ನವದೆಹಲಿ: ಇತ್ತೀಚಿಗೆ ಕಾರ್ಯಕ್ರಮದಲ್ಲಿ ಸಮ್ಮಿಶ್ರ ಸರ್ಕಾರ ವಿಚಾರವಾಗಿ ಅಸಮಾಧಾನ ಸೂಚಿಸುತ್ತಾ ವಿಷಕಂಠನಾಗಿ ತಾವು ಎಲ್ಲ ನೋವುಗಳನ್ನು ನುಂಗುತ್ತಿದ್ದೇನೆ ಎಂದು ಹೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ ಅವರು "ಕಣ್ಣೀರು ಹಾಕಿದ್ದು  ನನ್ನ ಕುಟುಂಬದೊಳಗೆ ಮೊನ್ನೆ ನಡೆದ ಸಭೆ ಅದು ನನ್ನ ಕುಟುಂಬದ ಸಭೆ ಅದರಲ್ಲಿ ಕೆಲವೊಂದು ಕಷ್ಟಗಳನ್ನು  ಹಂಚಿಕೊಂಡಿದ್ದೆನೆ ಎಂದು ಅವರು ತಿಳಿಸಿದರು. ತಾವು  ಭಾವನಾತ್ಮಕ ಜೀವಿಯಾಗಿರುವುದರಿಂದ ಕಷ್ಟದ ಪರಿಸ್ಥಿತಿ ನೆನೆದು ಭಾವುಕನಾಗಿದ್ದು ನಿಜ, ಆದರೆ ತಾವು ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿಲ್ಲ" ಎಂದು ಸ್ಪಷ್ಟ ಪಡಿಸಿದರು. ಅಲ್ಲದೆ ಕಾಂಗ್ರೆಸ್ ಪಕ್ಷದ ಕುರಿತು ಸಹ ಯಾವುದೇ ಅಪಾದನೆ ಮಾಡಿಲ್ಲ ಎಂದು ಅವರು ತಿಳಿಸಿದರು.


ಇದೆ ವೇಳೆ ಸಂಸದರಿಗೆ ಐಪೋನ್ ನೀಡುವ ವಿಚಾರವಾಗಿ ಪ್ರಸ್ತಾಪಿಸಿದ ಕುಮಾರಸ್ವಾಮಿ ಈ ವಿಚಾರ ತಮಗೆ ತಿಳಿದಿಲ್ಲ, ರಾಜ್ಯ ಸರ್ಕಾರದ ಪರವಾಗಿ ಯಾರು ಪೋನ್ ಕೊಡ್ತಿಲ್ಲ ಮತ್ತು ಕೊಡಲು ತಾವು ಯಾರಿಗೂ ಸೂಚಿಸಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕ್ರಮತೆಗೆದುಕೊಳ್ಳುವುದರ ಬಗ್ಗೆ ತಿಳಿಸುತ್ತೇನೆ ಎಂದರು.