ಶಾಲಾ ಮಕ್ಕಳ ಸಂಭ್ರಮ ಕಂಡು ನನ್ನಲ್ಲಿ ನವಚೈತನ್ಯ ಮೂಡಿದೆ- ಬಿಎಸ್ವೈ
ಯಡಿಯೂರಿನಿಂದ ತುರುವೆಕೆರೆಗೆ ಹೋರಟ ಪರಿವರ್ತನಾ ಯಾತ್ರೆಗೆ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರಿಗೆ ಶಾಲಾ ಮಕ್ಕಳು ಶುಭಾಶಯ ಕೋರಿದ್ದಾರೆ. ಆ ಮಕ್ಕಳ ಸಂಭ್ರಮ ಕಂಡು ನನ್ನಲ್ಲಿ ನವ ಚೈತನ್ಯ ಮೂಡಿದೆ ಎಂದು ಬಿಎಸ್ವೈ ತಿಳಿಸಿದ್ದಾರೆ.
ಯಡಿಯೂರಿನ ಸಿದ್ದಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ ಬಿಜೆಪಿಯ ಎರಡನೇ ದಿನದ ಪರಿವರ್ತನಾ ಯಾತ್ರೆಗೆ ಬಿ.ಎಸ್. ಯಡಿಯೂರಪ್ಪ ಮತ್ತು ತಂಡ ಹೊರಡುವ ಸಂದರ್ಭದಲ್ಲಿ ಶ್ರೀ ಭಕ್ತನಾಥ ಸ್ವಾಮಿ ಶಾಲೆಯ ಮಕ್ಕಳು ಸಡಗರ ಸಂಭ್ರಮದಿಂದ ಬಿಜೆಪಿ ಪರಿವರ್ತನಾ ಯಾತ್ರೆಗೆ ಶುಭಕೋರಿದ್ದಾರೆ. ಅವರ ಸಂತೋಷದ ಪರಿಯನ್ನು ಕಂಡು ನನ್ನಲ್ಲಿ ನವಚೈತನ್ಯ ಮೂಡಿದಂತಿದೆ ಎಂದು ಬಿಎಸ್ವೈ ಟ್ವೀಟ್ ಮಾಡಿದ್ದಾರೆ.
ಶಾಲಾ ಮಕ್ಕಳು ಬಿಎಸ್ವೈಗೆ ಶುಭ ಕೋರುವ ಸಂದರ್ಭದಲ್ಲಿ ಬಿಜೆಪಿ ನಾಯಕ ನೆಲ ನರೇಂದ್ರಬಾಬು ಕೂಡ ಜೊತೆಗಿದ್ದರು.