ಕಲಬುರುಗಿ: ಮನೆ ಗೋಡೆ ಕುಸಿದು ಒಂದೇ ಕುಟುಂಬದ ಮೂವರ ಸಾವು
ಪ್ರಭು ಎಂಬುವರಿಗೆ ಗಂಭೀರ ಗಾಯ.
ಕಲಬುರಗಿ: ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲ ಶಿರೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಒಂದು ಕುಟುಂಬದ ಮೂವರು ಸದಸ್ಯರು ಮೃತಪಟ್ಟಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಡರಾತ್ರಿ ಈ ಘಟನೆ ನಡೆದಿದ್ದು, ಭಿಮಶಾ ಎಂಬುವರ ಮನೆ ಗೋಡೆ ಕುಸಿದು ಪಕ್ಕದ ಪ್ರಭು ಎಂಬುವ ಮನೆ ಮೇಲೆ ಬಿದ್ದಿದೆ. ಘಟನೆಯಲ್ಲಿ ಪ್ರಭು ಅವರ ಪತ್ನಿ ಲಕ್ಷ್ಮೀಬಾಯಿ(30), ಇಬ್ಬರು ಮಕ್ಕಳು ಯಲ್ಲಮ್ಮಾ(11) ಮತ್ತು ಅಂಬಿಕಾ(10) ಎಂಬುವರು ಮೃತಪಟ್ಟಿದ್ದು, ಪ್ರಭು ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.