ಬೆಂಗಳೂರು: ನಾನು ದೇವೇಗೌಡರ ಮಗ, ಕೇವಲ ಮುಖ್ಯಮಂತ್ರಿ ಹುದ್ದೆಗೆ ಅಂಟಿ ಕೂತಿಲ್ಲ, ರೈತರ ಮೇಲಿನ ಕಾಳಜಿಗಾಗಿ ರೈತನ್ನು ಉಳಿಸಲು ಸಾಲ ಮನ್ನಾ ನಿರ್ಧಾರ ಕೈಗೊಂಡೆ. ನಾನು ಮಖ್ಯಮಂತ್ರಿ ಆಗಿರಬಹುದು, ಆದರೆ ಸಂತೋಷವಾಗಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾದರು. 


COMMERCIAL BREAK
SCROLL TO CONTINUE READING

ಟೀಕೆ ಮಾಡುವುದನ್ನು ನಿಲ್ಲಿಸಿ, ಕಾಲಾವಕಾಶ ನೀಡಿ: ಮಾಧ್ಯಮದವರಿಗೆ ಸಿಎಂ ಕ್ಲಾಸ್


ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರನ್ನು ಉಳಿಸಲೆಂದು ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರವನ್ನು ಕೈಗೊಂಡೆ. ಆದರೆ ಇದನ್ನು ಪ್ರತಿಪಕ್ಷದವರು ವಿರೋಧಿಸಿದರು. ಅಧಿಕಾರದ ದಾಹದಿಂದಾಗಲೀ, ಮುಖ್ಯಮಂತ್ರಿ ಹುದ್ದೆಯ ಮೇಲಿನ ವ್ಯಾಮೋಹದಿಂದಾಗಲೀ ಸಾಲ ಮನ್ನಾ ಮಾಡಲಿಲ್ಲ. ಪೆಟ್ರೋಲ್ ದರ ಏರಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದೀರಿ. ಕೇಂದ್ರ ಸರಕಾರ 11 ಬಾರಿ ಪೆಟ್ರೋಲ್ ದರ ಏರಿಸಿದರೂ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ ಯಾಕೆ? ಇದರಿಂದ ನನಗೆ ತುಂಬಾ ನೋವಾಗಿದೆ. ಅಷ್ಟಕ್ಕೂ ನಾನು ಮಾಡಿರುವ ತಪ್ಪಾದರೂ ಏನು? ನನಗೆ ಅನ್ನ ಕೊಡುತ್ತೀರೋ, ವಿಷ ಕೊಡುತ್ತೀರೋ ನೀವೇ ನಿರ್ಧರಿಸಿ, ನನಗೆ ಸನ್ಮಾನ ಮಾಡಬೇಡಿ ಎಂದು ಕುಮಾರಸ್ವಾಮಿ ಕಣ್ಣೀರಿಟ್ಟರು.


ನಾನು ಹೋರಾಟಕ್ಕೆ ಸಿದ್ಧನಿದ್ದೇನೆ: ಹೆಚ್.ಡಿ.ದೇವೇಗೌಡ


ನಾನು ನನ್ನ ರೈತರನ್ನು ಉಳಿಸಲು ಸಾಲ ಮನ್ನಾ ನಿರ್ಧಾರ ಕೈಗೊಂಡೆ. ಇಷ್ಟಾದರೂ ರೈತರು ನನ್ನ ವಿರುದ್ಧ ಪ್ರತಿಭಟನೆ ಮಾಡಿದರು. ಇದರಿಂದ ನಾನೇಕೆ ಈ ಹುದ್ದೆಯಲ್ಲಿ ಮುಂದುವರೆಯಬೇಕು ಅನಿಸುತ್ತಿದೆ. ನನ್ನ ತಂದೆ ಕೂಡ 13 ತಿಂಗಳಲ್ಲೇ ಪ್ರಧಾನಿ ಖುರ್ಚಿಯನ್ನು ಬಿಟ್ಟು ಬಂದರು. ಅವರ ಇಡೀ ರಾಜಕೀಯ ಜೀವನದಲ್ಲೇ ನಾಲ್ಕೂವರೆ ವರ್ಷ ಮಾತ್ರ ಅಧಿಕಾರ ನಡೆಸಿದ್ದಾರೆ. ಉಳಿದೆಲ್ಲಾ ಅವಧಿ ವಿಪಕ್ಷದಲ್ಲೇ ಇದ್ದರು. ಅಂಥವರ ಮಗನಾದ ನನಗೆ ಅಧಿಕಾರದ ವ್ಯಾಮೋಹ ಇಲ್ಲ. ಆ ದೇವರು ಈ ಹುದ್ದೆಯಿಂದ ಯಾವಾಗ ಕೆಳಗಿಳಿಸುತ್ತಾನೋ, ಅಂದು ಈ ಹುದ್ದೆ ತೊರೆಯುತ್ತೇನೆ ಎಂದು ಹೇಳಿದರು.