Horticulture training: ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

2023ರ ಜೂನ್ 1ರಿಂದ 2024ರ ಮಾರ್ಚ್ 30ರವರೆಗೆ ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಈ ತರಬೇತಿ ನಡೆಯಲಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಇದನ್ನೂ ಓದಿಈ ತಿಂಗಳ ಕೊನೆಗೆ ನೂತನ ಸಂಸತ್ ಭವನ ಉದ್ಘಾಟನೆ


ಭರ್ತಿ ಮಾಡಿದ ಅರ್ಜಿಯನ್ನು ಮೇ22ರ ಸಂಜೆ 5.30ರೊಳಗೆ ಸಲ್ಲಿಸಬೇಕು. ಅರ್ಜಿಯನ್ನು ತೋಟಗಾರಿಕಾ ಕಚೇರಿಯಿಂದ ಪಡೆಯಬಹುದು. ಹೆಚ್ಚಿನ ವಿವರವನ್ನು ಕೊಡಗು ಜಿಲ್ಲೆ ಮಡಿಕೇರಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಬೆಳಗ್ಗೆ 10ರಿಂದ ಸಂಜೆ 5.30ರೊಳಗೆ ಸಲ್ಲಿಸಬಹುದು. 8310687707 ಈ ದೂರವಾಣಿ ಸಂಖ್ಯೆ ಅಥವಾ ಅಂತರ್ಜಾಲ www.horticulture.kar.nic.i ನಲ್ಲಿ ಪಡೆಯಬಹುದು.


ಮೂಲ ಅಗತ್ಯ ದಾಖಲಾತಿಗಳೊಡನೆ(SSLC ಅಂಕಪಟ್ಟಿ, ಛಾಪಾಕಾಗದ, ತಂದೆ/ತಾಯಿ/ಪೋಷಕರ ಹೆಸರಿನಲ್ಲಿರುವ ಜಮೀನಿನ RTC, ಜಾತಿ ಪ್ರಮಾಣ ಪತ್ರ, ಫೋಟೋ, ತಂದೆ/ ತಾಯಿಯವರ ಒಪ್ಪಿಗೆ ಪತ್ರ ಮತ್ತಿತರ) ಅರ್ಹ ಅಭ್ಯರ್ಥಿಗಳು ನಿಗಧಿತ ಸಮಯದೊಳಗೆ ಅರ್ಜಿಯನ್ನು ಮಡಿಕೇರಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ(ರಾಜ್ಯವಲಯ)ಗೆ ಖುದ್ದಾಗಿ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾಜ್ಯವಲಯ) ತಿಳಿಸಿದ್ದಾರೆ.


ಇದನ್ನೂ ಓದಿ: "ಕಾಂಗ್ರೆಸ್ಸಿಗರು ಬಿಜೆಪಿಯ ತಪ್ಪಿನಿಂದ ಗೆದ್ದಿದ್ದಾರೆ "


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.