ಮಲೆನಾಡಿನಲ್ಲಿ ಭಾರಿ ಮಳೆ; ಮುಳುಗುವ ಭೀತಿಯಲ್ಲಿ ಶೃಂಗೇರಿ ದೇಗುಲ
ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ಮಂಗಳೂರು: ಕುಂಬದ್ರೋಣ ಮಳೆ ಮಲೆನಾಡಿನ ಜನತೆಗೆ ಕಂಟಕಪ್ರಾಯವಾಗಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ಇದರಿಂದಾಗಿ ಮಲೆನಾಡಿನ ಭಾಗದದಲ್ಲಿ ಸಾರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.ತುಂಗಾ ನದಿಯ ತೀರದಲ್ಲಿರುವ ಶೃಂಗೇರಿಯಲ್ಲಿ ನೀರು ಅಪಾಯದ ಮಟ್ಟವನ್ನು ತಲುಪಿದೆ ಈ ಹಿನ್ನಲೆಯಲ್ಲಿ ದೇವಸ್ತಾನಕ್ಕೆ ಈಗ ಮುಳುಗಡೆಯ ಭೀತಿ ಉಂಟಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಕಪ್ಪೆ ಶಂಕರ ದೇವಸ್ತಾನ ಮತ್ತು ಸಂಧ್ಯಾವಂದನ ಮಂಟಪವು ಸಹಿತ ಮುಳುಗಡೆಯಾಗಿದೆ.
ಇನ್ನು ದಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಈ ಭಾರಿ ಮಳೆಯ ಕಾರಣದಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನೊಂದೆಡೆಗೆ ಘಾಟ್ ನಲ್ಲಿರುವ ರಸ್ತೆಗಳು ಮಣ್ಣ ಕುಸಿತದ ಅಪಾಯವನ್ನು ಎದುರಿಸುತ್ತಿವೆ ಎಂದು ತಿಳಿದು ಬಂದಿದೆ.ಕೊಡುಗು,ಭಾಗಮಂಡಲ ಹಾಗೂ ಸುತ್ತಲಿನ ಪ್ರದೇಶಗಳಲ್ಲಿಯೂ ಭಾರಿ ಮಳೆ ಸುರಿದಿದೆ.
ಬೆಳಗಾವಿಯಲ್ಲಿ ನಿರ್ಮಾಣದ ಹಂತದಲ್ಲಿದ ಸೇತುವೆ ಮಳೆಯ ಕಾರಣದಿಂದಾಗಿ ಕುಸಿದಿದೆ.