ಬೆಂಗಳೂರು: ದೇಶದಾದ್ಯಂತ ದೀಪಾವಳಿ ಸಂಭ್ರಮ ಇರುವಾಗ ನಮ್ಮ ಗೃಹ ಸಚಿವರಿ ಮಾತ್ರ ದೀಪಾವಳಿ ಒಂದು ಕರಾಳ ನೆನಪು. ಕಳೆದ 17 ವರ್ಷಗಳಿಂದ ಗೃಹ ಸಚಿವರ ಮನೆಯಲ್ಲಿ ದೀಪಾವಳಿ ಆಚರಣೆ ಮಾಡುವುದಿಲ್ಲ. 


COMMERCIAL BREAK
SCROLL TO CONTINUE READING

ಗೃಹ ಸಚಿವ ರಾಮಲಿಂಗಾರೆಡ್ಡಿ ಕುಟುಂಬವು ಇಂದಿಗೂ ದೀಪಾವಳಿ ಎಂದರೆ ಬೆಚ್ಚಿ ಬೀಳುತ್ತದೆ. ಇದಕ್ಕೆ ಕಾರಣವೂ ಇದೇ. ಅದೊಂದು ಕರಾಳ ದಿನ, 2000ನೇ ಇಸವಿಯಲ್ಲಿ ದೀಪಾವಳಿ ಸಂಭ್ರಮದಲ್ಲಿ ನಡೆದ ದುರ್ಘಟನೆಯೊಂದು ಅವರ ಕುಟುಂಬವನ್ನು ಇನ್ನೂ ಬೆಂಬಿಡದಂತೆ ಕಾಡುತ್ತಿದೆ.


ಹೌದು, ಈಗ 16 ವರ್ಷಗಳ ಹಿಂದೆ ಅಂದರೆ 2000ನೇ ಇಸವಿಯಲ್ಲಿ ರಾಮಲಿಂಗಾ ರೆಡ್ಡಿ ಅವರ ಮನೆಯಲ್ಲಿ ದೀಪಾವಳಿ ಸಮಯದಲ್ಲಿ ಮನೆಯಲ್ಲಿದ್ದ ಪ್ಳತಾಕಿಗೆ ಬೆಂಕಿ ತಗುಲಿ ರಾಮಲಿಂಗಾರೆಡ್ಡಿ ಅವರ ತಂದೆ ಸಾವನ್ನಪ್ಪಿದ್ದರು. ಅಂದಿನಿಂದ ಇಂದಿನವರೆಗೂ ರಾಮಲಿಂಗಾರೆಡ್ಡಿಯವರ ಕುಟುಂಬವು ದೀಪಾವಳಿ ಆಚರಣೆ ಮಾಡುವುದಿಲ್ಲ. ಗೃಹ ಸಚಿವರಿಗೆ ಪಟಾಕಿ ಎಂದರೆ ಈಗಲೂ ಮೈ ನಡುಗುತ್ತದೆ. ಪ್ರತಿ ವರ್ಷ ಪಟಾಕಿ ಹೊಡೆಯುವವರಿಗೂ ಎಚ್ಚರಿಕೆ ಇಂದ ಇರುವಂತೆ ತಿಳಿಸುವುದನ್ನು ಗೃಹ ಸಚಿವರು ಮರೆಯುವುದಿಲ್ಲ. 


ಬೆಳಕಿನ ಹಬ್ಬ, ದೀಪಗಳ ಹಬ್ಬ ದೀಪಾವಳಿಯು ಯಾರ ಮನೆಯನ್ನೂ ಕರಾಳದ ನೆನಪಿಗೆ ಕೊಂಡೊಯ್ಯದಿರಲಿ. ಪ್ರತಿಯೊಬ್ಬರೂ ದೀಪಾವಳಿಯ ಸಂಭ್ರಮದಲ್ಲಿ ಮಕ್ಕಳ ಬಗ್ಗೆ ಎಚ್ಚರ ವಹಿಸಿ, ಪಟಾಕಿ ಹೊಡೆಯುವಾಗ ಜಾಗೃತಿ ವಹಿಸಿ ಎಂಬುದೇ ಎಲ್ಲರ ಸಂದೇಶ.