ಹುಬ್ಬಳ್ಳಿ : ಕಾಂಗ್ರೆಸ್ ನವರು ಇನ್ನು ಮುಂದೆ ಕಿವಿ ಮೇಲೆ ಹೂವಿಟ್ಟುಕೊಂಡ ಅಡ್ಡಾಡಬೇಕಾಗುತ್ತೆ ಎಂದು ಕೇಂದ್ರ ಕಲ್ಲಿದ್ದಲು ಗಣಿ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು‌.


COMMERCIAL BREAK
SCROLL TO CONTINUE READING

ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಇಡೀ ದೇಶದಲ್ಲಿ ಕಾಂಗ್ರೆಸ್ ಜನರಿಂದ ತಿರಸ್ಕೃತಗೊಂಡಿದ್ದು ಅಷ್ಟಿದ್ದರೂ ಕಾಂಗ್ರೆಸ್ ನವರು ಬಜೆಟ್ ಮಂಡನೆ ವೇಳೆ ಕಿವಿಯಲ್ಲಿ ಹೂವಿಟ್ಟುಕೊಂಡು ಸದನಕ್ಕೆ ಬಂದಿದ್ದಾರೆ. ಎಲ್ಲ ಕಡೆ ಜನ ಈಗಾಗಲೇ ಹೂವಿಟ್ಟಿದ್ದು  ಇನ್ನು ಮುಂದು ತಾವಾಗಿಯೇ ಹೂವಿಟ್ಟುಕೊಂಡು ಅಡ್ಡಾಡೋ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು. ಜವಾಹರಲಾಲ್  ನೆಹರೂ ನಿಧನದ ನಂತರ ಅವರ ಹೆಸರಲ್ಲಿ ಇಂದಿರಾ ಅಧಿಕಾರಕ್ಕೆ ಬಂದರು. ಇಂದಿರಾಗಾಂಧಿ ಸಾವಿನ‌ ನಂತರ ಅವರ ಹೆಸರಲ್ಲಿ ಗದ್ದುಗೆ ಹಿಡಿದರು ಹೀಗೇ ನೋಡಿದರೆ ಸ್ವಂತ ಶಕ್ತಿಯ ಮೇಲೆ ಎಂದೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ   ಈಗ ಅದು  ಅಧಿಕಾರ ಕಳೆದುಕೊಂಡು ಪರಿತಪಿಸ್ತಾ ಹೀಗೆ ಮಾಡ್ತಿದೆ ಜೋಶಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. 


ಇದನ್ನೂ ಓದಿ :  B Sriramulu : ಫೆ.23 ಕ್ಕೆ ಸಂಡೂರಿಗೆ ಅಮಿತ್ ಶಾ ಭೇಟಿ : ಕಲ್ಯಾಣ ಕರ್ನಾಟಕ ನಾಯಕರ ಜೊತೆ ಸಭೆ


ಪೇಶ್ವೆ ಮೂಲದವರನ್ನು ಸಿಎಂ ಮಾಡಲು ಹೊರಟಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನಾನು ಕುಮಾರಸ್ವಾಮಿ ಹೇಳಿಕೆ ಕುರಿತು ಹೆಚ್ಚಿಗೆ ಏನು ಮಾತನಾಡಲಾರೆ. ಇಂತಹ ಅಪ್ರಬುದ್ಧ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ ಎಂದ ಅವರು ನರೇಂದ್ರ ಮೋದಿ ಅವರ ಕೈಕೆಳಗೆ ಕೆಲಸ ಮಾಡಲು ನನಗೆ ಅತ್ಯಂತ ಖುಷಿಯಿದೆ  ಅದು ನನ್ನ ಸೌಭಾಗ್ಯವೂ ಹೌದು. ನರೇಂದ್ರ ಮೋದಿಯಂತಹ ನಾಯಕರು ಸಿಗೋದು ಶತಮಾನಕ್ಕೊಬ್ಬರು ಎಂದು ಸಂತಸ ವ್ಯಕ್ತಪಡಿಸಿದ ಅವರು ನರೇಂದ್ರ  ಮೋದಿ ನೇತೃತ್ವದಲ್ಲಿ ಭಾರತ ನಂಬರ್ ಒನ್ ನತ್ತ ದಾಪುಗಾಲು ಹಾಕ್ತಿದೆ ಇದೊಂದು ಕ್ರಾಂತಿಕಾರಿ ಬದಲಾವಣೆ ಎಂದರು. ಇನ್ನು ಕಲ್ಲಿದ್ದಲು ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ ಇಡೀ ವಿಶ್ವವೇ ಮೋದಿಯನ್ನು ನಿಬ್ಬೆರಗಾಗಿ ನೋಡ್ತಿದೆ ಹೀಗಿರುವಾಗ ನಾನು ರಾಜ್ಯ ರಾಜಕಾರಣದತ್ತ ಬರೋಲ್ಲ. ಮುಖ್ಯಮಂತ್ರಿಯಾಗೋ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


ಇದನ್ನೂ ಓದಿ :  "ದೇವೇಗೌಡರನ್ನ ಇವರೆಲ್ಲಾ ಉತ್ಸವ ಮೂರ್ತಿ ಮಾಡ್ಕೊಂಬಿಟ್ರು" : ರೇವಣ್ಣ ವಿರುದ್ಧ ರಾಮಸ್ವಾಮಿ ‌ವಾಗ್ದಾಳಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.