ಬೆಂಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆಂದು ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿರುವ ಚಿತ್ರನಟಿ ರಾಗಿಣಿ‌ ದ್ವಿವೇದಿ (Ragini Dwivedi) 'ಡ್ರಗ್ಸ್ ಹುಡುಗಿ' ಎನ್ನುವುದು ಗೊತ್ತಿರಲಿಲ್ಲ ಎಂದು ಜಲ ಸಂಪನ್ಮೂಲ ಸಚಿವ  ರಮೇಶ್ ಜಾರಕಿಹೊಳಿ‌ (Ramesh Jarakiholi)ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಮೇಶ್ ಜಾರಕಿಹೊಳಿ‌, 'ಬಿಜೆಪಿ ನಾಯಕರ ಕುಮ್ಮಕ್ಕಿನಿಂದಲೇ ಡ್ರಗ್ಸ್ ಧಂಧೆ ನಡೆಯುತ್ತಿದೆ. ಬಿಜೆಪಿ ಪರ ಪ್ರಚಾರ ಮಾಡಿರುವ, ಬಿಜೆಪಿ ನಾಯಕರೊಂದಿಗೆ ನಂಟು ಹೊಂದಿರುವ ಚಿತ್ರನಟಿ ರಾಗಿಣಿ‌ ದ್ವಿವೇದಿ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ' ಎಂಬ ಬಗ್ಗೆ ಪ್ರತಿಕ್ರಿಯಿಸಿ‌ 'ರಾಗಿಣಿ ಎಂದು ಅವರನ್ನು ಪಕ್ಷದ ಪರ ಪ್ರಚಾರಕ್ಕೆ ಕರೆಸಿದ್ದೆವು. ಅವರು 'ಡ್ರಗ್ಸ್ ಹುಡುಗಿ' ಎನ್ನುವುದು ಗೊತ್ತಿರಲಿಲ್ಲ ಎಂದಿದ್ದಾರೆ.


ರಾಗಿಣಿ ಬಿಜೆಪಿಯವರೇ ಎನ್ನುವ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ‌, 'ರಾಗಿಣಿ ಅವರನ್ನು ಪಕ್ಷದ ಪರ ಪ್ರಚಾರ ಮಾಡುವುದಕ್ಕೆ ಮಾತ್ರ ಕರೆಸಿದ್ದೆವು'.  ರಾಗಿಣಿ ಬಿಜೆಪಿ ಪರ ಪ್ರಚಾರ ಮಾಡಿದ್ದರಿಂದ ಬಿಜೆಪಿ ನಾಯಕರ ಜೊತೆ ಇರುವ ಫೋಟೋಗಳಿವೆ. ಅವರು ಡಿ.ಕೆ. ಶಿವಕುಮಾರ್ ಜೊತೆಗಿರುವ ಫೋಟೋವೂ ಇದೆ. ಅಷ್ಟೇ ಏಕೆ ನನ್ನ ಜೊತೆಗೂ ಫೋಟೋ ಇರಬಹುದು ಎಂದರು.


ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಪುತ್ರ ಬಿ.ವೈ. ವಿಜಯೇಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿಯವರೇ  ಆರೋಪ ಮಾಡುತ್ತಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ‌ 'ಬಿಜೆಪಿಯವರೇಕೆ ಆರೋಪ ಮಾಡುತ್ತಾರೆ? ಎಂದು ಹೇಳಿ ಜಾರಿಕೊಂಡರು.


ನಿಮ್ಮ ಸ್ನೇಹಿತರು ಅಧಿವೇಶನದ ಒಳಗೆ ಮಂತ್ರಿ ಆಗುತ್ತಾರಾ ಎಂಬ ಪ್ರಶ್ನೆಗೆ 'ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ತೀರ್ಮಾನ ಮಾಡ್ತಾರೆ. ಅವರು ಕಾಯಬೇಕು, ನಾವು ಎಷ್ಟು ತಿಂಗಳು ಕಾಯ್ದಿದ್ದೇವೆ ಹೇಳಿಮ. ಬೈ ಎಲೆಕ್ಸನ್ ಆಯ್ತು. ಅದಾದಮೇಲೂ‌  ಕಾದಿದ್ದೇವೆ ಎಂದರು.