ರೈತರ ಮೇಲೆ ಗೋಲಿಬಾರ್ ಮಾಡಿದವರು ರೈತರ ಬಂಧುವಾಗಲು ಹೇಗೆ ಸಾಧ್ಯ- ಯಡ್ಡಿಗೆ ಸಿದ್ದು ಗುದ್ದು
ಬೆಂಗಳೂರು: ಇಬ್ಬರು ರೈತರನ್ನು ಗೋಲಿಬಾರ್ ಮಾಡಿ ಹತ್ಯೆಗೈದವರು ರೈತರ ಬಂಧುವಾಗಲು ಹೇಗೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯ ಯಡ್ಡಿಯೂರಪ್ಪನವರಿಗೆ ಟಾಂಗ್ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದ ಬಿಜೆಪಿಯ ರೈತ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಯಡಿಯೂರಪ್ಪನವರಿಗೆ ರೈತರ ಬಂಧು ಎನ್ನುವ ಬಿರುದನ್ನು ನೀಡಿ ಸನ್ಮಾನಿಸಲಾಗಿದೆ.
ಈಗ ಈ 'ರೈತರ ಬಂಧು' ಬಿರುದಿಗೆ ವ್ಯಂಗ್ಯವಾಡಿರುವ ಸಿದ್ದರಾಮಯ್ಯ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹಾವೇರಿಯಲ್ಲಿ ಇಬ್ಬರು ರೈತರ ಮೇಲೆ ಗೋಲಿಬಾರ್ ಮಾಡಿ ರೈತರನ್ನು ಹತ್ಯೆ ಮಾಡಿದವರು ಅದೇಗೆ ಅವರು ರೈತ ಬಂಧು ಆಗುತ್ತಾರೆ ಎಂದು ಕುಟುಕಿದ್ದಾರೆ.