್ತಿದ್ದಿರಾ, ನೀವು ದೂರು ತೆಗೆದುಕೊಳ್ಳದ ಹಿನ್ನೆಲೆ ನನ್ನ ಬಳಿ ದೂರು ಬರುತ್ತಿವೆ. ಪೊಲೀಸಿಂಗ್ ಮತ್ತು ಗುಪ್ತಚರ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಲ ಉಪ ವಿಭಾಗದ ಪೊಲೀಸ್ ಅಧಿಕಾರಿಗಳ ಹೆಸರು ಸೂಚಿಸಿ ಗೃಹ ಸಚಿವರು ವಾರ್ನಿಂಗ್ ನೀಡಿದ್ದಾರೆ. ಸಂಪಿಗೇಹಳ್ಳಿ ಹೊಯ್ಸಳ ಸಿಬ್ಬಂದಿ, ದಂಪತಿಯಿಂದ ಲಂಚ ಪಡೆದ ಪ್ರಕರಣ ಪ್ರಸ್ತಾಪಿಸಿದ ಸಚಿವರು ಕೇವಲ ಸಸ್ಪೆಂಡ್ ಮಾಡಿದರೆ ಹೇಗೆ, ಅವರ ಮೇಲೆ ಕೇಸ್ ಬುಕ್ ಮಾಡಿ. 1000 ರೂಪಾಯಿ ವಸೂಲಿ ಮಾಡಿ ಇಲಾಖೆ ಮರ್ಯಾದೆ ಕಳೆದಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶೀಘ್ರವಾಗಿ ನಗರದಲ್ಲಿ ಕ್ಯಾಸಿನೋ, ಲೇಡಿಸ್ ಪಬ್, ಕ್ಲಬ್ ಗಳು ಬಂದ್ ಆಗಬೇಕು ಎಂದು ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಖಡಕ್  ವಾರ್ನಿಂಗ್‌ ಕೊಟ್ಟಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.