ಹಾವೇರಿ: ನಾಲ್ಕು ಚಕ್ರ ಪಂಕ್ಚರ್‌ ಆಗಿರುವ ಬಸ್‌ಗೆ ಸಿದ್ದರಾಮಯ್ಯ ಡ್ರೈವರ್‌ ಮತ್ತು ಡಿ.ಕೆ. ಶಿವಕುಮಾರ್‌ ಕಂಡಕ್ಟರ್‌ ಆಗಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಏರ್ಪಡಿಸಿದ್ದ ಜನಸೇವಕ ಸಮಾವೇಶದಲ್ಲಿ ಅವರು ಮಾತನಾಡಿ ಸಚಿವ ಬಸವರಾಜ ಬೊಮ್ಮಾಯಿ(Basavaraj Bommai), ಪಂಕ್ಚರ್‌ ಆಗಿರುವ ಈ ಬಸ್‌ ನಿಂತಲ್ಲೆ ನಿಂತಿರುತ್ತದೆಯೇ ಹೊರತು ಮುಂದಕ್ಕೆ ಚಲಿಸುವುದಿಲ್ಲ. ಏಕೆಂದರೆ ಇಬ್ಬರ ನಡುವೆ ತಾಳಮೇಳ ಸರಿಯಿಲ್ಲ ಎಂದರು.


H.D.Revanna: 'ರೇವಣ್ಣಗೆ ಲೆಕ್ಕವೇ ಬರುವುದಿಲ್ಲ, ಅದಕ್ಕೆ ಅವರನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ'


ಕಾಂಗ್ರೆಸ್‌ ಈಗ ಮುಳುಗುತ್ತಿರುವ ಹಡಗು. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಶ್ರೀಮಂತರ ಪರ, ಸೋತಾಗ ಜನಸಾಮಾನ್ಯರ ಪರ ಮಾತನಾಡುತ್ತಾರೆ. ಈ ದ್ವಂದ್ವ ನೀತಿಯಿಂದ ಜನರು ಅವರನ್ನು ವಿರೋಧಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದು ಟೀಕಿಸಿದರು.


Anand Singh: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ, ನನ್ನ ಮಾತಿಗೆ ಬದ್ಧ


ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ 'ಸುವರ್ಣ ಗ್ರಾಮೋದಯ ಯೋಜನೆ'ಯನ್ನು ಮತ್ತೆ ಜಾರಿಗೆ ತರಲು ಚಿಂತನೆ ನಡೆಸಿದ್ದೇವೆ. 'ಐದು ಕಾಯ್ದೆಗಳು ಅಸಂಖ್ಯಾತ ಸುಳ್ಳುಗಳು' ಎಂಬ ಕಿರುಹೊತ್ತಿಗೆಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡುವ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕೃಷಿ ಕಾಯ್ದೆಗಳು ಅನ್ನದಾತರ ಪರವಾಗಿವೆ ಎಂದು ತಿದ್ದುಪಡಿಯನ್ನು ಸಮರ್ಥಿಸಿಕೊಂಡರು.


Good News: Lithium ಗಾಗಿ ಇನ್ಮುಂದೆ ಭಾರತ ಚೀನಾ ಮೇಲೆ ಅವಲಂಭಿಸಬೇಕಾಗಿಲ್ಲ... ಕಾರಣ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ