ಬಾಗಲಕೋಟೆ : ಟಿಪ್ಪು ಜಯಂತಿ ಮಾಡ್ತೇವೆ ಅಂದ್ರ ಎಫ್ಐಆರ್‌ ಮಾಡ್ತೇವಿ, ಕೇಸ್ ಮಾಡ್ತೇವಿ ಅಂತಿರಿ, ಏನ್ ಹುಡುಗಾಟ ಹಚ್ಚಿರೇನು? ನಿಮ್ದು ಇನ್ನು ಬರೀ 142 ದಿನ ಮಾತ್ರ ಇದೆ, ಅಲ್ಲಿತನಕ ಎಷ್ಟು ಉರಿತಿರಿ ಉರಿರಿ ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಬಿಜೆಪಿ ಸರ್ಕಾರ ಹಾಗೂ ಮುಖಂಡರ ವಿರುದ್ದ ಹರಿಹಾಯ್ದಿದ್ದಾರೆ.


COMMERCIAL BREAK
SCROLL TO CONTINUE READING

ನಿನ್ನೆ ಇಳಕಲ್ ನಗರದಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆಯ ಬಹಿರಂಗಸಭೆಯಲ್ಲಿ ಮಾತನಾಡಿದ ವಿಜಯಾನಂದ ಕಾಶಪ್ಪನವರ್, ಅಬಿ ಏಕ್ ಸೌ ಬಯಾಲುಸ್ ದಿನ  ಬಾಕಿ ಹೈ.. ಈ ದೇಶ ಯಾರಪ್ಪನ ಮನೆ ದೇಶ ಅಲ್ಲ. ನಮ್ಮ ದೇಶದಲ್ಲಿ ನಮ್ಮ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಮಾಡಲು ಯಾರಪ್ಪಣೆ ಬೇಕಿಲ್ಲ.  ನೀವು ಯಾವುದಕ್ಕೂ ಅಂಜಲು ಹೋಗಬೇಡಿ. ಅಂಜುಮನ್ ಸಂಸ್ಥೆ ಇದೆ. ನಾವು ಇದ್ದೀವಿ. ಇದೇ ತಿಂಗಳು ಇಳಕಲ್ ನಗರದಲ್ಲಿ ದೊಡ್ಡ ಕಾರ್ಯಕ್ರಮ‌ ಮಾಡೋಣ. ಯಾರು ಏನೂ ಮಾಡಾಕಾಗಲ್ಲ. ಕಾರ್ಯಕ್ರಮ ಮಾಡಲು ನೀವೆಲ್ಲ ಸಜ್ಜಾಗಿರಿ ಎಂದು ಮುಸ್ಲಿಂ ಬಾಂಧವರಿಗೆ ಕರೆ ನೀಡಿದ್ದಾರೆ. 


ಇದನ್ನೂ ಓದಿ : ನಾಡಪ್ರಭು ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆದುತಂದ ಪ್ರಧಾನಿ ಮೋದಿ


ಇನ್ನೂ ಮುಂದುವರೆದು ಮಾತನಾಡಿದ ಅವರು, ಸರ್ಕಾರ ಟಿಪ್ಪು ಜಯಂತಿಯನ್ನ ಯಾವ ಕಾರಣಕ್ಕೆ ರದ್ದು ಮಾಡಿದೆ? ನೀವು ಟಿಪ್ಪು ವೇಷ ಭೂಷಣ ಹಾಕಿಕೊಂಡು ಖಡ್ಗ ಹಿಡ್ಕೊಂಡು ಫೋಟೋ ತೆಗೆಸಿಕೊಂಡಿಲ್ಲೇನು?  ಇದೇ ಮಿಸ್ಟರ್ ಯಡಿಯೂರಪ್ಪ,ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟಿ ಟಿಪ್ಪು ಸುಲ್ತಾನರ ವೇಷ ಹಾಕಿದ್ರು, ಆವಾಗ ಬೇಕಾಗಿದ್ದು ಈಗ ಯಾಕ ಬೇಡ ಆಯ್ತು? ಪಠ್ಯಪುಸ್ತದಲ್ಲಿ ಟಿಪ್ಪು ಸುಲ್ತಾನ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತ ಹೇಳಸ್ತಿರಲ್ಲ. ನಿಮಗೆ ನಾಚಿಕೆ, ಮಾನ ಮಾರ್ಯಾದೆ ಇದೆಯಾ? ನೀವು ಭಾರತಿಯಾರಾ? ಪರಕೀಯರಾ? ನಾನು ದೇಶದ ಜನರಿಗೆ ಹೇಳ್ತೇನೆ, ನೀವು ಭೂಮಿಯಲ್ಲಿ ಹುಟ್ಟಿದ್ದೀರಿ. ಟಿಪ್ಪು ಸುಲ್ತಾನ ಬಗ್ಗೆ ಓದಿ ಮೇಲೆ ಬಂದಿದ್ದೀರಿ. ಇವತ್ತು ಅಂತ ಯೋಧನನ್ನ ತೀರಸ್ಕಾರ ಮಾಡ್ತಿರಲ್ಲ. ನೀವು ಭಾರತಿಯರು ಅಲ್ಲ. ಜಾತಿ, ಧರ್ಮ ಎಲ್ಲರೂ ಒಂದಾಗಿ.. ನಮಗೆ ಸ್ವಾತಂತ್ರ್ಯ ಸಿಗದೇ ಇದ್ದಿದ್ರೆ ನಾವೆಲ್ಲ ಮೈಕ್ ಮಾತನಾಡಲು ಆಗ್ತಿರಲಿಲ್ಲ. ಒಂದು ಕಾಲದಲ್ಲಿ ಗುಲಾಮಗಿರಿ ದೇಶ ಇತ್ತು. ಗುಲಾಮಗಿರಿ ತಪ್ಪಿಸಿದ್ದು ಯಾರು? ಅದರಲ್ಲಿ ವೀರಯೋಧ ಹಜರತ್ ಟಿಪ್ಪು ಸುಲ್ತಾನ ಅನ್ನೋದು ಯಾರು ಮರೆಯೋ ಹಾಗಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ : ಕೆಂಪೇಗೌಡರ ವಿಚಾರಧಾರೆಗಳ ಹಾದಿಯಲ್ಲಿ ನಡೆಯುವ ಸಂಕಲ್ಪ : ಸಿಎಂ ಬೊಮ್ಮಾಯಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.