ಬೆಂಗಳೂರು: ನಾನು ಕ್ರಿಕೆಟ್ ಆಡುವುದಿಲ್ಲ. ಆದರೆ ಕ್ರಿಕೆಟ್ ವೀಕ್ಷಕ. ಟೆಸ್ಟ್ ಪಂದ್ಯಾವಳಿಯನ್ನು ನೋಡಿ ಅಭ್ಯಾಸವಿದೆ. ಸಮಯವಿದ್ದರೆ ಬೆಂಗಳೂರಿನಲ್ಲಿ ಕ್ರಿಕೆಟ್ ನೋಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.


COMMERCIAL BREAK
SCROLL TO CONTINUE READING

ಅವರು ಇಂದು ವಿಶ್ವವಾಣಿ ಕನ್ನಡ ಪತ್ರಿಕೆಯ 9ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಅಂತರ್ ಮುದ್ರಣ ಮಾಧ್ಯಮ ವಿ ವಿ ಕಪ್- 2024 ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.


ಇದನ್ನೂ ಓದಿ: Chamarajanagar: ಪ್ರತ್ಯೇಕ ಅಪಘಾತ; ಮೂವರು ಸಾವು, 7 ಮಂದಿಗೆ ಗಂಭೀರ ಗಾಯ!


ಪ್ರತಿ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು.ಹೆಚ್ಚು ಜನಪ್ರಿಯವಾದ ಪಂದ್ಯ ಹಾಗೂ ಹೆಚ್ಚು ಶ್ರೀಮಂತ ಪಂದ್ಯವೆಂದು ಕ್ರಿಕೆಟ್ ಖ್ಯಾತಿ ಪಡೆದಿದೆ. ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಚಟುವಟಿಕೆ ಅಗತ್ಯ.


ಇದನ್ನೂ ಓದಿ: ಮುಸ್ಲಿಮರ ಓಲೈಕೆ, ಹಿಂದೂಗಳ ಕಡೆಗಣನೆ ನೋಡಿ ಶೆಟ್ಟರ್ ʼಕೈʼ ಬಿಟ್ಟರು


ಸೋಲು ಗೆಲುವು ಯಾವುದೇ ಪಂದ್ಯದಲ್ಲಿ ಸಹಜ. ಗೆದ್ದವರಿಗೂ, ಸೋತವರಿಗೂ ಶುಭಾಶಯ ಹೇಳಬೇಕು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಆರು ತಂಡಗಳಿಗೂ ಅಭಿನಂದನೆಗಳು.ವಿಶ್ವೇಶ್ವರ ಭಟ್ ಅವರು ಸ್ವಂತ ಪತ್ರಿಕೆ ಪ್ರಾರಂಭಿಸಿ ಒಂಭತ್ತು ವರ್ಷಗಳಾಗಿವೆ. ಅದರ ಭಾಗವಾಗಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದ್ದು, ಇದನ್ನು ಉದ್ಘಾಟಿಸಲು ಆಹ್ವಾನ ನೀಡಿದ್ದಕ್ಕಾಗಿ ಧನ್ಯವಾದಗಳು.


ವಿಶ್ವವಾಣಿ ಪತ್ರಿಕೆ ಸಂಪಾದಕ, ವಿಶ್ವೇಶ್ವರ ಭಟ್, ಶಾಸಕರಾದ ಪ್ರದೀಪ್ ಈಶ್ವರ್, ಪಿ.ಇ.ಎಸ್ ವಿದ್ಯಾಸಂಸ್ಥೆಯ ಕುಲಪತಿ ಸೂರ್ಯಪ್ರಸಾದ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.