ಈಶ್ವರಪ್ಪನವರ ಮನೆಗೆ ನಾನೇ ಹೋಗ್ತೇನೆ, ಅವರೇ ನನಗೆ ಗುಂಡಿ ಹೊಡೆಯಲಿ!: ಡಿ.ಕೆ.ಸುರೇಶ್
ಇಂತಹ ಹೇಳಿಕೆ ನೀಡುವ ಮೂಲಕ ಬಡವರ ಮಕ್ಕಳನ್ನು ಯಾಕೆ ಬಾವಿಗೆ ತಳ್ಳುತ್ತೀರಿ. ಒಂದು ವಾರದಲ್ಲಿ ಯಾವಾಗ ಎಂದೂ ಸಹ ಹೇಳುತ್ತೇನೆ. ನಾನೇ ಈಶ್ವರಪ್ಪನವರ ಮನೆಗೆ ಹೋಗುತ್ತೇನೆ. ಅವರೇ ನನಗೆ ಗುಂಡು ಹೊಡೆಯಲಿ ಎಂದು ಡಿ.ಕೆ.ಸುರೇಶ್ ಸವಾಲು ಹಾಕಿದ್ದಾರೆ.
ಬೆಂಗಳೂರು: ಕೆ.ಎಸ್.ಈಶ್ವರಪ್ಪನವರ ಮನೆಗೆ ನಾನೇ ಹೋಗುತ್ತೇನೆ. ಅವರೇ ನನಗೆ ಗುಂಡು ಹೊಡೆಯಲಿ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಸವಾಲು ಹಾಕಿದ್ದಾರೆ. ಫೆಬ್ರವರಿ 8ರಂದು ದಾವಣಗೆರೆಯಲ್ಲಿ ನಡೆದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆ.ಎಸ್.ಈಶ್ವರಪ್ಪ, ʼದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇನೆ' ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು.
ಈಶ್ವರಪ್ಪನವರ ಹೇಳಿಕೆಗೆ ಶನಿವಾರ ಪ್ರತಿಕ್ರಿಯಿಸಿದ ಸುರೇಶ್, ʼಮಹಾತ್ಮ ಗಾಂಧೀಜಿಯವರನ್ನು ಕೊಂದ ಪಕ್ಷ ಅವರದ್ದು. ನಾನೊಬ್ಬ ಸಣ್ಣ ವ್ಯಕ್ತಿ. ಕನ್ನಡಿಗರ ಪರ ಮಾತನಾಡಿದ್ದಕ್ಕೆ ಹೀಗೆ ಹೇಳಿರಬಹುದು' ಅಂತಾ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಯಶವಂತಪುರ ಪೋಲೀಸ್ ಠಾಣೆಗೆ ಈಶ್ವರಪ್ಪ ವಿರುದ್ದ ದೂರು ದಾಖಲು
ʼಇಂತಹ ಹೇಳಿಕೆ ನೀಡುವ ಮೂಲಕ ಬಡವರ ಮಕ್ಕಳನ್ನು ಯಾಕೆ ಬಾವಿಗೆ ತಳ್ಳುತ್ತೀರಿ. ನಾನೇ ಸಮಯ ಕೊಡುತ್ತೇನೆ. ಒಂದು ವಾರದಲ್ಲಿ ಯಾವಾಗ ಎಂದೂ ಸಹ ಹೇಳುತ್ತೇನೆ. ನಾನೇ ಈಶ್ವರಪ್ಪನವರ ಮನೆಗೆ ಹೋಗುತ್ತೇನೆ. ಅವರೇ ನನಗೆ ಗುಂಡು ಹೊಡೆಯಲಿ. ಬಡವರ ಮಕ್ಕಳನ್ನು ಅವರು ರೊಚ್ಚಿಗೆಬ್ಬಿಸುವುದು ಬೇಡ. ಅವರೇ ಆ ಕೆಲಸ ಮಾಡಲಿ. ಪಕ್ಷದಲ್ಲಿ ಈಶ್ವರಪ್ಪರನ್ನು ಮೂಲೆಗುಂಪು ಮಾಡಿದ್ದಾರೆ. ಗಮನ ಸೆಳೆಯಲು ಈ ರೀತಿ ಮಾತನಾಡುತ್ತಿದ್ದಾರೆ' ಅಂತಾ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ.
ಕೆ.ಎಸ್.ಈಶ್ವರಪ್ಪ ಹೇಳಿದ್ದೇನು..?
ದಾವಣಗೆರೆಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆ.ಎಸ್.ಈಶ್ವರಪ್ಪ, 'ಸಂಸದ ಡಿ.ಕೆ.ಸುರೇಶ್, ಶಾಸಕ ವಿನಯ ಕುಲಕರ್ಣಿ ಇಬ್ಬರೂ ದೇಶದ್ರೋಹಿಗಳು. ಇಬ್ಬರನ್ನೂ ಪಕ್ಷದಿಂದ ಕಿತ್ತು ಬಿಸಾಕಬೇಕು. ಅವರಂತೆ ದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇನೆ. ಈ ರೀತಿಯ ದೇಶ ವಿಭಜನೆ ಎಂಬುದು ಜವಾಹರಲಾಲ್ ನೆಹರು ಕಾಲದಿಂದಲೂ ಬಂದಿದೆ' ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಡಿಕೆ ಸುರೇಶ್‌ಗೆ ಗುಂಡಿಕ್ಕಿ ಕೊಲ್ಲಿ ಎಂಬ ಈಶ್ವರಪ್ಪ ಹೇಳಿಕೆ ವಿಚಾರ
ಈ ವಿವಾದಾತ್ಮಕ ಹೇಳಿಕೆ ಬಳಿಕ ಈಶ್ವರಪ್ಪ ವಿರುದ್ಧ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ʼರಾಷ್ಟ್ರದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ ಎಂದಿರುವ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ತಾಕತ್ತಿದ್ದರೆ ನನ್ನ ವಿರುದ್ಧ ಕೇಸು ದಾಖಲಿಸಲಿʼ ಅಂತಾ ಈಶ್ವರಪ್ಪ ಸವಾಲು ಹಾಕಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.