ಬೆಂಗಳೂರು: ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ, ಅಶೋಕ್ ಅವರ ಅಧ್ಯಯನ ಏನು ಎಂದು ಗೊತ್ತಿಲ್ಲ ಅವರು ಏನು ಹೇಳಿದ್ದಾರೆ, ಎನ್ನುವುದು ಕೂಡ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Basavaraj Bommai : ಶ್ರೀಶೈಲದಲ್ಲಿ ಕರ್ನಾಟಕ ಭಕ್ತಾದಿಗಳಿಗೆ ರಕ್ಷಣೆ ನೀಡುವಂತೆ ಆಂಧ್ರ ಸಿಎಂಗೆ ಸಿಎಂ ಬೊಮ್ಮಾಯಿ ಮನವಿ


ಹಲಾಲ್ ವಿಚಾರವಾಗಿ ಬಿಜೆಪಿ ಜಗನ್ನಾಥ ಭವನದಲ್ಲಿ ಮಾತನಾಡಿದ ಸಿ.ಟಿ ರವಿ 'ಹಲಾಲ್ ಯಾರು ಪ್ರಾರಂಭಿಸಿದ್ರು, ಯಾಕೆ ಪ್ರಾರಂಭಿಸಿದ್ರು,ಇದು ಆರ್ಥಿಕ ಜಿಹಾದ್ ಅಂತ ಸೂಟ್ ಆಗುತ್ತೆ. ಒಂದು ಪ್ರಾಡಕ್ಟ್ ಗುಣಮಟ್ಟ ಪರೀಕ್ಷಿಸಿ ISI ಸರ್ಟಿಫಿಕೇಟ್ ಕೊಡ್ತಾರೆ.ಹಲಾಲ್ ಸರ್ಟಿಫಿಕೇಟ್ ಕೊಡೋದು ಯಾರು.?ಸರ್ಕಾರಾನಾ, ಇಲಾಖೆನಾ, ಪ್ಯೂರಿಟಿಗೆ ಕೊಡುವ ಸರ್ಟಿಫಿಕೇಟಾ.? ಪ್ಯೂರಿಟಿ ಇದ್ರೆ, ಹಲಾಲ್ ಬಗ್ಗೆ ಮಾತನಾಡಲು ಯಾರೂ ಹೋಗಬೇಡಿ, ಹರಾಮ್ ಆಗುತ್ತೆ ಅಂತ ನಾನೇ ಮನವಿ ಮಾಡ್ತೀನಿ.ಸರ್ಟಿಫಿಕೇಟ್ ಹಾಕೊಂಡ್ರೆ ಮಾತ್ರ ಜಾತ್ಯಾತೀತ ಆಗ್ತಾರಾ.?ಯಾರಾದ್ರೂ ಬುದ್ಧಿಜೀವಿಗಳು ಈ ಬಗ್ಗೆ ಹೇಳಿದ್ರೆ ಕೇಳ್ತೀನಿ.ದೆ ಆಲ್ ಮೈ ಬ್ರದರ್ ಅಂತ ಹೇಳುವವರೂ ಹಲಾಲ್ ಬಗ್ಗೆ ಬೆಳಕು ಚೆಲ್ಲಲಿ ಎಂದು ಕಿಡಿಕಾರಿದರು.


ಇದನ್ನೂ ಓದಿ: ‘ಜನರು ತಿರಸ್ಕರಿಸುವ ಭಯವನ್ನು ಮತಯಂತ್ರದ ಮೇಲೆ ಹಾಕುವುದೇಕೆ?’


ಕಿರಣ್ ಮಜುಂದಾರ್ ಶಾ (Kiran Mazumdar-Shaw) ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ.ರವಿ "ಅವರು ಹೇಳಿದ್ದು ಸರಿ ಇದೆ,ಕೋಮುವಾದ ಬರಬಾರದು.ಆದ್ರೆ ಅದೇ ರೀತಿ ಹಲಾಲ್ ಕ್ವಾಲಿಟಿಗಾ ?ಹಲಾಲ್ ಸೀಲ್ ಕ್ವಾಲಿಟಿಗೆ ಎನ್ನೋದಾದರೆ ನಾನು ವಿಷಾದ ವ್ಯಕ್ತಪಡಿಸ್ತೇನೆ ಎಂದರು.ಹಲಾಲ್ ಮನೆಯಲ್ಲಿ ಇಟ್ಟುಕೊಳ್ಳಲಿ,ಸೀಲ್ ಹಾಕಿ ಮಾರ್ಕೆಟ್ ನಲ್ಲಿ ಇಡೋದು ಮತೀಯವಾದದ ಪ್ರತೀಕವಾಗಬಹುದಲ್ಲಾ?ನಾಳೆ ಇನ್ನೊಬ್ಬ ಇನ್ನೊಂದು ಸೀಲ್ ಹಾಕಿ ಮಾರಾಟ ಮಾಡಿದರೆ ಅದೂ ಮತೀಯವಾದವಾಗಬಹುದಲ್ಲಾ? ಹಿಂದೂ ಹೆಣ್ಣುಮಕ್ಕಳನ್ನು ಮುಸ್ಲಿಂ ಹುಡುಗರು ಮದುವೆಯಾದರೆ ಅದು ಅವರ ಆಯ್ಕೆ.ಅದೇ ಹಿಂದೂ ಹುಡುಗ ಮುಸ್ಲಿಂ ಹೆಣ್ಣು ಮಕ್ಕಳನ್ನು ಮದುವೆಯಾದರೆ ಮರ್ಡರ್ ಮಾಡಿಬಿಡುತ್ತಾರೆ.


ಇದನ್ನೂ ಓದಿ: ಮೀಸಲಾತಿ ಕಲ್ಪಿಸದೆ ಚುನಾವಣೆ ನಡೆಸಿದರೆ ಒಬಿಸಿ ಸಮುದಾಯಕ್ಕೆ ಅನ್ಯಾಯ : ಸಿದ್ದರಾಮಯ್ಯ


ಹಿಂದೂ ಹುಡುಗಿ ಮುಸ್ಲಿಂ ಮದುವೆಯಾದರೆ ಮತಾಂತರವಾಗಬೇಕು,ಮುಸ್ಲಿಂ ಹುಡುಗಿ ಹಿಂದೂ ಮದುವೆಯಾದರೆ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಬೇಕು.ಈ ವನ್ ವೇ ಯಾಕೆ? ಟೂ ವೇ ಇರಲಿ,ಕಾಂಗ್ರೆಸ್ ನವರ ತಾಕತ್ ಉತ್ತರ ಪ್ರದೇಶದಲ್ಲಿ ಬೇರೆ ಕಡೆ ನೋಡಿದ್ದೇವೆ ಎಂದು ಅವರು ಪ್ರಶ್ನಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.