ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕರ್ನಾಟಕ -ಮಹಾರಾಷ್ಟ್ರ ರಾಜ್ಯ ಗಳ ಗಡಿ ವಿವಾದ ಸಭೆ ಬಳಿಕ ಸಭೆಯ ನಿರ್ಣಯ ಪ್ರಕಟಿಸಿ, ಸದ್ಯ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇರುವ ಕಾರಣ ತೀರ್ಪು ಬರುವ ವರೆಗೆ ಯಾರು (ಉಭಯ ರಾಜ್ಯಗಳು ) ಬೆಳಗಾವಿಯನ್ನು ತಮ್ಮದು ಎಂದು ಹೇಳಬಾರದು ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KL Rahul : ಔಟಾಗಿದ್ದಕ್ಕೆ ಕೋಪಗೊಂಡ ಕೆಎಲ್ ರಾಹುಲ್ ಮಾಡಿದ್ದು ಹೀಗೆ : Video ಸಖತ್ ವೈರಲ್


ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ನಡುವೆ ಬೆಳಗಾವಿ ಗಡಿ ವಿವಾದ ಕುರಿತ ಸಭೆ ನಡೆಸಲಾಯಿತು, ಸಭೆ ಬಳಿಕ ಅಮಿತ್ ಶಾ ಮಾತಾನ್ನಾಡಿ, ಸಭೆ ಸಫಲವಾಗಿ ನಡೆದಿದೆ. ಸದ್ಯ ಮುಂದಿರುವ ಸಮಸ್ಯೆ ರಸ್ತೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ, ಇದಕ್ಕೆ ಸಂವಿಧಾನ ಮೂಲಕ ಪರಿಹಾರ ಕೈಗೊಳ್ಳಬೇಕು ಎಂದರು.


ಇದನ್ನೂ ಓದಿ: India vs Bangladesh 1st Test: ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ ಪಂತ್


ಒಟ್ಟು ಉಭಯ ರಾಜ್ಯಗಳಿಂದ ಆರು ಸಚಿವರ ಕಮಿಟಿ (ಪ್ರತಿ ರಾಜ್ಯದಿಂದ ಮೂರು ಸಚಿವರು) ಒಳಗೊಂಡಂತ ಕಮಿಟಿ, ಮುಂದಿನ ದಿನಗಳಲ್ಲಿ ವಿಸ್ತೃತ ವರದಿ ನೀಡಲಿದ್ದಾರೆ. ಹಾಗೂ ಎರಡು ರಾಜ್ಯಗಳಿಂದ ಐಪಿಎಸ್ ತಂಡ ರಚನೆ ಮಾಡಲು ಸೂಚಿಸಲಾಗಿದೆ.ಈ ಮೂಲಕ ಸಾರ್ವಜನಿಕ ಜೀವನಕ್ಕೆ ಏನು ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಾ ಸೂಚಿಸಿದ್ದಾರೆ.


ಒಟ್ಟಾರೆ ಮಹಾಜನ ವರದಿ ಪ್ರಕಾರ ಸ್ಪಷ್ಟವಾಗಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ತಿಳಿಸಿದೆ, ಈ ನಂತರವೂ ಕೇಂದ್ರ ಸಚಿವರ ಹೇಳಿಕೆ ರಾಜ್ಯಕ್ಕೆ ಹಿನ್ನಡೆ ಆಗಲಿದೆ ಎಂದು ಚರ್ಚೆ ಆರಂಭ ಆಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.