ಚಾಮರಾಜನಗರ: ನಾನೇ ನನ್ನ ವಿರುದ್ಧ ಘೋಷಣೆ ಕೂಗಿಸಿಕೊಂಡು ಸಚಿವ ಸಂಪುಟದಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದೆ ಎಂದು ಸಚಿವ ಎಚ್.ಸಿ.ಮಹಾದೇವಪ್ಪ ಹಳೇ ಗುಟ್ಟೊಂದನ್ನು ರಟ್ಟು ಮಾಡಿದರು.


COMMERCIAL BREAK
SCROLL TO CONTINUE READING

ಚಾಮರಾಜನಗರದಲ್ಲಿ ನಡೆದ ಭೀಮ‌ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, 1998 ರಲ್ಲಿ ಇಪ್ಪತ್ತು ಸಾವಿರ ಬ್ಯಾಕ್ ಲಾಗ್ ಹುದ್ದೆ ತುಂಬಿಸುವ ಸಂದರ್ಭದಲ್ಲಿ ನನ್ನ ಮನೆ ಮುಂದೆ ದಿಕ್ಕಾರ ಕೂಗಿಸಿದ್ದೆ. ನನ್ನ ಮನೆ ಮುಂದೆ ಕುಳಿತು ಎಚ್.ಸಿ. ಮಹದೇವಪ್ಪ ರಿಗೆ ದಿಕ್ಕಾರ ಕೂಗಿ ಅಂತ ಹೇಳುತ್ತಿದ್ದೆ,  ಆಮೇಲೆ ಕ್ಯಾಬಿನೆಟ್ ನಲ್ಲಿ ನನ್ನ ವಿರುದ್ಧ ದಿಕ್ಕಾರ ಕೂಗುತ್ತಿದ್ದಾರೆ ಎಂದು ಹೇಳಿ ಅಪ್ರುವಲ್ ಮಾಡಿಸುತ್ತಿದ್ದೆ,ಈ ಗುಟ್ಟನ್ನು ನಾನು ಈಗ ಇಲ್ಲಿ  ಹೇಳುತ್ತಿದ್ದೇನೆ ಎಂದರು.


ಇದನ್ನೂ ಓದಿ: ಕಾವೇರಿ ಸೇರಿದಂತೆ ಜಲ ವಿವಾದ, ಅಣೆಕಟ್ಟೆಗಳ ನೀರು ಪರಿಸ್ಥಿತಿ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ..!


ಎಚ್. ಸಿ. ಮಹದೇವಪ್ಪ, ಸಿದ್ದರಾಮಯ್ಯ , ಸತೀಶ್ ಜಾರಕಿಹೊಳಿ ಇರುವವರಗೆ  ಎಸ್ ಇ ಪಿ  ಹಾಗೂ ಟಿ ಎಸ್ ಪಿ ಹಣದಲ್ಲಿ ಒಂದು ರೂಪಾಯಿಯೂ ದುರುಪಯೋಗವಾಗಲು ಬಿಡಲ್ಲ, ಎಸ್ಸಿ ಎಸ್ಟಿ ಹುಡುಗರಿಗೆ ಸುಮ್ಸುಮ್ನೆ ಕಂಟ್ರಾಕ್ಟರ್ ಲೈಸೆನ್ಸ್ ಕೊಟ್ಟಿಲ್ಲ,  ಬೇರೆ ಬೇರೆ ಕಂಟ್ರಾಕ್ಟರ್ ಗಳು ಜೇಬು ತುಂಬಾ ದುಡ್ಡು ಇಟ್ಟುಕೊಳ್ಳುತ್ತಿದ್ದರು.ಆದರೆ, ನಮ್ಮವರಿಗೆ ಊಟ ಮಾಡೋಕೆ ದುಡ್ಡು ಇರುತ್ತಿರಲಿಲ್ಲ ಅವರ ಜೇಬು ಖಾಲಿ ಇರ್ತಿತ್ತು. ಅದಕ್ಕೆ ಕಂಟ್ರಾಕ್ಟರ್ ಮೀಸಲಾತಿ ತಂದೆವು ಎಂದು ಹೇಳಿದರು.


ಇದನ್ನೂ ಓದಿ: ಬೀದರ್ ಬೆಂಗಳೂರು ನಡುವೆ ಸಂಚರಿಸುವ 'ಸ್ಟಾರ್ ಏರ್', ಈಗ ದಿನ ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಲಭ್ಯ!


ಅಂಬೇಡ್ಕರ್ ಸಿದ್ದಾಂತವನ್ನು ಪ್ರಚಾರ ಮಾಡಬೇಕು. ಬಲವಾದ ಅಂಬೇಡ್ಕರ್ ವಾದ ಬೇಕು, ದೇಶದ ಸಂವಿಧಾನ ರಕ್ಷಣೆ ನಮ್ಮ ಮೇಲಿದೆ,  ಸಂವಿಧಾನ ರಕ್ಷಣೆ ಆದರೆ ನಾವು ರಕ್ಷಣೆಯಾಗುತ್ತೇವೆ .ಅದಕ್ಕಾಗಿ ಒಗ್ಗಟ್ಟು ಆಗಬೇಕು ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.