ಧಾರವಾಡ: ದೇಶದ ಗಡಿಯಲ್ಲಿ ಎಷ್ಟು ಕಷ್ಟ ಇದೆ ಎಂದು ನನಗೆ ಗೊತ್ತು. ಭಾರತ ಮತ್ತು ಪಾಕ್‌ ಯುದ್ಧದಲ್ಲಿ ನಾನೂ ಭಾಗಿಯಾಗಿದ್ದೆ. ನನ್ನ ಜತೆ ಇದ್ದ ಕೆಲ ಯೋಧರು ಹುತಾತ್ಮರಾದರು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದರು.


COMMERCIAL BREAK
SCROLL TO CONTINUE READING

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾರ್ಗಿಲ್‌ ಸ್ತೂಪಕ್ಕೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಯುದ್ಧದಲ್ಲಿ ನಾನು ಉಳಿದಾಗ ಅದು ನನ್ನ ಪುನರ್ಜನ್ಮ ಎಂದುಕೊಂಡೆ. ಅಂದೇ ನಾನು ನನ್ನ ಪುನರ್ಜನ್ಮವನ್ನು ಸಮಾಜಕ್ಕೆ ಅರ್ಪಿಸಬೇಕು ಎಂದು ಸಂಕಲ್ಪ ಮಾಡಿದೆ. ಅದಕ್ಕಾಗಿಯೇ ನಾನು ಮದುವೆಯಾಗಲಿಲ್ಲ ಎಂದರು.


ನನ್ನ ಸೋದರರ ಮಕ್ಕಳ ಹೆಸರೂ ಕೂಡ ನನಗೆ ಗೊತ್ತಿಲ್ಲ. ಯಾಕೆಂದರೆ ನಾನು ಮನೆಗೆ ಹೋಗಿ ಬಹಳ ವರ್ಷಗಳಾಯಿತು. ಭಾರತ ಪಾಕಿಸ್ತಾನ ವಿರುದ್ಧದ ಯುದ್ಧದ ಬಳಿಕ ದೇಶದೊಳಗೆ ಉಳಿದಿರುವ ವೈರಿಗಳ ವಿರುದ್ಧ ಯುದ್ಧ ನಡೆದಿದೆ. ಜೈಲಿಗೆ ಹೋಗುವುದು ನನಗೊಂದು ಅಲಂಕಾರವಿದ್ದಂತೆ ಎಂದು ತಿಳಿಸಿದರು.