ಬೆಂಗಳೂರು : ರಾಜ್ಯದಲ್ಲಿ ಸದ್ಯ ಚರ್ಚಿತ ವಿಷಯ ಎಂದರೆ ಹೈಕೋರ್ಟ್ ಎಸಿಬಿ ಸಂಸ್ಥೆ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿ ಆದೇಶ ನೀಡಿದೆ. 2016 ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಎಸಿಬಿ ಸಂಸ್ಥೆ ರಚನೆಯಾಗಿತ್ತು.‌ 


COMMERCIAL BREAK
SCROLL TO CONTINUE READING

ಈಗ ಕೋರ್ಟ್ ಕೊಟ್ಟಿರುವ ತೀರ್ಪು ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಮಾಡಿದೆ. ಇಷ್ಟು ದಿನ ಆಟಕ್ಕೂಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದ ಲೋಕಾಯುಕ್ತದಲ್ಲಿ ಬಾಕಿಯಿರುವ ಪ್ರಕರಣಗಳು ಸಾಕಷ್ಟಿವೆ. ಒಟ್ಟು 8,036 ಪ್ರಕರಣಗಳು ಲೋಕಾಯುಕ್ತದಲ್ಲಿ ಬಾಕಿ ಇವೆ. ಇದರಲ್ಲಿ‌‌ 2,430 ಪ್ರಕರಣಗಳು  ವಿಚಾರಣೆ ಹಂತದಲ್ಲಿವೆ.


ಇದನ್ನೂ ಓದಿ : Priyank kharge : 'ನಮಗೆ ಬಿಜೆಪಿಯವರಿಂದಲೇ ಸಿಎಂ ಬದಲಾವಣೆ ಬಗ್ಗೆ ಮಾಹಿತಿ ಬರ್ತಿದೆ'


ಗಂಭೀರವಲ್ಲದ 13 ಸಾವಿರ ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿವೆ. ಈ ಪೈಕಿ 12 ಸಾವಿರ ಪ್ರಕರಣಗಳು ಇತ್ಯರ್ಥವಾಗಿವೆ.


2017 ರಿಂದ ಇಲ್ಲಿಯವರೆಗೂ ಅಂದರೆ ಐದು ವರ್ಷದಲ್ಲಿ 20,549 ಪ್ರಕರಣ ದಾಖಲಾಗಿವೆ. ಇದರಲ್ಲಿ 2, 431 ಪ್ರಕರಣಗಳನ್ನ ಇತ್ಯರ್ಥಪಡಿಸಲಾಗಿದೆ. ಇದರಲ್ಲಿ 304 ಸ್ವಯಂ ಪ್ರೇರಿತ ದೂರನ್ನ ಲೋಕಾಯುಕ್ತ ದಾಖಲಿಸಿಕೊಂಡಿದೆ. ಒಟ್ಟಾರೆಯಾಗಿ ಈ ಎಲ್ಲಾ ಪ್ರಕರಣಗಳ ಜೊತೆ ಹೈಕೋರ್ಟ್ ಆದೇಶ ನೀಡಿರುವಂತೆ ಎಸಿಬಿಯಲ್ಲಿ ತನಿಖಾ ಹಂತದಲ್ಲಿರುವ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಬೇಕೆಂದು ಆದೇಶಿಸಿದೆ. ಹೀಗಾಗಿ ಲೋಕಾಯುಕ್ತದಲ್ಲಿ ಪ್ರಕರಣಗಳು ಸಂಖ್ಯೆಯು ಸಹ ಹೆಚ್ಚಾಗಲಿದೆ.


ಇದನ್ನೂ ಓದಿ : ಲೋಕಾಯುಕ್ತಕ್ಕೆ ಕೋರ್ಟ್ ತೀರ್ಪಿನಿಂದ ಆನೆ ಬಲ: ಆಪ್ ಸಂಭ್ರಮಾಚರಣೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.