Hubballi: ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ; ಸಾಲಕ್ಕೆ ಹೆದರಿ ರೈತ ಸಾವು!
Karnataka Vikas Grameena Bank: 19 ಎಕರೆ 16 ಗುಂಟೆ ಕೃಷಿ ಜಮೀನು ಹೊಂದಿದ್ದ ರೈತ ಫಕ್ಕೀರಪ್ಪ ಮೊರಬ ಗ್ರಾಮದಲ್ಲಿರುವ ಕೆವಿಜಿ ಬ್ಯಾಂಕಿನಿಂದ ಷರತ್ತುಗಳಿಗೆ ಒಪ್ಪಿ 2015ರಲ್ಲಿ 14 ಲಕ್ಷ 50 ಸಾವಿರ ರೂ. ಸಾಲ ಪಡೆದುಕೊಂಡಿದ್ದರು.
ಹುಬ್ಬಳ್ಳಿ: ಬರಗಾಲದಲ್ಲಿ ಬೆಳೆಸಾಲ ವಸೂಲಿಗೆ ಮುಂದಾಗಿದ್ದರಿಂದ ಸಾಲಕ್ಕೆ ಹೆದರಿ ರೈತನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಮೊರಬ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಕಿರುಕುಳಕ್ಕೆ ಹೆದರಿ ರೈತ ಸಾವನ್ನಪ್ಪಿದ್ದಾನೆಂದು ಆರೋಪಿಸಲಾಗಿದೆ. ಗುಮ್ಮಗೋಳ ಗ್ರಾಮದ ರೈತ ಫಕ್ಕೀರಪ್ಪ ಜಾವೂರ್ ( 75) ಮೃತ ರೈತ. ಬೆಳೆಸಾಲ ವಸೂಲಿಗೆ ಮುಂದಾಗಿದ್ದರಿಂದ ಅನಾರೋಗ್ಯದಿಂದ ಬಳಲುತಿದ್ದ ರೈತ ಫಕ್ಕೀರಪ್ಪನವರು ಸಾಲಕ್ಕೆ ಹೆದರಿ ಪ್ರಾಣ ಬಿಟ್ಟಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಬ್ಯಾಂಕಿನವರು ರೈತನ ಮನೆಗೆ ಹೋಗಿ ಬೆಳೆ ಸಾಲ ತುಂಬುವಂತೆ ಒತ್ತಾಯಸಿದ್ದರಂತೆ. ಇದರಿಂದ ಹೆದರಿದ ರೈತ ಫಕ್ಕೀರಪ್ಪ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು. ಕೂಡಲೇ ಅವರನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರೈತನಿಗೆ ಸಾಲ ಪಾವತಿಸುವಂತೆ ಕಿರಿಕುಳ ನೀಡಿದ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಸ್ಥಳೀಯರು ಹಾಗೂ ರೈತರು ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದರು. ನಂತರ ಬ್ಯಾಂಕ್ ಮ್ಯಾನೇಜರ್ ಬಂಧನವಾಗಿತ್ತು.
ಇದನ್ನೂ ಓದಿ: ದೆಹಲಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ
7 ದಿನಗಳಿಂದ ಚಿಕಿತ್ಸೆ ಪಡೆಯುತಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಾವನ್ನಪ್ಪಿದ್ದಾನೆ. 19 ಎಕರೆ 16 ಗುಂಟೆ ಕೃಷಿ ಜಮೀನು ಹೊಂದಿದ್ದ ರೈತ ಫಕ್ಕೀರಪ್ಪ ಮೊರಬ ಗ್ರಾಮದಲ್ಲಿರುವ ಕೆವಿಜಿ ಬ್ಯಾಂಕಿನಿಂದ 2015ರಲ್ಲಿ 14 ಲಕ್ಷ 50 ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಬ್ಯಾಂಕಿನ ಷರತ್ತುಗಳಿಗೆ ಒಪ್ಪಿ ಬೆಳೆ ಸಾಲ ತೆಗೆದುಕೊಂಡಿದ್ದ ರೈತ, 2017ರವರೆಗೆ ಸುಮಾರು 2 ವರ್ಷಗಳ ಕಾಲ ಬೆಳೆ ಸಾಲವನ್ನು ಕಟ್ಟಿದ್ದರು. 2017ರಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಸಾಲ ಮರುಪಾತಿಯಾಗಿರಲಿಲ್ಲ.
ಹೀಗಾಗಿ ತೆಗೆದುಕೊಂಡಿರುವ ಬೆಳೆಸಾಲ ಮರುಪಾವತಿಸುವಂತೆ ರೈತನ ಮೇಲೆ ಬ್ಯಾಂಕ್ ಮ್ಯಾನೇಜರ್ ಒತ್ತಡ ಹೇರಿದ್ದರಂತೆ. ಪರಿಣಾಮ ಸಾಲಕ್ಕೆ ಹದರಿದ್ದ ರೈತ ಕುಸಿದುಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ಇಂದು ಸಾವನ್ನಪ್ಪಿದ್ದಾನೆ. ಕೆವಿಜಿ ಬ್ಯಾಂಕ್ ಮ್ಯಾನೇಜರ್ ಕಿರುಕುಳಕ್ಕೆ ಹೆದರಿಯೇ ರೈತ ಸಾವನ್ನಪ್ಪಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಸ್ವಿಗ್ಗಿ, ಜೊಮಾಟೋಗಿಂತ ಕಡಿಮೆ ದರದಲ್ಲಿ ಫುಡ್ ಡೆಲಿವರಿ ಮಾಡುತ್ತೆ ONDC: ಕಾರಣವೇನು ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.