ಬೆಂಗಳೂರು: ಟಿಪ್ಪು ಸುಲ್ತಾನ್  ಜಯಂತಿ ಆಚರಣೆ ಹಿನ್ನಲೆಯಲ್ಲಿ ಬಂದಂತಹ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತ್ಯತೀತತೆ ವಿಷಯದಲ್ಲಿ ನಾನು ರಾಜಿಮಾಡಿಕೊಳ್ಳಲಾರೆ. ಅಧಿಕಾರ ಇರುತ್ತೆ, ಹೋಗುತ್ತೆ. ಐ ಡೋಂಟ್ ಕೇರ್ ಎಂದು ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ವಿಧಿವಿಶವರಾದ ಗದುಗಿನ ತೋಂಟದಾರ್ಯ ಮಹಾಸ್ವಾಮಿಗಳ ಕುರಿತಾಗಿ ಹಲವು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ "ವೈಯಕ್ತಿಕವಾಗಿ ನಾನು ಅತ್ಯಂತ ಗೌರವದಿಂದ ಕಾಣುತ್ತಿದ್ದ ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿಗಳನ್ನು ಹಲವಾರು ಬಾರಿ ಭೇಟಿ ಮಾಡಿದ್ದೇನೆ. ಅವರ ಜ್ಞಾನ, ಅಧ್ಯಯನ, ವೈಚಾರಿಕ ಸ್ಪಷ್ಟತೆಗೆ ಮಾರುಹೋಗಿದ್ದೇನೆ. ಅವರ ಸಾವು ವೈಯಕ್ತಿಕವಾಗಿ ನನಗೂ ಆಗಿರುವ ನಷ್ಟ ಎಂದು ವಿಷಾದ ವ್ಯಕ್ತಪಡಿಸಿದರು. 



ಇನ್ನೊಂದು ಟ್ವೀಟ್ ವೊಂದರಲ್ಲಿ  ತಮ್ಮ ಜ್ಯಾತ್ಯಾತೀತ ಸಿದ್ದಾಂತದ ಬಗೆಗಿರುವ ಬದ್ದತೆ ಬಗ್ಗೆ ತಿಳಿಸಿರುವ ಅವರು "ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವೊಮ್ಮೆ ರಾಜಿಮಾಡಿಕೊಳ್ಳ
ಬೇಕಾಗುತ್ತದೆ, ನಾನೂ ಮಾಡಿರಬಹುದು. ಆದರೆ ಜಾತ್ಯತೀತತೆಯಂತಹ ಮೂಲಭೂತದ ಸಿದ್ಧಾಂತದ ವಿಷಯದಲ್ಲಿ ನಾನು ರಾಜಿಮಾಡಿಕೊಳ್ಳಲಾರೆ. ಅಧಿಕಾರ ಇರುತ್ತೆ, ಹೋಗುತ್ತೆ. I don't care" ಎಂದು ತಿಳಿಸಿದ್ದಾರೆ.



ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಐದು ವರ್ಷಗಳ  ಅಧಿಕಾರವಧಿಯನ್ನು ಪೂರೈಸಿದ ಮೊದಲ ಹಿಂದುಳಿದ ವರ್ಗದ ಮುಖ್ಯಮಂತ್ರಿ ಎನ್ನುವ ಖ್ಯಾತಿಗೆ ಒಳಗಾಗಿದ್ದರು. ಮೊದಲು ತಾವು ಅಧಿಕಾರದಲ್ಲಿದ್ದಾಗ  ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಸರ್ಕಾರದ ಮೂಲಕ ಆಚರಿಸಿದ್ದರು.ಆದರೆ ಅದಕ್ಕೆ ಬಿಜೆಪಿ ಪಕ್ಷವು ಪ್ರತಿರೋಧ ವ್ಯಕ್ತ ಪಡಿಸುತ್ತಿರುವ ಹಿನ್ನಲೆಯಲ್ಲಿ ಈಗ ಅವರು ತಮ್ಮ ಜ್ಯಾತ್ಯಾತೀತತೆ ಕುರಿತಾದ ಬದ್ದತೆಯ ಕುರಿತು ಸ್ಪಷ್ಟಪಡಿಸಿದ್ದಾರೆ.



\